Friday, June 5, 2026
Homeಇತರಕೋವಿಡ್ ನಿಂದ ಉತ್ತರ ಪ್ರದೇಶ ಸಚಿವ ವಿಜಯ್ ಕಶ್ಯಪ್ ನಿಧನ: ಪ್ರಧಾನಿ ಮೋದಿ ಸಂತಾಪ

ಕೋವಿಡ್ ನಿಂದ ಉತ್ತರ ಪ್ರದೇಶ ಸಚಿವ ವಿಜಯ್ ಕಶ್ಯಪ್ ನಿಧನ: ಪ್ರಧಾನಿ ಮೋದಿ ಸಂತಾಪ

- Advertisement -
- Advertisement -

ಲಕ್ನೋ : ಉತ್ತರ ಪ್ರದೇಶದ ಆಹಾರ ನಿಯಂತ್ರಣ ಮತ್ತು ಕಂದಾಯ ಸಚಿವ ವಿಜಯ್ ಕಶ್ಯಪ್ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಮುಜಾಫರ್ ನಗರ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ವಿಜಯ್ ಕಶ್ಯಪ್ (56) ಬುಧವಾರ ಮುಂಜಾನೆ ಗುರ್ ಗಾಂವ್ ಮೆಡಿಕಲ್ ಕಾಲೇಜಿನಲ್ಲಿ ಮೃತಪಟ್ಟಿದ್ದಾರೆ.

ಕೋವಿಡ್ 2ನೇ ಅಲೆಯಲ್ಲಿ ಸೋಂಕಿನಿಂದ ಮೃತರಾದ ಉತ್ತರಪ್ರದೇಶದ ಐದನೇ ಬಿಜೆಪಿ ಶಾಸಕರು ಇವರಾಗಿದ್ದಾರೆ. ಸಚಿವ ವಿಜಯ್ ಕಶ್ಯಪ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.

ಸಚಿವ ವಿಜಯ್ ಕಾಶ್ಯಪ್ ಜೀ ಅವರ ನಿಧನದ ಸುದ್ದಿಯಿಂದ ತುಂಬಾ ದುಃಖವಾಗಿದೆ. ಅವರು ತಮ್ಮ ಜೀವನವನ್ನು ಸಾರ್ವಜನಿಕರ ಸೇವೆಗಾಗಿ ಮುಡಿಪಾಗಿಟ್ಟಿದ್ದರು. ಅವರ ಕುಟುಂಬಕ್ಕೆ ನನ್ನ ಸಂತಾಪಗಳು ಎಂದು ಪ್ರಧಾನಿ ಟ್ವೀಟ್ ಮಾಡಿದ್ದರು.

- Advertisement -

Latest News

error: Content is protected !!