Saturday, May 18, 2024
Homeಮನರಂಜನೆಕಾಂಡೋಮ್‍ ನಿಂದ ತಯಾರಿಸಿದ ಬಟ್ಟೆ ಧರಿಸಿರುವ ನಟ ರಾಮ್ ಚರಣ್ ತೇಜಾ ಪತ್ನಿ ಉಪಾಸನಾ ಕೊನಿಡೆಲ್ಲಾ

ಕಾಂಡೋಮ್‍ ನಿಂದ ತಯಾರಿಸಿದ ಬಟ್ಟೆ ಧರಿಸಿರುವ ನಟ ರಾಮ್ ಚರಣ್ ತೇಜಾ ಪತ್ನಿ ಉಪಾಸನಾ ಕೊನಿಡೆಲ್ಲಾ

spot_img
- Advertisement -
- Advertisement -

ಕೊರೊನಾ ಲಾಕ್ ಡೌನ್ ಹಿನ್ನಲೆಯಲ್ಲಿ ಮನೆಯಲ್ಲೇ ಇರುವ ತೆಲುಗು ನಟ ರಾಮ್‍ಚರಣ್ ತೇಜಾ ಅವರ ಪತ್ನಿ ಉಪಾಸನಾ ಕೊನಿಡೆಲ್ಲಾ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಫೋಟೋವೊಂದು ಭಾರಿ ವೈರಲ್ ಆಗಿದ್ದು, ಎಲ್ಲರ ಹುಬ್ಬೇರುವಂತೆ ಮಾಡಿದೆ.

ಈ ಫೋಟೋದಲ್ಲಿ ಉಪಾಸನಾ ಡಿಫೆಕ್ಟೆಡ್ ಕಾಂಡೋಮ್‍ನಿಂದ ತಯಾರಿಸಿದ ಬಟ್ಟೆಯನ್ನು ಧರಿಸಿದ್ದಾರೆ. ಫೋಟೋ ಟ್ವೀಟ್ ಮಾಡಿ ಕೆಲ ಸಾಲುಗಳನ್ನು ಬರೆದಿರುವ ಅವರು, ಸಸ್ಟೇನೆಬಲ್ ಫ್ಯಾಷನ್ ನಮ್ಮ ಮುಂದಿನ ಭವಿಷ್ಯವಾಗಿದೆ. ಕೊರೊನಾ ತುರ್ತು ಪರಿಸ್ಥಿತಿಯ ಈ ಸಂದರ್ಭದಲ್ಲಿ ಸ್ಕ್ರ್ಯಾಪ್‍ಗಳನ್ನು ಧರಿಸುವ ಧೈರ್ಯ ನಿಮಗಿದೆಯೇ ಎಂದು ಪ್ರಶ್ನಿಸಿದ್ದಾರೆ.

ಆರ್ಗಾಂಝಾ ಟಾಪ್‍ನ್ನು ಸ್ಥಳೀಯ ವಿನ್ಯಾಸಕಾರರು ತಿರಸ್ಕರಿಸಿದ ಹಾಗೂ ಹಳೆ ಬಟ್ಟೆಗಳಿಂದ ತಯಾರಿಸಲಾಗಿದೆ. ಲ್ಯಾಟೆಕ್ಸ್ ಸ್ಕರ್ಟ್‍ನ್ನು ಡ್ಯಾಮೇಜ್ ಆಗಿದ್ದ ಕಾಂಡೋಮ್‍ಗಳಿಂದ ತಯಾರಿಸಲಾಗಿದೆ. ಈ ಕ್ರಿಯೇಟಿವಿಟಿಯನ್ನು ಕ್ಯಾನ್ಸಲ್ಡ್ ಪ್ಲ್ಯಾನ್ಸ್ ಕ್ಲಬ್ ಹಾಗೂ ಮಲ್ಲಿಕಾ ರೆಡ್ಡಿಯವರಿಂದ ತಯಾರಿಸಲಾಗಿದೆ. ಅಲ್ಲದೆ ಮೇಡ್ ಫ್ರಮ್ ವೇಸ್ಟ್ ಎಂದು ಹ್ಯಾಶ್ ಟ್ಯಾಗ್‍ನೊಂದಿಗೆ ಬರೆದುಕೊಂಡಿದ್ದಾರೆ.

ಉಪಾಸನಾ ಅವರ ಟ್ವೀಟ್‍ಗೆ ಅಭಿಮಾನಿಗಳು ಕಮೆಂಟ್ ಮಾಡಿದ್ದು, ನಿಜವಾದ ಪಾತ್ ಬ್ರೇಕರ್, ಅತ್ಯದ್ಭುತ ಶಕ್ತಿ ನಿಮ್ಮಲ್ಲಿದೆ. ಅನೇಕರ ಜೀವನದಲ್ಲಿ ವಿಚಾರಗಳಿಗೆ ನೀವು ಪ್ರಭಾವ ಬೀರಿದ್ದೀರಿ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಕಮೆಂಟ್ ಮಾಡಿ, ದಿನದಿಂದ ದಿನಕ್ಕೆ ನಿಮ್ಮ ಬಗ್ಗೆ ನಾನು ಇಂಪ್ರೆಸ್ ಆಗುತ್ತಿದ್ದೇನೆ ಎಂದಿದ್ದಾರೆ.

- Advertisement -
spot_img

Latest News

error: Content is protected !!