Wednesday, June 24, 2026
Homeಕರಾವಳಿಮಂಗಳೂರುಮಂಗಳೂರು; 25 ಕ್ಕೂ ಹೆಚ್ಚು ಪ್ರಕರಣ ಆರೋಪಿ,  ನ್ಯಾಯಾಲಯಕ್ಕೆ ಹಾಜರಾಗದೇ ತಲೆ ಮರೆಸಿಕೊಂಡಿದ್ದ ಅಬ್ದುಲ್ ರವೂಫ್...

ಮಂಗಳೂರು; 25 ಕ್ಕೂ ಹೆಚ್ಚು ಪ್ರಕರಣ ಆರೋಪಿ,  ನ್ಯಾಯಾಲಯಕ್ಕೆ ಹಾಜರಾಗದೇ ತಲೆ ಮರೆಸಿಕೊಂಡಿದ್ದ ಅಬ್ದುಲ್ ರವೂಫ್ @ ಮೀಸೆ ರವೂಫ್ ಅರೆಸ್ಟ್

- Advertisement -
- Advertisement -

ಮಂಗಳೂರು; 25 ಕ್ಕೂ ಹೆಚ್ಚು ಪ್ರಕರಣ ಆರೋಪಿ,ನ್ಯಾಯಾಲಯಕ್ಕೆ ಹಾಜರಾಗದೇ ತಲೆ ಮರೆಸಿಕೊಂಡಿದ್ದ ಅಬ್ದುಲ್ ರವೂಫ್ @ ಮೀಸೆ ರವೂಫ್(48) ಎಂಬಾತನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಕಾಸರಗೋಡಿನ ಉಪ್ಪಳ ನಿವಾಸಿಯಾಗಿರುವ  ಅಬ್ದುಲ್ ರವೂಫ್   ಮೇಲೆ ಕೇರಳದ ಕಾಸರಗೋಡು ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಸುಮಾರು 19 ಪ್ರಕರಣಗಳು ದಾಖಲಾಗಿರುತ್ತದೆ ಮತ್ತು ಮಂಗಳೂರು ನಗರದ ಕಾವೂರು ಪೊಲೀಸ್ ಠಾಣೆಯಲ್ಲಿ   ಒಂದು ಪ್ರಕರಣ  ಹಾಗೂ ಕೋಣಾಜೆ  ಪೊಲೀಸ್ ಠಾಣೆಯಲ್ಲಿ 5 ಪ್ರಕರಣಗಳು  ಸೇರಿ ಒಟ್ಟು 25 ಪ್ರಕರಣಗಳು ದಾಖಲಾಗಿದ್ದು, ಕಾವೂರು ಠಾಣಾ ಪ್ರಕರಣದಲ್ಲಿ  ಮಾನ್ಯ ನ್ಯಾಯಾಲಯವು ದಸ್ತಗಿರಿ ವಾರಂಟ್ ಹೊರಡಿಸಿರುತ್ತದೆ ಹಾಗೂ ಕೋಣಾಜೆ  ಠಾಣಾ 5 ಪ್ರಕರಣಗಳಲ್ಲಿ  ಉದ್ಘೋಷಿತ ಅಪರಾಧಿ  ಎಂದು ನ್ಯಾಯಾಲಯವು  ಘೋಷಿಸಿರುತ್ತದೆ. ಮಂಜೇಶ್ವರ ಪೊಲೀಸ್ ಠಾಣಾ ಒಂದು ಪ್ರಕರಣದಲ್ಲಿ ನ್ಯಾಯಾಲಯವು ದಸ್ತಗಿರಿ ವಾರಂಟ್ ಹೊರಡಿಸಿರುತ್ತದೆ.

ಈತನು ಅಂತರಾಜ್ಯ ನಟೋರಿಯಸ್ ಕ್ರಿಮಿನಲ್ ಕೇರಳ ರಾಜ್ಯದ  ಉಪ್ಪಳ ಪೈವಳಿಕೆಯ ಇಸುಬು ಜಿಯಾದ್ @ ಜಿಯಾ ಎಂಬಾತನ ಸಹಚರನಾಗಿರುತ್ತಾನೆ.  ಈತನನ್ನು  ಉತ್ತರ ಉಪ ವಿಭಾಗದ ಎ.ಸಿ.ಪಿ ಯವರಾದ ಶ್ರೀ ಶ್ರೀಕಾಂತ. ಕೆ. ರವರ ನೇತೃತ್ವದ ತಂಡದವರಾದ ಶ್ರೀ ಚಂದ್ರಶೇಖರ್, ಎ.ಎಸ್.ಐ,  ಸಿಬ್ಬಂದಿಗಳಾದ ಹೆಚ್.ಸಿ .ರೆಜಿ ವಿ.ಎಂ , ದಾಮೋದರ.ಕೆ ಮತ್ತು ಹಾಲೇಶ್ ನಾಯ್ಕ್  ರವರು ಈ ದಿನ ದಿನಾಂಕ:16-12-2025  ರಂದು  ವಶಕ್ಕೆ ಪಡೆದು ಮುಂದಿನ ಕಾನೂನು ಕ್ರಮಕ್ಕಾಗಿ ಕಾವೂರು ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿರುತ್ತದೆ.  

- Advertisement -

Latest News

error: Content is protected !!