Saturday, June 6, 2026
HomeUncategorizedಮಂಗಳೂರು: ಎಸ್ಎಸ್ಎಲ್ ಸಿ ಪರೀಕ್ಷೆ ನಡೆಯುತ್ತಿದ್ದ ಖಾಸಗಿ ಶಾಲೆಯ ಲ್ಯಾಬ್ ನಲ್ಲಿ ಬೆಂಕಿ ಅವಘಡ...

ಮಂಗಳೂರು: ಎಸ್ಎಸ್ಎಲ್ ಸಿ ಪರೀಕ್ಷೆ ನಡೆಯುತ್ತಿದ್ದ ಖಾಸಗಿ ಶಾಲೆಯ ಲ್ಯಾಬ್ ನಲ್ಲಿ ಬೆಂಕಿ ಅವಘಡ !!

- Advertisement -
- Advertisement -

ಮಂಗಳೂರು: ಎಸ್ಎಸ್ಎಲ್ ಸಿ ಪರೀಕ್ಷೆ ನಡೆಯುತ್ತಿದ್ದ ಶಾಲೆಯೊಂದರ ವಿಜ್ಞಾನ ಲ್ಯಾಬ್ ನಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಕಾಣಿಸಿಕೊಂಡ ಘಟನೆ ತೊಕ್ಕೊಟ್ಟು ಸಮೀಪದ ಬಬ್ಬುಕಟ್ಟೆಯಲ್ಲಿ ನಡೆದಿದೆ.

ಬಬ್ಬು ಕಟ್ಟೆಯ ಖಾಸಗಿ ಶಿಕ್ಷಣ ಸಂಸ್ಥೆಗೆ ಸೇರಿದ ಶಾಲೆಯ ವಿಜ್ಞಾನ ಲ್ಯಾಬ್ ನಲ್ಲಿ‌ಘಟನೆ ನಡೆದಿದ್ದು, ಲ್ಯಾಬ್ ನಲ್ಲಿದ್ದ ರೆಫ್ರಿಜರೇಟರ್ ನಿಂದ ಬೆಂಕಿ‌ ಕಾಣಿಸಿಕೊಂಡಿದೆ. ಶಾಲೆಯ ಕೋಣೆಯಲ್ಲಿ ದಟ್ಟ ಹೊಗೆ ಹಬ್ಬಿದ್ದು, ಪರೀಕ್ಷೆ ಆರಂಭವಾಗಿ ಒಂದೂವರೆ ಗಂಟೆ ಬಳಿಕ ಘಟನೆ ನಡೆದಿದ್ದರಿಂದ ವಿದ್ಯಾರ್ಥಿಗಳು ಗೊಂದಲಕ್ಕೀಡಾಗಿದ್ದರು. ತಕ್ಷಣವೇ ಶಾಲಾಭಿವೃದ್ದಿ ಸಮಿತಿ ಹಾಗೂ ಶಿಕ್ಷಕರು ವಿದ್ಯಾರ್ಥಿಗಳನ್ನು ಶಾಲಾ ಕಟ್ಟಡದ ಪಕ್ಜದಲ್ಲೇ ಇರುವ ಪದವಿ ಕಾಲೇಜಿನ ಕೊಠಡಿಯಲ್ಲಿ ಪರೀಕ್ಷೆ ಆರಂಭಿಸಲು ವ್ಯವಸ್ಥೆ ಮಾಡಿದರು.

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ತಗುಲಿರಬಹುದು ಎಂದು ಶಂಕಿಸಲಾಗಿದ್ದು, ಉಳ್ಳಾಲ ಠಾಣಾ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕಾಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

- Advertisement -

Latest News

error: Content is protected !!