Wednesday, September 30, 2026
Homeಕರಾವಳಿಮಂಗಳೂರುವಂದೇ ಭಾರತ್‌ ರೈಲಿಗೆ ಪುತ್ತೂರಿನಲ್ಲೂ ನಿಲುಗಡೆ!: ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಕೇಂದ್ರ ರೈಲ್ವೆ ಸಚಿವರಿಗೆ...

ವಂದೇ ಭಾರತ್‌ ರೈಲಿಗೆ ಪುತ್ತೂರಿನಲ್ಲೂ ನಿಲುಗಡೆ!: ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಕೇಂದ್ರ ರೈಲ್ವೆ ಸಚಿವರಿಗೆ ಧನ್ಯವಾದಗಳು

- Advertisement -
- Advertisement -

ಮಂಗಳೂರು: ಮಂಗಳೂರು ರೈಲ್ವೆ ವಿಭಾಗವು ಕೇರಳದ ಪಾಲಕ್ಕಾಡ್‌‌ ವ್ಯಾಪ್ತಿಯಿಂದ ಹೊರಬಂದು ಕರ್ನಾಟಕದ ಮೈಸೂರು ರೈಲ್ವೆ ವಿಭಾಗದ ಅಧೀನಕ್ಕೆ ಸೇರ್ಪಡೆಯಾಗುತ್ತಿರುವ ಸುಸಂದರ್ಭದಲ್ಲೇ ಕರಾವಳಿ ಭಾಗಕ್ಕೆ ಮತ್ತೊಂದು ಪ್ರಮುಖ ಕೊಡುಗೆ ಲಭಿಸಿದೆ. ಕೇಂದ್ರ ರೈಲ್ವೆ ಇಲಾಖೆಯು ಪ್ರಸ್ತುತ ಸಂಚರಿಸುತ್ತಿರುವ ಗೋವಾ – ಮಂಗಳೂರು ‘ವಂದೇ ಭಾರತ್’ ರೈಲನ್ನು ರಾಜ್ಯ ರಾಜಧಾನಿ ಬೆಂಗಳೂರಿನವರೆಗೆ ವಿಸ್ತರಿಸಿದ್ದು, ಕರಾವಳಿಯ ರೈಲ್ವೆ ಸಾರಿಗೆ ಅಭಿವೃದ್ಧಿಗೆ ಹೊಸ ವೇಗ ಸಿಕ್ಕಂತಾಗಿದೆ.

ಅಲ್ಲದೆ, ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರ ವಿಶೇಷ ಮುತುವರ್ಜಿ ಹಾಗೂ ಮನವಿಯ ಫಲವಾಗಿ ಈ ಪ್ರತಿಷ್ಠಿತ ವಂದೇ ಭಾರತ್ ರೈಲಿಗೆ ಕಬಕ ಪುತ್ತೂರು (Puttur) ರೈಲು ನಿಲ್ದಾಣದಲ್ಲೂ ಅಧಿಕೃತ ನಿಲುಗಡೆ ಘೋಷಿಸಲಾಗಿದೆ. ಈ ನಿರ್ಧಾರದಿಂದಾಗಿ ಪುತ್ತೂರು ಸೇರಿದಂತೆ ಸುತ್ತಮುತ್ತಲ ಹತ್ತಾರು ಹಳ್ಳಿಗಳ ಸಾವಿರಾರು ಪ್ರಯಾಣಿಕರಿಗೆ ಹಾಗೂ ಉದ್ಯಮಿಗಳಿಗೆ ಬೆಂಗಳೂರು ಮತ್ತು ಗೋವಾಗೆ ಸುಲಭವಾಗಿ ಪ್ರಯಾಣಿಸಲು ಅತ್ಯಂತ ಅನುಕೂಲಕರವಾಗಲಿದೆ.

ಕರಾವಳಿ ಭಾಗದ ದಶಕಗಳ ರೈಲ್ವೇ ಸಮಸ್ಯೆಗೆ ಪರಿಹಾರ ಒದಗಿಸಿ, ಮೂಲಸೌಕರ್ಯ ವಿಸ್ತರಣೆಗೆ ಶ್ರಮಿಸಿದ ಸ್ಥಳೀಯ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಕೇಂದ್ರ ರೈಲ್ವೆ ಸಚಿವರು ಹಾಗೂ ರೈಲ್ವೆ ರಾಜ್ಯ ಸಚಿವರಿಗೆ ಪ್ರಮುಖ ನಾಗರಿಕರು ಮತ್ತು ಪ್ರಯಾಣಿಕರ ಹಿತರಕ್ಷಣಾ ಸಮಿತಿಗಳು ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಿವೆ.

- Advertisement -

Latest News

error: Content is protected !!