Tuesday, April 30, 2024
Homeಕರಾವಳಿಆಣಿದ ವಿಚಾರ ಗೊತ್ತುಂಡತ್ತಾ ಬೊಕ್ಕ ಎಂಕುಲು ಇಂಬ್ಯನ್  ಬುಡ್ಪುನಾ?: ಚರಣ್ ರಾಜ್ ರೈ ಕೊಲೆ ಬಗ್ಗೆ...

ಆಣಿದ ವಿಚಾರ ಗೊತ್ತುಂಡತ್ತಾ ಬೊಕ್ಕ ಎಂಕುಲು ಇಂಬ್ಯನ್  ಬುಡ್ಪುನಾ?: ಚರಣ್ ರಾಜ್ ರೈ ಕೊಲೆ ಬಗ್ಗೆ ಮಹತ್ವದ ಸುಳಿವು ನೀಡಿದ ಸ್ನೇಹಿತ ನವೀನ್ ಕುಮಾರ್ :  ಕಿಶೋರ್ ಪೂಜಾರಿ ಕಲ್ಲಡ್ಕ ತಂಡದಿಂದ ಕೃತ್ಯ?

spot_img
- Advertisement -
- Advertisement -

ಪುತ್ತೂರು: ಕೊಳ್ತಿಗೆ ಗ್ರಾಮದ ಪೆರ್ಲಂಪಾಡಿಯಲ್ಲಿ ಚರಣ್ ರಾಜ್ ರೈ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಕಿಶೋರ್ ಪೂಜಾರಿ ಕಲ್ಲಡ್ಕ ತಂಡದ ವಿರುದ್ಧ ಪ್ರಕರಣ ದಾಖಲಾಗಿದೆ.

ಹಿಂದೂ ಸಂಘಟನೆ ಕಾರ್ತಿಕ್ ಮೇರ್ಲ ಎಂಬವರ ಹತ್ಯೆ ಆರೋಪಿಯಾಗಿದ್ದ ಚರಣ್ ರಾಜ್ ಅವರನ್ನು ಶನಿವಾರ ಸಂಜೆ ಮಾರಕ ಆಯುಧಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಈ ಬಗ್ಗೆ ಚರಣ್ ರಾಜ್ ಜತೆಗಿದ್ದ ನವೀನ್ ನೀಡಿದ ದೂರಿನಂತೆ ಕಿಶೋರ್ ಪೂಜಾರಿ ತಂಡ ಈ ಕೃತ್ಯ ಎಸಗಿರುವ ಬಗ್ಗೆ ಸುಳಿವು ದೊರೆತಿದೆ. ಈ ಬಗ್ಗೆ ಕೊಲೆಯಾಗುವಾಗ ಚರಣ್ ರಾಜ್ ಜೊತೆಗಿದ್ದ ಅವರ ಸ್ನೇಹಿತ ನವೀನ್ ಕುಮಾರ್ ಪೊಲೀಸರಿಗೆ ದೂರು ನೀಡಿದ್ದಾರೆ.

 ಕೊಲೆಯಾದ ಚರಣರಾಜ್ ಪತ್ನಿಯ ತಂದೆ ಕಿಟ್ಟಣ್ಣ ರೈ ಎಂಬುವರು ಕೊಳ್ತಿಗೆ ಗ್ರಾಮದ ಪೆರ್ಲಂಪಾಡಿ ಎಂಬಲ್ಲಿ ಮೆಡಿಕಲ್ ಶಾಪ್ ಪ್ರಾರಂಭಿಸುತ್ತಿದ್ದು, ಈ ಮೆಡಿಕಲ್ ಶಾಪ್ ನ ಪೂರ್ವತಯಾರಿ ಕೆಲಸಕ್ಕೆ ಸಹಾಯ ಮಾಡಲು ಚರಣ್ ರಾಜ್ ನ ಜೊತೆಗೆ ಆಗಾಗ ಪೆರ್ಲಂಪಾಡಿ ಗೆ ಬಂದು ಹೋಗುತ್ತಿದ್ದರು.  ಅದರಂತೆ ಈ ದಿನ ದಿನಾಂಕ 04-06-2022ರಂದು ನವೀನ್ ಕುಮಾರ್ ಸ್ನೇಹಿತ ಚರಣ್ ರಾಜ್ ನ  ಜೊತೆಗೆ ಮಾರುತಿ ರಿಡ್ಜ್ ಕಾರ್ ನಲ್ಲಿ 11-00ಗಂಟೆಗೆ ಪೆರ್ಲಂಪಾಡಿ ಎಂಬಲ್ಲಿಗೆ ಬಂದು  ಬಂದು ಮೆಡಿಕಲ್ ಶಾಪ್ ನ ಕೆಲಸಕಾರ್ಯಗಳಲ್ಲಿ ತೊಡಗಿದ್ದರು.  ಸಂಜೆ ಸಮಯ ಸುಮಾರು 04:15 ಗಂಟೆಗೆ ನವೀನ್ ಕುಮಾರ್ ಮೆಡಿಕಲ್ ಶಾಪ್ ನ ಒಳಗೆ ಕೆಲಸಕಾರ್ಯಗಳಲ್ಲಿ ನಿರತರಾಗಿದ್ದ ವೇಳೆ ಮೆಡಿಕಲ್ ಶಾಪ್ ನ ಹೊರಗೆ ಕಾರಿನ ಬಳಿ ಮೊಬೈಲ್ ನಲ್ಲಿ ಮಾತನಾಡುತ್ತಿದ್ದ ಚರಣ್ ರಾಜ್ ಗೆ ಯಾರೋ ಹಲ್ಲೆ ಮಾಡಿದ್ದಾರೆ. ಈ ವೇಳೆ  ಚರಣ್ ರಾಜ್ ಬೊಬ್ಬೆ ಹೊಡೆದಿದ್ದನ್ನು ಕೇಳಿದ ನವೀನ್ ಕುಮಾರ್ ಅಂಗಡಿಯ ಹೊರಗೆ  ಬಂದಾಗ ಯಾರೋ ಅಪರಿಚಿತ ಮೂವರು ಮಂದಿ ಕೈಯಲ್ಲಿ ತಲವಾರು ಹಿಡಿದು ಕೊಂಡು ನೆಲದಲ್ಲಿ ಬಿದ್ದಿದ್ದ ಚರಣ್ ರಾಜ್ ಗೆ ಹೊಡೆಯುವುದನ್ನು ಕಂಡಾಗ ತಡೆಯಲು ಮುಂದೆ ಹೋದಾಗ ನವೀನ್ ಅವರಿಗೆ ಪರಿಚಯ ಇರುವ ಕಲ್ಲಡ್ಕದ ಕಿಶೋರ್ ಪೂಜಾರಿಯವರು ಮುಂದೆ ಬಂದು ಮುಂದಕ್ಕೆ ಹೋಗದಂತೆ ನವೀನ್ ರನ್ನು ತಡೆದು ತುಳುವಿನಲ್ಲಿ  ಆಣಿದ ವಿಚಾರ ಗೊತ್ತುಂಡತ್ತಾ  ಬೊಕ್ಕ  ಎಂಕುಲು ಇಂಬ್ಯನ್  ಬುಡ್ಪುನಾ? ಎಂಬುದಾಗಿ ಹೇಳಿ ಅವರು ಬಂದ ಮೋಟಾರ್ ಸೈಕಲ್ನಲ್ಲಿ ಅಮ್ಚಿನಡ್ಕ ದ ಕಡೆಗೆ ಹೋಗಿದ್ದಾರೆ.  ಆರೋಪಿಗಳು ತಲವಾರು ಹಾಗೂ ರಾಡ್ ನಿಂದ ಹಲ್ಲೆ  ಮಾಡಿದ ಪರಿಣಾಮ ಚರಣ್ ರಾಜನ ಕುತ್ತಿಗೆಗೆ ತೀವ್ರವಾದ ಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ನವೀನ್ ಕುಮಾರ್ ತಾನು ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ .

ಈ ಹಿಂದೆ ಆರ್ಯಾಪು ಗ್ರಾಮದ ಮೇರ್ಲ ವಾಸಿ ಕಾರ್ತಿಕ್ ಎಂಬವರನ್ನು ಸಂಪ್ಯ ಪೊಲೀಸ್ ಠಾಣೆಯ ಮುಂಭಾಗ ಕೊಲೆಗೈದ ಪ್ರಕರಣದಲ್ಲಿ ಚರಣ್ ರಾಜ್ ಆರೋಪಿಯಾಗಿದ್ದು ಇದೇ ದ್ವೇಷದಿಂದ ಕಾರ್ತಿಕ್ ನ ಸ್ನೇಹಿತ ಕಿಶೋರ್ ಹಾಗೂ ಇತರರು ಈ ಕೃತ್ಯ ಎಸಗಿದ್ದು ಆರೋಪಿಗಳನ್ನು ಕೃತ್ಯದ ವೇಳೆ ನಾನು ನೋಡಿದ್ದು ಮುಂದಕ್ಕೆ ನೋಡಿದರೆ ಗುರುತಿಸುತ್ತೇನೆ ಎಂಬುವುದಾಗಿ ನವೀನ್ ಕುಮಾರ್ ದೂರಿನಲ್ಲಿ ತಿಳಿಸಿದ್ದಾರೆ.

ಮೆಡಿಕಲ್ ಶಾಪ್ ನ ಹೊರಗೆ ಕಾರಿನ ಬಳಿ ಮೊಬೈಲ್ ನಲ್ಲಿ ಮಾತನಾಡುತ್ತಿದ್ದ ಚರಣ್ ರಾಜ್ ಮೇಲೆ ಮೂವರು ತಲವಾರಿನಿಂದ ಹಲ್ಲೆ ನಡೆಸಿದ್ದು ಇದನ್ನು ತಡೆಯಲು ನವೀನ್ ಹೋದಾಗ ಇವರ ಪೈಕಿ ಪರಿಚಿತ ಕಿಶೋರ್ ಪೂಜಾರಿ ಇದ್ದದನ್ನು ಗುರುತಿಸಿದ್ದಾಗಿ ದೂರಿನಲ್ಲಿ ತಿಳಿಸಲಾಗಿದೆ.

- Advertisement -
spot_img

Latest News

error: Content is protected !!