Thursday, June 4, 2026
Homeಕರಾವಳಿಉಪ್ಪಿನಂಗಡಿಯ ವ್ಯಕ್ತಿ ಶಾರ್ಜಾದಲ್ಲಿ ಸಾವು: ಏರ್ ಪೋರ್ಟ್ ವರೆಗೆ ಬಂದರೂ ಈಡೇರಲಿಲ್ಲ ತಾಯ್ನಾಡಿಗೆ ಬರುವ ಆಸೆ

ಉಪ್ಪಿನಂಗಡಿಯ ವ್ಯಕ್ತಿ ಶಾರ್ಜಾದಲ್ಲಿ ಸಾವು: ಏರ್ ಪೋರ್ಟ್ ವರೆಗೆ ಬಂದರೂ ಈಡೇರಲಿಲ್ಲ ತಾಯ್ನಾಡಿಗೆ ಬರುವ ಆಸೆ

- Advertisement -
- Advertisement -

ಶಾರ್ಜಾ; ಉಪ್ಪಿನಂಗಡಿಯ ವ್ಯಕ್ತಿಯೊಬ್ಬರು ಅನಾರೋಗ್ಯದಿಂದ ಶಾರ್ಜಾದಲ್ಲಿ ಮೃತಪಟ್ಟ ಘಟನೆ ನಡೆದಿದೆ. ಪೆರಾಲಿಪಾಲಿಕೆ ಬಂದಾರು ಇಬ್ರಾಹೀಂ ಹಾಗು ಸಫಿಯಾ ರವರ ಪುತ್ರ ಇಕ್ಬಾಲ್ (39) ಮೃತರು.

ಕೆಸಿಎಫ್ ಅಲ್ ನಹ್ದ ಸೆಕ್ಟರ್ ಸದಸ್ಯರಾಗಿದ್ದ ಇಕ್ಬಾಲ್, ಕೆಲವು ದಿನಗಳ‌ ಹಿಂದೆ ಸ್ವಲ್ಪ ಮಟ್ಟದ ಅನಾರೋಗ್ಯದ ಕಾರಣದಿಂದ ಹಾಗೂ ಉದ್ಯೋಗದ ಸಮಸ್ಯೆಯಿಂದ ಊರಿಗೆ ಹೋಗಲು ಏರ್ ಪೋರ್ಟ್ ತನಕ ಹೋಗಿದ್ದರು. ಆದರೆ  ಏರ್ ಪೋರ್ಟ್ ನಿಂದ ಇಮ್ಮಿಗ್ರೇಶನ್ ಸಂಬಂಧಿಸಿದ ಕೆಲವು ಸಮಸ್ಯೆಗಳಿಂದ ಮನೆಗೆ ಹೋಗಲು ಸಾಧ್ಯವಾಗದೆ ಹಿಂದುರುಗಿ ರೂಮ್ ಗೆ ಹೋಗಿದ್ದರು.

ಅದೇ ದಿನ ರಾತ್ರಿ ( 01 /05 /2022 ) ಆರೋಗ್ಯದಲ್ಲಿ ತೀವ್ರ ಏರುಪೇರಾದ ಹಿನ್ನೆಲೆ KCF ಸಾಂತ್ವನ ವಿಭಾಗ ತಂಡದ ನಾಯಕರು ಹಾಗೂ ಇಕ್ಬಾಲ್ ನ ಸ್ನೇಹಿತ ಸವಾದ್ ರವರು ಹಾಸ್ಪಿಟಲ್ ಗೆ ಅಡ್ಮಿಟ್ ಮಾಡಿದ್ದರು. ಮುಂದಿನ ಚಿಕಿತ್ಸೆಗೆ ಬೇಕಾದ ವ್ಯವಸ್ಥೆಗಳನ್ನು ಮಾಡಿದ್ದರು. ತದನಂತರ ನಡೆದ ಆಪರೇಶನ್ ನಲ್ಲಿ ಸ್ವಲ್ಪ ಮಟ್ಟಿಗೆ ಇಕ್ಬಾಲ್ ಚೇತರಿಸಿದ್ದರು. ಆದರೆ ಮೊದಲಿನಂತೆ ಅವರು ಚೇತರಿಸಿಕೊಂಡಿರಲಿಲ್ಲ. ಕೆಲವು ದಿನಗಳಿಂದ ಕೋಮ ಸ್ಥಿತಿಯಲ್ಲಿ ಶಾರ್ಜಾ ಆಸ್ಪತ್ರೆಯಲ್ಲಿ ICU ನಲ್ಲಿದ್ದರು. ಆದರೆ ಇದೀಗ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

- Advertisement -

Latest News

error: Content is protected !!