Sunday, April 28, 2024
Homeಕರಾವಳಿಹಿರಿಯ ನಟ, ನಿರ್ದೇಶಕ ವಿ.ಜಿ.ಪಾಲ್ ನಿಧನ

ಹಿರಿಯ ನಟ, ನಿರ್ದೇಶಕ ವಿ.ಜಿ.ಪಾಲ್ ನಿಧನ

spot_img
- Advertisement -
- Advertisement -

ಮಂಗಳೂರು: ತುಳು ರಂಗಭೂಮಿಯಲ್ಲಿ ಐದು ದಶಕಗಳಿಗೂ ಹೆಚ್ಚು ಸೇವೆ ಸಲ್ಲಿಸಿದ್ದ  ಹಿರಿಯ ನಟ, ನಿರ್ದೇಶಕ, ಸಂಘಟಕ ವಿ.ಜಿ.ಪಾಲ್(ವೇಣುಗೋಪಾಲ ಟಿ. ಕೋಟ್ಯಾನ್‌) ಅನಾರೋಗ್ಯದಿಂದ ಬುಧವಾರ ರಾತ್ರಿ ನಿಧನರಾದರು.

ತನಿಯಪ್ಪ ಕೋಟ್ಯಾನ್‌ ಸೀತಮ್ಮ ದಂಪತಿಯ ಮಗನಾಗಿ ಜನಿಸಿದ್ದ ಅವರು ಸುಶೀಲಾ ಅವರನ್ನು ಮದುವೆಯಾಗಿದ್ದರು. ಅವರಿಗೆ ಇಬ್ಬರು ಪುತ್ರರು ಒಬ್ಬ ಪುತ್ರಿ ಇದ್ದಾರೆ.

ವಿ.ಜಿ.ಪಾಲ್ ಅವರು ಹತ್ತಾರು ನಾಟಕಗಳಲ್ಲಿ ಹಾಗೂ ತುಳು ಮತ್ತು ಕನ್ನಡ ಭಾಷೆಯ ಅನೇಕ ಸಿನಿಮಾಗಳಲ್ಲಿ ನಟಿಸಿದ್ದರು. ‘ಕಲ್ಲಿಗದ ಕುರುಕ್ಷೇತ್ರ’ ತುಳು ನಾಟಕದ ಮೂಲಕ 1961ರಲ್ಲಿ ರಂಗಪ್ರವೇಶ ಮಾಡಿದ ವಿ.ಜಿ.ಪಾಲ್ ಹಾಸ್ಯ ಪಾತ್ರಕ್ಕೊಂದು ಮಾದರಿಯಾಗಿದ್ದರು. ಚಲನಚಿತ್ರಗಳು, ಕಿರುತೆರೆ, ಧ್ವನಿ ಸುರುಳಿಗಳಿಗೆ ಕಂಠದಾನ ಮಾಡಿದ್ದರು. ತುಳು ನಾಟಕಗಳನ್ನು ಪಥಮ ಬಾರಿಗೆ ಕೊಲ್ಲಿ ರಾಷ್ಟ್ರಗಳಲ್ಲಿ ಪ್ರದರ್ಶನ ನೀಡಿದ್ದರು. ಕನ್ನಡದ ಜೀವನ್ಮುಖಿ, ಮಹಾನದಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಬಯ್ಯಮಲ್ಲಿಗೆ, ಭಾಗ್ಯವಂತೆದಿ, ಸತ್ಯ ಓಲುಂಡು, ಬಂಗಾರ್‌ ಪಟ್ಲೇರ್‌, ಮಾರಿಬಲೆ, ತುಡರ್‌ ಅವರು ನಟಿಸಿದ ಪ್ರಮುಖ ತುಳು ಸಿನಿಮಾಗಳು.

ಐಟಿಐ ವಿದ್ಯಾಭ್ಯಾಸ ಪಡೆದಿದ್ದ ಅವರು ಮೀನುಗಾರಿಕಾ ಅಭಿವೃದ್ಧಿ ನಿಗಮದಲ್ಲಿ ಹಿರಿಯ ತಾಂತ್ರಿಕ ಸಹಾಯಕರಾಗಿ 2000ದಲ್ಲಿ ನಿವೃತ್ತರಾಗಿದ್ದರು. ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳೂ ಸೇರಿದಂತೆ ಅವರು ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದರು. ಅವರಿಗೆ 75 ವರ್ಷ ತುಂಬಿದಾಗ ‘ಪಾಲ್‌ ಕಡಲ್‌‘ ಅಭಿನಂದನಾ ಗ್ರಂಥ ಬಿಡುಗಡೆ ಮಾಡಲಾಗಿತ್ತು.

- Advertisement -
spot_img

Latest News

error: Content is protected !!