Sunday, April 28, 2024
Homeಕರಾವಳಿಉಜಿರೆ: ವರ್ತಕರು ಮತ್ತು ಆಟೋ ಚಾಲಕರಿಗೆ ವ್ಯಾಕ್ಸಿನ್ ಅಭಿಯಾನ

ಉಜಿರೆ: ವರ್ತಕರು ಮತ್ತು ಆಟೋ ಚಾಲಕರಿಗೆ ವ್ಯಾಕ್ಸಿನ್ ಅಭಿಯಾನ

spot_img
- Advertisement -
- Advertisement -

ಬೆಳ್ತಂಗಡಿ : ಸದಾ ಸಮಾಜಮುಖಿಯಾಗಿ ಕಾರ್ಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಬದುಕು ಕಟ್ಟೋಣ ಬನ್ನಿ ತಂಡ ಮತ್ತು ರೋಟರಿ ಕ್ಲಬ್ ಬೆಳ್ತಂಗಡಿ ಸಹಯೋಗದಲ್ಲಿ ಇದೀಗ ವರ್ತಕರು ಹಾಗೂ ರಿಕ್ಷಾ ಚಾಲಕರ ಆರೋಗ್ಯದ ಕಾಳಜಿಗಾಗಿ ಮಿಡಿದಿದ್ದು, ಸಂಘಟನೆಯ ರೂವಾರಿಗಳಾದ ಉಜಿರೆಯ ಉದ್ಯಮಿ ಲಕ್ಷ್ಮೀ ಗ್ರೂಪ್ಸ್ ಮಾಲಕ ಮೋಹನ್ ಕುಮಾರ್ ಹಾಗೂ ಸಂಧ್ಯಾ ಟ್ರೇಡರ್ರ್ಸ್ ಮಾಲಕ ರಾಜೇಶ್ ಪೈ ಅವರು ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜರನ್ನು ಭೇಟಿ ಮಾಡಿ ವರ್ತಕರು ಹಾಗೂ ರಿಕ್ಷಾ ಚಾಲಕರ ಆರೋಗ್ಯದ ಕಾಳಜಿಯಿಂದ ಅವರಿಗೆ ಉಚಿತ ವ್ಯಾಕ್ಸಿನ್ ನೀಡುವ ವ್ಯವಸ್ಥೆ ಮಾಡಿಕೊಡುವಂತೆ ಮನವಿ ಮಾಡಿದ್ದರು.

ಈ ಹಿನ್ನಲೆಯಲ್ಲಿ ಇಂದು (ಜೂ.29) ಉಜಿರೆಯ ಶ್ರೀ ಕೃಷ್ಣಾನುಗ್ರಹ ಸಭಾ ಮಂಟಪದಲ್ಲಿ 527 ಜನ ವರ್ತಕರು ಹಾಗೂ ರಿಕ್ಷಾ ಚಾಲಕರಿಗೆ ವ್ಯಾಕ್ಸಿನ್ ನೀಡುವ ಕಾರ್ಯಕ್ರಮಕ್ಕೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಚಾಲನೆ ನೀಡಿದರು.

ಮೋಹನ್ ಕುಮಾರ್ ಹಾಗೂ ರಾಜೇಶ್ ಪೈ ಅವರು ಮನವಿ ಮಾಡಿದ ಕೂಡಲೇ ಶಾಸಕ ಹರೀಶ್ ಪೂಂಜರವರು ಸ್ಪಂದಿಸಿದ್ದು, ಉಚಿತ ವ್ಯಾಕ್ಸಿನ್ ನೀಡುವ ಬಗ್ಗೆ ವ್ಯವಸ್ಥೆ ಮಾಡಿದ್ದರ ಪ್ರತಿಫಲವಾಗಿ ಇಂದು ವರ್ತಕರು ಹಾಗೂ ರಿಕ್ಷಾ ಚಾಲಕರು ಸೇರಿ 527 ಮಂದಿ ಲಸಿಕೆ ಪಡೆದುಕೊಂಡರು

ಈ ಸಂದರ್ಭ ವಿಧಾನಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಪುಷ್ಪಾವತಿ.ಆರ್.ಶೆಟ್ಟಿ, ಉಪಾಧ್ಯಕ್ಷ ರವಿ ಕುಮಾರ್ ಬರೆಮೇಲು, ತಾಲೂಕು ಆರೋಗ್ಯಾಧಿಕಾರಿ ಡಾ.ಕಾಲಮಧು, ಉಜಿರೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ ನೊಚ್ಚ, ರೋಟರಿ ಕ್ಲಬ್ ನಿಯೋಜಿತ ಅಧ್ಯಕ್ಷ ಶರತ್ ಕೃಷ್ಣ ಪಡ್ವೆಟ್ನಾಯ, ರೋಟರಿ ಕ್ಲಬ್ ಕಾರ್ಯದರ್ಶಿ ಅಬೂಬಕ್ಕರ್, ಉಜಿರೆ ವೈದ್ಯಾಧಿಕಾರಿ ಅಕ್ಷತಾರಾಜ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ರೋಟರಿ ಕ್ಲಬ್ ಬೆಳ್ತಂಗಡಿಯ ಆಧ್ಯಕ್ಷರಾದ ಧನಂಜಯ ರಾವ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

ವ್ಯಾಕ್ಸಿನ್ ನೀಡುತ್ತಿದ್ದ ಕಾರ್ಯಕ್ರಮದ ವೇಳೆ ಮಂಗಳೂರು ಜಿಲ್ಲಾ ಆರೋಗ್ಯಾಧಿಕಾರಿ(DHO) ಡಾ.ಕಿಶೋರ್ ಬಂದು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

- Advertisement -
spot_img

Latest News

error: Content is protected !!