Friday, June 5, 2026
Homeಅಪರಾಧಮಂಗಳೂರು ಪೊಲೀಸರಿಂದ ಎಚ್ಚರಿಕೆ ಮಾಹಿತಿ : ಕರಾವಳಿಯಲ್ಲಿ ಸಕ್ರಿಯವಾಗಿದೆಯಂತೆ ಉತ್ತರಭಾರತದ ದರೋಡೆಕೋರರ ಟೀಮ್

ಮಂಗಳೂರು ಪೊಲೀಸರಿಂದ ಎಚ್ಚರಿಕೆ ಮಾಹಿತಿ : ಕರಾವಳಿಯಲ್ಲಿ ಸಕ್ರಿಯವಾಗಿದೆಯಂತೆ ಉತ್ತರಭಾರತದ ದರೋಡೆಕೋರರ ಟೀಮ್

- Advertisement -
- Advertisement -

ಮಂಗಳೂರು: ನಗರದ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಕಾರಿನ ಗಾಜು ಒಡೆದು ನಗದು, ಬೆಲೆಬಾಳುವ ಸೊತ್ತುಗಳನ್ನು ದರೋಡೆ ಮಾಡುವ ಉತ್ತರ ಭಾರತದ ತಂಡವೊಂದು ಸಕ್ರಿಯವಾಗಿದ್ದು, ಆರೋಪಿಗಳಿಗೆ ಶೋಧ ಕಾರ್ಯ ನಡೆದಿದೆ.

ನಗರದ ಉರ್ವಸ್ಟೋರ್, ಬಂದರು ಪೊಲೀಸ್ ಠಾಣಾ ವ್ಯಾಪ್ತಿಯ ಬಲ್ಮಠದಲ್ಲಿ ತಂಡ ಕೃತ್ಯ ನಡೆಸಿದೆ. ನಗರದ ಉರ್ವಸ್ಟೋರ್ ಮುಡಾ ಕಚೇರಿ ಬಳಿ ಶುಕ್ರವಾರ ಮಧ್ಯಾಹ್ನ ಕಾರಿನ ಗಾಜು ಒಡೆದು ಲ್ಯಾಪ್‌ಟಾಪ್, ಐಪೋನ್ ಮತ್ತು ಬ್ಯಾಂಕ್‌ಗಳ ಚೆಕ್ ಹಾಳೆಗಳನ್ನು ಕಳವು ಮಾಡಿದೆ. ಬಲ್ಮಠದಲ್ಲಿ ಕಾರೊಂದರ ಗ್ಲಾಸ್ ಮುರಿದ ತಂಡ 40ಸಾವಿರ ರೂ. ಹಣವನ್ನು ಎಗರಿಸಿ ಪರಾರಿಯಾಗಿದೆ. ಅಲ್ಲದೇ ಉಡುಪಿಯಲ್ಲೂ ಇಂದು ಅಂತಹದ್ದೇ ಘಟನೆ ನಡೆದಿದೆ. ಇದೇ ರೀತಿ ನಾಲ್ಕು ಕಡೆ ಕೃತ್ಯವೆಸಗಿದೆ ಎಂದು ತಿಳಿದು ಬಂದಿದೆ.

ಉತ್ತರ ಭಾರತದ ಗ್ಯಾಂಗ್ ಈ ಕೃತ್ಯದಲ್ಲಿ ಸಕ್ರಿಯವಾಗಿದ್ದು, ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ. ಶನಿವಾರ ಮತ್ತು ರವಿವಾರ ವೀಕೆಂಡ್ ಕರ್ಫ್ಯೂ ಇವರು ಕಾರಣ ಈ ತಂಡ ಕೃತ್ಯವೆಸಗುವ ಸಾಧ್ಯತೆ ಕಡಿಮೆ. ಸೋಮವಾರದಿಂದ ಮತ್ತೆ ನಗರದ ಜನತೆ ಎಚ್ಚರವಹಿಸಬೇಕಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

Latest News

error: Content is protected !!