Sunday, June 7, 2026
Homeಕರಾವಳಿಬ್ರಹ್ಮಾವರ : ವಾಲ್ಮೀಕಿ ಪ್ರಶಸ್ತಿಗೆ ಭಾಜನರಾದ ಕೊರಗ ಜನಾಂಗದ ಗೌರಿ ಕೊರಗ!

ಬ್ರಹ್ಮಾವರ : ವಾಲ್ಮೀಕಿ ಪ್ರಶಸ್ತಿಗೆ ಭಾಜನರಾದ ಕೊರಗ ಜನಾಂಗದ ಗೌರಿ ಕೊರಗ!

- Advertisement -
- Advertisement -

ಬ್ರಹ್ಮಾವರ : ರಾಜ್ಯ ಸರಕಾರ ನೀಡುವ ವಾಲ್ಮೀಕಿ ಪ್ರಶಸ್ತಿ ಪುರಸ್ಕೃತರ ಪಟ್ಟಿಯಲ್ಲಿ ಕೆಂಜೂರು ಕಲ್ಲುಗುಡ್ಡೆಯ ಗೌರಿ ಕೊರಗರವರ ಹೆಸರು ಘೋಷಣೆಯಾಗಿದೆ.

ಕೊರಗ ಜನಾಂಗದ ಅಭಿವೃದ್ಧಿಗೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು , ಚಳವಳಿಗಳ ಮೂಲಕ ಸರಕಾರದ ಗಮನ ಸೆಳೆದು ಸಮುದಾಯದ ಅಭ್ಯುದಯಕ್ಕೆ ಶ್ರಮಿಸಿದ ಇವರಿಗೆ 2020ನೇ ಸಾಲಿನ ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿಯನ್ನು ಬುಧವಾರ ಪ್ರದಾನ ಮಾಡಲಾಗುತ್ತದೆ.

ಅ. 20ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದು ಪ್ರಶಸ್ತಿಯು 20 ಗ್ರಾಂ ಚಿನ್ನದ ಪದಕ ಮತ್ತು 5 ಲಕ್ಷ ರೂ. ಒಳಗೊಂಡಿದೆ.

ಸಮುದಾಯದವರಿಗೆ ಭೂಮಿ ಮಂಜೂರಾತಿಗಾಗಿ 2000ರಲ್ಲಿ ಭೂಮಿ ಚಳವಳಿ ಪ್ರಾರಂಭಿಸಿದ್ದರು. . ಮಹಿಳಾ ಸಶಕ್ತೀಕರಣಕ್ಕಾಗಿ ಸ್ವ ಸಹಾಯ ಸಂಘಟನೆ ಪ್ರಾರಂಭಿಸಿದರು. ಸಮುದಾಯದ ಮಕ್ಕಳು ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸದಂತೆ ಶ್ರಮಿಸಿದ್ದರು.ಅಜಲು ಪದ್ಧತಿ ನಿರ್ಮೂಲನೆಗಾಗಿ ಅಜಲು ಚಳವಳಿ ಹಮ್ಮಿಕೊಂಡಿದ್ದರು. ಕೊರಗ ಸಮುದಾಯದವರಿಗೆ ಸರಕಾರದಿಂದ ಪೌಷ್ಟಿಕಾಂಶದ ಆಹಾರ ದೊರೆಯುವಲ್ಲಿ ಶ್ರಮಿಸಿದ್ದಾರೆ.

- Advertisement -

Latest News

error: Content is protected !!