Monday, May 20, 2024
Homeತಾಜಾ ಸುದ್ದಿರಿಷಬ್ ಶೆಟ್ಟಿ ನಿರ್ದೇಶನದ ‘ಕಾಂತಾರ–ಅಧ್ಯಾಯ 1’ ಬಿಡುಗಡೆಗೆ ಮುನ್ನವೇ ಪ್ರೈಂಗೆ ಮಾರಾಟ

ರಿಷಬ್ ಶೆಟ್ಟಿ ನಿರ್ದೇಶನದ ‘ಕಾಂತಾರ–ಅಧ್ಯಾಯ 1’ ಬಿಡುಗಡೆಗೆ ಮುನ್ನವೇ ಪ್ರೈಂಗೆ ಮಾರಾಟ

spot_img
- Advertisement -
- Advertisement -

ನಟ ರಿಷಬ್‌ ಶೆಟ್ಟಿ ನಟಿಸಿ ನಿರ್ದೇಶಿಸುತ್ತಿರುವ ‘ಕಾಂತಾರ–ಒಂದು ದಂತಕಥೆ’ಯ ಮೊದಲ ಅಧ್ಯಾಯ ಸಿನಿಮಾವು ರಿಲೀಸ್‌ಗೂ ಮುನ್ನವೇ ಒಟಿಟಿಗೆ ಮಾರಾಟವಾಗಿದೆ.

ಪ್ರೈಂ ವಿಡಿಯೊ ಈ ಸಿನಿಮಾವನ್ನು ದೊಡ್ಡ ಮೊತ್ತಕ್ಕೆ ಖರೀದಿಸಿದ್ದು, ಮಂಗಳವಾರ ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ತಾನು ಖರೀದಿಸಿದ 29 ಸಿನಿಮಾಗಳ ಶೀರ್ಷಿಕೆಯನ್ನು ಪ್ರೈಂ ಘೋಷಿಸಿತು.    

ಈ ಕಾರ್ಯಕ್ರಮದಲ್ಲಿ ರಿಷಬ್‌ ಶೆಟ್ಟಿ ಹಾಗೂ ಚಿತ್ರದ ನಿರ್ಮಾಪಕ ವಿಜಯ್‌ ಕಿರಗಂದೂರು ಭಾಗವಹಿಸಿದ್ದರು. ವರಾಹ ರೂಪಂ ಹಾಡಿಗೆ ಯಕ್ಷಗಾನ ಕಲಾವಿದರು ಪ್ರದರ್ಶನ ನೀಡಿದ ಬಳಿಕ, ಪ್ರೈಂ ತಂಡವು ‘ಕಾಂತಾರ–ಒಂದು ದಂತಕಥೆ’ ಅಧ್ಯಾಯ 1ರ ಬಿಡುಗಡೆಯನ್ನು ಘೋಷಿಸಿತು.

ಇನ್ನು ಸಿನಿಮಾದ ಚಿತ್ರೀಕರಣವು ಈಗಾಗಲೇ ಆರಂಭವಾಗಿದ್ದು, ಹೊಸ ಸಿನಿಮಾ ‘ಕಾಂತಾರ–ಒಂದು ದಂತಕಥೆ’ಯ ಪ್ರೀಕ್ವೆಲ್‌ ಆಗಿದ್ದು, ಕದಂಬರ ಕಾಲದಲ್ಲಿ ನಡೆಯುವ ಕಥೆಯನ್ನು ಹೊಂದಿದೆ. ಈ ಸಿನಿಮಾದ ಜೊತೆಗೆ ಶಾಹಿದ್‌ ಕಪೂರ್‌ ನಟಿಸುತ್ತಿರುವ ‘ಅಶ್ವತ್ಥಾಮ–ದಿ ಸಾಗಾ ಕಂಟಿನ್ಯೂಸ್‌’ ಸಿನಿಮಾವನ್ನೂ ಪ್ರೈಂ ಖರೀದಿಸಿದೆ. ರಕ್ಷಿತ್‌ ಶೆಟ್ಟಿ ಅಭಿನಯದ ‘ಅವನೇ ಶ್ರೀಮನ್ನಾರಾಯಣ’ ಚಿತ್ರ ನಿರ್ದೇಶಿಸಿದ್ದ ಸಚಿನ್‌ ರವಿ ಈ ಸಿನಿಮಾಗೆ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ.

‘ಕಾಂತಾರ’ ಪ್ರೀಕ್ವೆಲ್‌ ಹಾಗೂ ‘ಅಶ್ವತ್ಥಾಮ’ ಸಿನಿಮಾಗಳು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಬಳಿಕ ಪ್ರೈಂನಲ್ಲಿ ಲಭ್ಯವಾಗಲಿವೆ. ಇವುಗಳ ಜೊತೆಗೆ ಹಿಂದಿಯ ಹಿಟ್‌ ವೆಬ್‌ ಸರಣಿಗಳಾದ ‘ಮಿರ್ಜಾಪುರ್‌’ ಹಾಗೂ ‘ಪಂಚಾಯತ್‌’ನ ಮೂರನೇ ಚಾಪ್ಟರ್‌ಗಳನ್ನೂ ಪ್ರೈಂ ಘೋಷಿಸಿದೆ.

- Advertisement -
spot_img

Latest News

error: Content is protected !!