Tuesday, April 30, 2024
HomeUncategorizedಕ್ಯಾಡ್ಬರಿ ಚಾಕೊಲೇಟ್‌ಗಳಲ್ಲಿ ದನದ ಮಾಂಸ? ; ಇಲ್ಲಿದೆ ವೈರಲ್ ಸುದ್ದಿಯ ಅಸಲಿ ಕಹಾನಿ!!

ಕ್ಯಾಡ್ಬರಿ ಚಾಕೊಲೇಟ್‌ಗಳಲ್ಲಿ ದನದ ಮಾಂಸ? ; ಇಲ್ಲಿದೆ ವೈರಲ್ ಸುದ್ದಿಯ ಅಸಲಿ ಕಹಾನಿ!!

spot_img
- Advertisement -
- Advertisement -

ನವದೆಹಲಿ: ಕ್ಯಾಡ್ಬರಿ ಚಾಕೊಲೇಟ್‌ಗಳಲ್ಲಿ ಗೋಮಾಂಸವಿದೆ ಎಂದು ಹೇಳುವ ಸಂದೇಶವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು , ದನದ ಮಾಂಸದಲ್ಲಿರುವ ಜೆಲಾಟಿನ್ ನ ಒಂದು ಘಟಕಾಂಶ ಹೊಂದಿದೆ ಎಂದು ಉಲ್ಲೇಖ ಮಾಡಲಾಗಿತ್ತು.

ಈ ಸ್ಕ್ರೀನ್​ಶಾಟ್​ ಅನ್ನು ಶೇರ್ ಮಾಡಿಕೊಂಡು ಕಳೆದ ವೀಕೆಂಡ್​ನಿಂದ ಟ್ವಿಟ್ಟರ್​ನಲ್ಲಿ #BoycottCadburyProducts ಎಂಬ ಅಭಿಯಾನವೂ ನಡೆದಿತ್ತು. ಇದರಿಂದ ಹಿಂದೂಗಳ ಭಾವನೆಗೆ ಧಕ್ಕೆಯಾಗುತ್ತಿದೆ ಹಾಗೇ ನಮಗೆ ಅರಿವಿಲ್ಲದಂತೆ ದನದ ಮಾಂಸವನ್ನು ನಮಗೆ ತಿನ್ನಿಸಲಾಗುತ್ತಿದೆ. ಇದರಿಂದ ಕ್ಯಾಡ್​ಬರಿ ಚಾಕೋಲೇಟ್​ಗಳನ್ನು ಭಾರತದಲ್ಲಿ ಬ್ಯಾನ್ ಮಾಡಬೇಕೆಂಬ ಅಭಿಯಾನಗಳು ನಡೆದಿದ್ದವು.

ಈ ವಿವಾದದ ಬಗ್ಗೆ ಟ್ವೀಟ್ ಮೂಲಕ ಸ್ಪಷ್ಟೀಕರಣ ನೀಡಿರುವ ಕ್ಯಾಡ್​ಬರಿ ಕಂಪನಿ, ಭಾರತದಲ್ಲಿ ಮಾರಾಟ ಮಾಡಲಾಗುತ್ತಿರುವ ಕ್ಯಾಡ್​ಬರಿ ಉತ್ಪನ್ನಗಳೆಲ್ಲವೂ ಶೇ. 100ರಷ್ಟು ಸಸ್ಯಾಹಾರಿಯಾಗಿವೆ. ವೆಬ್​ಸೈಟ್​ನಲ್ಲಿ ತಿಳಿಸಲಾಗಿರುವ ಉತ್ಪನ್ನಗಳನ್ನು ಭಾರತದ ಮಾರುಕಟ್ಟೆಗೆ ನಾವು ಬಿಟ್ಟಿಲ್ಲ. ಜಿಲೆಟಿನ್ ಅಂಶವನ್ನು ಹೊಂದಿರುವ ಕ್ಯಾಡ್​ಬರಿ ಚಾಕೋಲೇಟ್​ಗಳನ್ನು ಭಾರತದಲ್ಲಿ ಮಾರಾಟ ಮಾಡುತ್ತಿಲ್ಲ. ಕ್ಯಾಡ್​ಬರಿ ಚಾಕೋಲೇಟ್​ ಹಿಂಭಾಗದಲ್ಲಿ ಹಸಿರು ಬಣ್ಣದ ಚುಕ್ಕೆ ಇರುವುದನ್ನು ನೀವು ಗಮನಿಸಿರಬಹುದು. ಈ ಬಣ್ಣದ ಮಾರ್ಕ್ ಇರುವ ಉತ್ಪನ್ನಗಳೆಲ್ಲವೂ ಸಂಪೂರ್ಣ ಸಸ್ಯಾಹಾರಿಯಾಗಿರುತ್ತವೆ ಎಂದು ಖಚಿತಪಡಿಸಿದೆ.

ಹಾಗೇ, ಯಾವುದೇ ಒಂದು ಮಾಧ್ಯಮದಲ್ಲಿ ಬಂದ ಸುದ್ದಿಯನ್ನು ಅಥವಾ ಜನರಿಗೆ ಸಿಕ್ಕಿರುವ ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡುವ ಮುನ್ನ ಅದರ ಸತ್ಯಾಸತ್ಯತೆಯನ್ನು ಖಚಿತಪಡಿಸಿಕೊಳ್ಳಿ. ಈ ರೀತಿಯ ನೆಗೆಟಿವ್ ಪೋಸ್ಟ್​ಗಳು ನಮ್ಮ ಬ್ರ್ಯಾಂಡ್ ಮೇಲೆ ಬಹಳ ಪರಿಣಾಮ ಬೀರುತ್ತವೆ. ಹಲವಾರು ವರ್ಷಗಳಿಂದ ಕ್ಯಾಡ್​ಬರಿ ಬ್ರ್ಯಾಂಡ್​ ಅನ್ನು ಎಲ್ಲ ಕಡೆ ತಲುಪಿಸಲು ನಾವು ಹಾಕಿರುವ ಶ್ರಮ ವ್ಯರ್ಥವಾಗುತ್ತದೆ. ಹಾಗೇ, ಈ ರೀತಿಯ ಮೆಸೇಜ್ ನೋಡಿದ ಗ್ರಾಹಕರು ನಮ್ಮ ಉತ್ಪನ್ನಗಳನ್ನು ಖರೀದಿಸಲು ಹಿಂದೇಟು ಹಾಕುತ್ತಾರೆ. ಇದರಿಂದ ನಾವು ನಮ್ಮ ಗ್ರಾಹಕರ ನಂಬಿಕೆಯನ್ನು ಕಳೆದುಕೊಳ್ಳುತ್ತೇವೆ ಎಂದು ಕ್ಯಾಡ್​ಬರಿ ಟ್ವೀಟ್ ಮೂಲಕ ಮನವಿ ಮಾಡಿದೆ

- Advertisement -
spot_img

Latest News

error: Content is protected !!