Saturday, May 4, 2024
Homeಮನರಂಜನೆವರ್ತೂರು ಸಂತೋಷ್ ನನ್ನ ಮಗಳನ್ನು ಮದುವೆ ಆಗಿ, ಅವ್ನಿಗೊಬ್ಬಳು ಮಗಳಿದ್ದಾಳೆ: ಅವನು ಡ್ರಗ್ ಅಡಿಕ್ಟ್ ಎಂದ...

ವರ್ತೂರು ಸಂತೋಷ್ ನನ್ನ ಮಗಳನ್ನು ಮದುವೆ ಆಗಿ, ಅವ್ನಿಗೊಬ್ಬಳು ಮಗಳಿದ್ದಾಳೆ: ಅವನು ಡ್ರಗ್ ಅಡಿಕ್ಟ್ ಎಂದ ಸಂತೋಷ್ ಮಾವ

spot_img
- Advertisement -
- Advertisement -

ಬೆಂಗಳೂರು; ಹುಲಿ ಉಗುರು ಪ್ರಕರಣದಲ್ಲಿ ಬಿಗ್ ಬಾಸ್ ಮನೆಯಿಂದಲೇ ಅರೆಸ್ಟ್ ಆಗಿ ಕೊನೆಗೆ ಜಾಮೀನು ಮೇಲೆ ಹೊರ ಬಂದು ಸದ್ಯ ಬಿಗ್ ಬಾಸ್ ಮನೆಯಲ್ಲಿರುವ ವರ್ತೂರು ಸಂತೋಷ್ ಸದ್ಯ ದಿನಕ್ಕೊಂದು ರೀತಿಯಲ್ಲಿ ಸುದ್ದಿಯಾಗುತ್ತಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ವರ್ತೂರು ಹಾಗೂ ತನಿಶಾ ಬಗ್ಗೆ ಗುಸುಗುಸು ಪಿಸು ಪಿಸು ಕೇಳಇ ಬರುತ್ತಿರುವಾಗಲೇ  ವರ್ತೂರು ಸಂತೋಷ್‌ಗೆ ಮದುವೆ ಆಗಿರೋ ಸುದ್ದಿ ಬೆಳಕಿಗೆ ಬಂದಿದೆ. ಸೋಶಿಯಲ್ ಮೀಡಿಯಾದಲ್ಲಿ ಮದುವೆ ಆಗಿರೋ ವಿಡಿಯೋ ಹಾಗೂ ಫೋಟೊಗಳು ಹರಿದಾಡಿದ್ದವು.

ಇದರ ಬೆನ್ನಲ್ಲೇ  ಸಂತೋಷ್ ಮಾವ ಸೋಮನಾಥ್ ಪ್ರತಿಕ್ರಿಯೆ ನೀಡಿದ್ದು, ವರ್ತೂರು ಸಂತೋಷ್ ಹಾಗೂ ಅವರ ಅಮ್ಮನ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ವರ್ತೂರು ಸಂತೋಷ್ ಡ್ರಗ್ಸ್ ತೆಗೆದುಕೊಳ್ಳುತ್ತಿದ್ದ. ಕುಡಿದು ಮಗಳಿಗೆ ಹಿಂಸೆ ನೀಡುತ್ತಿದ್ದ ಎಂದು ಆರೋಪ ಮಾಡಿದ್ದಾರೆ.ಅಲ್ಲದೇ ಅವನಿಗೆ ಒಬ್ಬ ಮಗಳಿದ್ದಾಳೆ ಎಂದಿದ್ದಾರೆ.

ವರ್ತೂರು ಸಂತೋಷ್ ಹಾಗೂ ಮಗಳ ಮದುವೆಗೆ 12 ಸಾವಿರ ಮಂದಿ ಬಂದಿದ್ದರು. ಆದ್ರೀಗ ಮದುವೆನೇ ಆಗಿಲ್ಲ ಅಮ್ಮ-ಮಗ ಅಂತಿದ್ದಾರೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. “ಅವರ ಅಮ್ಮ ಯಾವ ಬಾಯಿಯಲ್ಲಿ ಮದುವೆ ಆಗಿಲ್ಲ ಅಂತ ಹೇಳ್ತಾರೆ. 10 ರಿಂದ 12 ಮದುವೆಗೆ ಬಂದಿದ್ರಲ್ಲ. ಮೂರು ಸಾವಿರ, ಎರಡು ಸಾವಿರ ಅಂದರೆ ಏನೋ ಅನ್ಬಹುದು. ಒಡವೆ ಇಟ್ಟು ನಾನೇ ಮದುವೆ ಮಾಡಿಕೊಟ್ಟೆ. ನಾನು ಮದುವೆನೇ ಆಗಿಲ್ಲ ಅಂತ ಬಿಗ್ ಬಾಸ್‌ನಲ್ಲಿ ಹೇಳಿಕೊಂಡಿದ್ದಾನಲ್ಲ. ಟಿವಿಗೆ ಬಂದಿದ್ದಾನಲ್ಲ ಅಂತ ಸುಮ್ಮನೆ ಇದ್ವಿ. ಈಗ ಎರಡನೇ ಮದುವೆ ಮಾಡಿಕೊಳ್ತೀನಿ ಅಂದಿದ್ದಕ್ಕೆ ಮಾತಾಡ್ತಿದ್ದೀವಿ.” ಎಂದು ಮಾವ ಸೋಮನಾಥ್ ಹೇಳಿದ್ದಾರೆ.

- Advertisement -
spot_img

Latest News

error: Content is protected !!