Thursday, June 25, 2026
Homeತಾಜಾ ಸುದ್ದಿಕೇರಳಂ ಸಿಎಂ ಆಗಿ ವಿ.ಡಿ. ಸತೀಸನ್ ಪ್ರಮಾಣ ವಚನ

ಕೇರಳಂ ಸಿಎಂ ಆಗಿ ವಿ.ಡಿ. ಸತೀಸನ್ ಪ್ರಮಾಣ ವಚನ

- Advertisement -
- Advertisement -

ತಿರುವನಂತಪುರಂ: ಕೇರಳಂ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಸನ್ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಸತೀಸನ್ ಜೊತೆಗೆ ಇಪ್ಪತ್ತು‌ ಶಾಸಕರು ಕೂಡ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ತಿರುವನಂತಪುರಂನ ಸೆಂಟ್ರಲ್ ಸ್ಟೇಡಿಯಂ ನಲ್ಲಿ ನಡೆದ ಸಮಾರಂಭದಲ್ಲಿ ಕೇರಳಂ ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಸಿಎಂ ಹಾಗೂ ಸಚಿವರಿಗೆ ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು.

ಯುಡಿಎಫ್ ಪಾಲುದಾರ ಪಕ್ಷಗಳಾದ ಮುಸ್ಲಿಂ ಲೀಗ್ ಐದು ಸಚಿವ ಸ್ಥಾ‌ನ ಪಡೆದುಕೊಂಡಿದ್ದು, ಕೇರಳ ಕಾಂಗ್ರೆಸ್, ಕೇರಳ ಕಾಂಗ್ರೆಸ್(ಜಾಕೋಬ್), ಆರ್ ಎಸ್ಪಿ ಮತ್ತು ಸಿಎಂಪಿ ತಲಾ ಒಂದು ಸಚಿವ ಸ್ಥಾನಗಳನ್ನು ಪಡೆದುಕೊಂಡಿವೆ‌. ಕಾಂಗ್ರೆಸ್ ಪಕ್ಷ ಹನ್ನೆರಡು ಸಚಿವ ಸ್ಥಾನಗಳನ್ನು ಪಡೆದಿದೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ, ವಯನಾಡ್ ಸಂಸದೆ ಪ್ರಿಯಾಂಕಾ ಗಾಂಧಿ, ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಮಾಜಿ ಸಿಎಂ ಪಿಣರಾಯಿ ವಿಜಯನ್, ಬಿಜೆಪಿ ಕೇರಳಂ ರಾಜ್ಯಾಧ್ಯಕ್ಷ ಮತ್ತು ಶಾಸಕ ರಾಜೀವ್ ಚಂದ್ರಶೇಖರ್ ಕೂಡಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

- Advertisement -

Latest News

error: Content is protected !!