Sunday, April 28, 2024
Homeಕರಾವಳಿಉಡುಪಿಉಡುಪಿ: ನರೇಗಾ ಯೋಜನೆಯಡಿ ತುರ್ತಾಗಿ ಕಾಲು ಸಂಕಗಳನ್ನು ನಿರ್ಮಿಸಲು ಅವಕಾಶ: ಎಸ್.‌ ಅಂಗಾರ

ಉಡುಪಿ: ನರೇಗಾ ಯೋಜನೆಯಡಿ ತುರ್ತಾಗಿ ಕಾಲು ಸಂಕಗಳನ್ನು ನಿರ್ಮಿಸಲು ಅವಕಾಶ: ಎಸ್.‌ ಅಂಗಾರ

spot_img
- Advertisement -
- Advertisement -

ಉಡುಪಿ: ಕಾಲ್ತೋಡು ಗ್ರಾಮದಲ್ಲಿ ಬಾಲಕಿ ನೀರುಪಾಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಜನ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದ್ರಿಂದ ಎಚ್ಚೆತ್ತುಕೊಂಡ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಉಡುಪಿ ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಎಲ್ಲೆಲ್ಲಿ ಸಣ್ಣ ನದಿ, ತೋಡು ಹಾಗೂ ಹಳ್ಳಗಳನ್ನು ದಾಟಲು ಕಾಲುಸಂಕದ ಅವಶ್ಯಕತೆ ಇದೆ ಎಂಬುದನ್ನು ಪರಿಶೀಲಿಸಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದಾರೆ.

 ಈ ಬಗ್ಗೆ ಮಾತನಾಡಿದ ಎಸ್.‌ ಅಂಗಾರ, ನರೇಗಾ ಯೋಜನೆಯಡಿಯಲ್ಲಿ ತುರ್ತಾಗಿ ಕಾಲು ಸಂಕಗಳನ್ನು ನಿರ್ಮಿಸಲು ಅವಕಾಶ ಮಾಡಿಕೊಡಲಾಗಿದೆ ತಿಳಿಸಿದರು. ಕಾಲುಸಂಕಕ್ಕೆ ಅಂದಾಜು 7 4.5 ಲಕ್ಷ ಮೊತ್ತವನ್ನು ನರೇಗಾ ಯೋಜನೆಯಲ್ಲಿ ಒದಗಿಸಲು ಅವಕಾಶವಿದೆ. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, 20 ದಿನಗಳ ಒಳಗಾಗಿ ವರದಿ ಸಿದ್ಧಪಡಿಸಿ, ಕಾಲುಸಂಕ ಕಾಮಗಾರಿಗೆ ಕ್ರಮವಹಿಸುವಂತೆ ತಿಳಿಸಲಾಗಿದೆ. ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

- Advertisement -
spot_img

Latest News

error: Content is protected !!