Friday, June 5, 2026
Homeತಾಜಾ ಸುದ್ದಿಬಾಟಲ್ ಎಸೆದ ವಿಚಾರಕ್ಕೆ ವ್ಯಕ್ತಿಯ ಕೈ ಕಚ್ಚಿದ ಪ್ರಕರಣ : ಕ್ಷಮೆ ಕೇಳಿ ಮುಚ್ಚಳಿಕೆ ಪತ್ರ...

ಬಾಟಲ್ ಎಸೆದ ವಿಚಾರಕ್ಕೆ ವ್ಯಕ್ತಿಯ ಕೈ ಕಚ್ಚಿದ ಪ್ರಕರಣ : ಕ್ಷಮೆ ಕೇಳಿ ಮುಚ್ಚಳಿಕೆ ಪತ್ರ ಬರೆದುಕೊಟ್ಟ ಹಿರಿಯ ನಟ ಜೈ ಜಗದೀಶ್

- Advertisement -
- Advertisement -

ಮಂಡ್ಯ: ಸ್ಯಾಂಡಲ್ ವುಡ್ ಹಿರಿಯ ನಟ ಜೈ ಜಗದೀಶ್ ವ್ಯಕ್ತಿಯೊಬ್ಬರಿಗೆ ಕಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಚ್ಚಳಿಕೆ ಪತ್ರ ಬರೆದುಕೊಟ್ಟಿದ್ದಾರೆ.

ಇತ್ತೀಚೆಗೆ ನಾಗಮಂಗಲ ತಾಲೂಕಿನ ಬೆಳ್ಳೂರು ಕ್ರಾಸ್ ಬಳಿ ಕೆಎಸ್ ಆರ್ ಟಿಸಿ ಬಸ್ ನಿಂದ ಬಾಟಲ್ ಹೊರಗೆಸೆಲ್ಪಟ್ಟಿದ್ದು, ಈ ವೇಳೆ ನಟ ಜೈ ಜಗದೀಶ್ ಕಾರಿನಲ್ಲಿ ಹೋಗುತ್ತಿದ್ದರು. ಬಾಟಲ್ ಎಸೆದಿದ್ದಕ್ಕೆ ಜಯರಾಮೇಗೌಡ ಎಂಬವರ ಜೊತೆ ಗಲಾಟೆ ಮಾಡಿದ್ದ ಜೈ ಜಗದೀಶ್ ಕೈ ಕಚ್ಚಿದ್ದರು.

ಕಚ್ಚಿದ ಪ್ರಕರಣ ಸಂಬಂಧ ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ಜಯರಾಮೇಗೌಡ ದೂರು ದಾಖಲಿಸಿದ್ದರು.

ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಠಾಣೆಗೆ ಹಾಜರಾಗುವಂತೆ ಜೈ ಜಗದೀಶ್ ಗೆ ಸೂಚನೆ ನೀಡಿದ್ದು, ಅದರಂತೆ ನಟ ಜೈ ಜಗದೀಶ್ ಇಂದು ಹಾಜರಾಗಿದ್ದರು.

ಬೆಳ್ಳೂರು ಠಾಣೆಯಲ್ಲಿ ಜೈ ಜಗದೀಶ್ ಹಾಗೂ ಹಲ್ಲೆಗೊಳಗಾದ ಜಯರಾಮೇಗೌಡ ನಡುವೆ ಸಂಧಾನ ಏರ್ಪಟ್ಟಿದೆ.

ತಪ್ಪಾಯ್ತು ಎಂದು ಕ್ಷಮೆ ಕೇಳಿ ನಟ
ಜೈ ಜಗದೀಶ್ ಮುಚ್ಚಳಿಕೆ ಪತ್ರ ಬರೆದು ಕೊಟ್ಟಿದ್ದಾರೆ.

- Advertisement -

Latest News

error: Content is protected !!