Wednesday, June 24, 2026
Homeಕರಾವಳಿಮಂಗಳೂರುಆರ್ ಎಸ್ ಎಸ್ ಶತಾಬ್ದಿ ಕಾರ್ಯದ ಅಂಗವಾಗಿ ಮನೆ ಮನೆ ಸಂಪರ್ಕ ಕಾರ್ಯಕ್ರಮದ ಪ್ರಯುಕ್ತ ಶ್ರೀ...

ಆರ್ ಎಸ್ ಎಸ್ ಶತಾಬ್ದಿ ಕಾರ್ಯದ ಅಂಗವಾಗಿ ಮನೆ ಮನೆ ಸಂಪರ್ಕ ಕಾರ್ಯಕ್ರಮದ ಪ್ರಯುಕ್ತ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ ಭೇಟಿ

- Advertisement -
- Advertisement -

ಧರ್ಮಸ್ಥಳ; ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಾಬ್ದಿ ಕಾರ್ಯದ ಅಂಗವಾಗಿ  ಮನೆಮನೆ ಸಂಪರ್ಕ ದ ಪ್ರಯುಕ್ತ ಶ್ರೀ ಕ್ಷೇತ್ರ ಧರ್ಮಸ್ಥಳದ ಡಾ. ಡಿ ವೀರೇಂದ್ರ ಹೆಗ್ಗಡೆ ಅವರನ್ನು ಸಂಘದ ಕರ್ನಾಟಕ ದಕ್ಷಿಣ ದ ಪ್ರಾಂತ ಕಾರ್ಯವಾಹ ಡಾ. ಜಯಪ್ರಕಾಶ್, ಪುತ್ತೂರು ಜಿಲ್ಲಾ ಸಂಘಚಾಲಕ್ ವಿನಯಚಂದ್ರ,  ಭೇಟಿ ಮಾಡಿ  ಸಂಘಟನೆ ಮತ್ತು ಸೇವೆಯ 100 ವರ್ಷಗಳ ಸಂಘ ಯಾತ್ರೆಯ ಬಗ್ಗೆ ತಿಳಿಸಿದರು. ಮತ್ತು ಸ್ವಯಂಸೇವಕರು ಸಮಾಜದ ಸಜ್ಜನಶಕ್ತಿಯ ಸಹಕಾರದೊಂದಿಗೆ ಪಂಚ ಪರಿವರ್ತನೆ ಯ ಐದು ವಿಷಯಗಳ ಕುರಿತಾಗಿ ಮನೆ ಮನೆ ಸಂಪರ್ಕದ  ಸಂದರ್ಭ ಸಾಹಿತ್ಯಗಳನ್ನು ನೀಡುವ ಮೂಲಕ ಜನಜಾಗೃತಿ ಮಾಡುತ್ತಿದ್ದೇವೆ ಎಂದು ಹೇಳಿದರು.

ಪಂಚ ಪರಿವರ್ತನೆ

1)ಸಾಮಾಜಿಕ ಸಾಮರಸ್ಯ,2)ಪರಿಸರ ಸಂರಕ್ಷಣೆ ,3) ಕುಟುಂಬ ಪ್ರಬೋಧನ, 4)’ ಸ್ವ’ ಆಧಾರಿತ ಜೀವನ, 5)ನಾಗರಿಕ ಕರ್ತವ್ಯಪ್ರಜ್ಞೆ ಯ ಬಗ್ಗೆ ವಿವರಿಸಿದರು. ಈ ಸಂದರ್ಭ ಘುಮಂತು ಕಾರ್ಯ ವಿಭಾಗ ಸಹ ಸಂಯೋಜಕ ಸುದರ್ಶನ್ ಕನ್ಯಾಡಿ ಮತ್ತು ಮಂಡಲ ಕಾರ್ಯವಾಹ ಸತ್ಯಪ್ರಸಾದ್ ಕಲ್ಮಂಜ ಉಪಸ್ಥಿತರಿದ್ದರು.

- Advertisement -

Latest News

error: Content is protected !!