Monday, June 8, 2026
Homeಮನರಂಜನೆಸ್ಯಾಂಡಲ್ ವುಡ್ ತಾರೆಯರ ಮನೆಯಲ್ಲಿ ಹೇಗಿತ್ತು ವರಮಹಾಲಕ್ಷ್ಮೀ ಹಬ್ಬದ ಸಂಭ್ರಮ?

ಸ್ಯಾಂಡಲ್ ವುಡ್ ತಾರೆಯರ ಮನೆಯಲ್ಲಿ ಹೇಗಿತ್ತು ವರಮಹಾಲಕ್ಷ್ಮೀ ಹಬ್ಬದ ಸಂಭ್ರಮ?

- Advertisement -
- Advertisement -

ಬೆಂಗಳೂರು : ನಿನ್ನೆ ವರಮಹಾಲಕ್ಷ್ಮೀ ಹಬ್ಬದ ಸಂಭ್ರಮ. ಕೊರೊನಾದ ಆತಂಕದ ಮಧ್ಯೆಯೇ ನಾಡಿನ ಜನ ಹಬ್ಬವನ್ನು ವರಮಹಾಲಕ್ಷ್ಮೀ ಹಬ್ಬವನ್ನು ತಮಗಾದ ರೀತಿಯಲ್ಲಿ ಆಚರಿಸಿದ್ರು. ಇನ್ನು ತಾರೆಯರ ಮನೆಗಳಲ್ಲೂ ಹಬ್ಬದ ಸಂಭ್ರಮ ಜೋರಾಗಿತ್ತು. ಕೊರೊನಾದಿಂದಾಗಿ ಬಹುತೇಕ ಸಿನಿ ತಾರೆಯರು ಮನೆಯಲ್ಲೇ ಕಾಲ ಕಳೆಯುತ್ತಿದ್ದಾರೆ. ಹಾಗಾಗಿ ಸಿಕ್ಕ ಸಮಯವನ್ನು ಸದುಪಯೋಗಪಡಿಸಿಕೊಳ್ಳೋಣ ಅಂತಾ ಹಬ್ಬ ಆಚರಿಸಿದ್ರು.

ನಟಿ ಪ್ರಿಯಾಂಕ ಉಪೇಂದ್ರ ಅವರು ಅತ್ತೆ ಜೊತೆ ಸೇರಿಕೊಂಡು ಹಬ್ಬ ಮಾಡಿದ್ರೆ, ರಾಧಿಕಾ ಪಂಡಿತ್ ಹಬ್ಬದ ಸಡಗರದಲ್ಲಿ ಯಶ್ ಕೂಡ ಭಾಗಿಯಾಗಿದ್ರು. ಹೊಸ ಜೋಡಿ ನಿಖಿಲ್ ಹಾಗೂ ರೇವತಿ ಕೂಡ ಭರ್ಜರಿಯಾಗಿ ಹಬ್ಬ ಆಚರಿಸಿದ್ರು. ಇನ್ನು ನಿವೇದಿತಾ ಗೌಡಗೆ ಈ ಬಾರಿ ಮದುವೆ ಬಳಿಕದ ಮೊದಲ ವರಮಹಾಲಕ್ಷ್ಮೀ ಹಬ್ಬ. ಹಾಗಾಗಿ ಖುಷಿ ಖುಷಿಯಿಂದ ಹಬ್ಬ ಆಚರಿಸಿ ಫೇಸ್ ಬುಕ್ ನಲ್ಲಿ ಫೋಟೋ ಶೇರ್ ಮಾಡಿದ್ದಾರೆ. ಇನ್ನು ಲೂಸ್ ಮಾಸ ಲೋಗಿ ಪತ್ನಿ ಹಾಗೂ ಮಗಳ ಜೊತೆ ಹಬ್ಬವನ್ನು ಸಂಭ್ರಮಿಸಿದರು. ಹಾಗೇ ಕಿರಿಕ್ ಕೀರ್ತಿ ತಮ್ಮ ಕುಟುಂಬದೊಂದಿಗೆ ಆಚರಿಸಿದ್ರೆ, ನಟಿ ಶ್ವೇತಾ ಶ್ರೀವಾತ್ಸವ್ ಮಗಳೊಂದಿಗೆ ಹಬ್ಬ ಮಾಡಿ ವಿಡಿಯೋ ಶೇರ್ ಮಾಡಿದ್ದಾರೆ.

https://www.facebook.com/watch/?v=372498410386481

- Advertisement -

Latest News

error: Content is protected !!