Friday, June 5, 2026
Homeಕರಾವಳಿಕಡಬ: ರೈಲಿನಡಿಗೆ ಬಿದ್ದು ಯುವಕ ಮೃತ್ಯು

ಕಡಬ: ರೈಲಿನಡಿಗೆ ಬಿದ್ದು ಯುವಕ ಮೃತ್ಯು

- Advertisement -
- Advertisement -

ಕಡಬ: ಚಲಿಸುತ್ತಿದ್ದ ರೈಲಿನ ಅಡಿಗೆ ಬಿದ್ದು ಯುವಕನೋರ್ವ ಮೃತಪಟ್ಟಿರುವ ಘಟನೆ ಎಡಮಂಗಲದಲ್ಲಿ ನಡೆದಿದೆ. ಮಂಗಳೂರು – ಸುಬ್ರಹ್ಮಣ್ಯ ಮಾರ್ಗದ ರೈಲು ನಿಲ್ದಾಣದ ನಡುವಿನ ಎಡಮಂಗಲದಲ್ಲಿ ಶನಿವಾರ ಸಂಜೆ ಘಟನೆ ನಡೆದಿದೆ.

ಮೃತ ಯುವಕನನ್ನು ಕಡಬ ತಾಲೂಕು ಎಡಮಂಗಲ ನಿವಾಸಿ ಭರತ ಎಂದು ಗುರುತಿಸಲಾಗಿದೆ. ಮೃತ ಭರತನಿಗೆ 22 ವರ್ಷ ವಯಸ್ಸಾಗಿತ್ತು. ಶನಿವಾರ ಸಂಜೆ ರೈಲು ಹಳಿಯ ಮೇಲೆ ಭರತನ ಮೃತದೇಹ ದೊರೆತಿದೆ. ಘಟನೆಗೆ ಕಾರಣದ ಬಗ್ಗೆ ಹೆಚ್ಚಿನ ವಿವರ ಇನ್ನಷ್ಟೇ ತಿಳಿದು ಬರಬೇಕಿದೆ.

- Advertisement -

Latest News

error: Content is protected !!