Saturday, June 6, 2026
Homeತಾಜಾ ಸುದ್ದಿಅಲ್ಲಾ ಹೋ ಅಕ್ಬರ್ ಘೋಷಣೆ ಕೂಗಿದ ಮುಸ್ಕಾನ್ ಳನ್ನು ತನಿಖೆಗೊಳಪಡಿಸಿ : ಸಿಎಂಗೆ ಉತ್ತರ ಕನ್ನಡ...

ಅಲ್ಲಾ ಹೋ ಅಕ್ಬರ್ ಘೋಷಣೆ ಕೂಗಿದ ಮುಸ್ಕಾನ್ ಳನ್ನು ತನಿಖೆಗೊಳಪಡಿಸಿ : ಸಿಎಂಗೆ ಉತ್ತರ ಕನ್ನಡ ಸಂಸದ ಅನಂತ ಕುಮಾರ್ ಹೆಗಡೆ ಪತ್ರ

- Advertisement -
- Advertisement -

ಕಾರವಾರ: ಹಿಜಾಬ್ ವಿವಾದದ ಗದ್ದಲದ ಸಂದರ್ಭದಲ್ಲಿ ಅಲ್ಲಾ ಹೋ ಅಕ್ಬರ್ ಎಂದು ಕಾಲೇಜು ಆವರಣದಲ್ಲಿ ಕೂಗಿ ಪ್ರಸಿದ್ಧಿ ಪಡೆದಿದ್ದ ಮಂಡ್ಯದ ಪಿಇಎಸ್ ಕಾಲೇಜಿನ ವಿದ್ಯಾರ್ಥಿನಿ ಬೀಬಿ ಮುಸ್ಕಾನ್ ಳನ್ನು ತನಿಖೆಗೊಳಪಡಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಉತ್ತರ ಕನ್ನಡ ಸಂಸದ ಅನಂತ ಕುಮಾರ್ ಹೆಗಡೆ ಪತ್ರ ಬರೆದಿದ್ದಾರೆ.

ಸಿಎಂಗೆ ಪತ್ರ ಬರೆದು ಒತ್ತಾಯಿಸಿರುವ ಸಂಸದ ಹೆಗಡೆ, ವಿದ್ಯಾರ್ಥಿನಿ‌ ಮುಸ್ಕಾನ್ ಗೆ ಹಿಜಾಬ್ ಷಡ್ಯಂತ್ರದ ಹಿಂದಿರುವ ಕಾಣದ ಕೈಗಳು ಮತ್ತು ನಿಷೇಧಿತ ಸಂಘಟನೆಗಳೊಂದಿಗೆ ಇರುವ ಸಂಬಂಧದ ಬಗ್ಗೆ ಕೂಲಂಕುಷವಾದ ತನಿಖೆ ನಡೆಸುವಂತೆ ಮನವಿ ಮಾಡಿದ್ದಾರೆ.

ಈ ಹಿಂದೆ ಹಿಜಾಬ್ ವಿವಾದ ತಾರಕಕ್ಕೇರಿದ್ದ ಸಂಧರ್ಭದಲ್ಲಿ ಮಂಡ್ಯದ ಪಿಇಎಸ್ ಕಾಲೇಜಿನ ವಿದ್ಯಾರ್ಥಿಗಳು ಹಿಜಾಬ್ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾಗ ಅಲ್ಲಾ ಹೋ ಅಕ್ಬರ್ ಎಂದು ಕೂಗಿದ್ದಳು. ಈ ವೀಡಿಯೋ ಜಗತ್ತಿನೆಲ್ಲೆಡೆ ಪ್ರಸಾರವಾಗಿತ್ತಲ್ಲದೇ, ಕೆಲವು ದಿನಗಳ ಹಿಂದೆ ಆಲ್ ಖೈದಾ ಮುಖ್ಯಸ್ಥ ಜವಾಹರಿ ಕೂಡಾ ಭಾರತದ ಸರ್ವಶ್ರೇಷ್ಠ ಮಹಿಳೆ ಎಂದು ಹೊಗಳಿದ್ದ ವೀಡಿಯೋ ಸಾಕಷ್ಟು ಸಂಚಲನ‌ ಮತ್ತು ವಿವಾದವನ್ನು ಸೃಷ್ಟಿಸಿತ್ತು.‌

- Advertisement -

Latest News

error: Content is protected !!