Tuesday, May 7, 2024
Homeಪ್ರಮುಖ-ಸುದ್ದಿಅನ್ಲಾಕ್-2 ಗಾಗಿ ಕೇಂದ್ರದಿಂದ ಸಿದ್ಧವಾಗಿದೆ ಮಾರ್ಗಸೂಚಿ.. ಅನ್ಲಾಕ್-2 ನಲ್ಲಿ ಏನಿರುತ್ತೆ ಏನ್ ಇರಲ್ಲ ?

ಅನ್ಲಾಕ್-2 ಗಾಗಿ ಕೇಂದ್ರದಿಂದ ಸಿದ್ಧವಾಗಿದೆ ಮಾರ್ಗಸೂಚಿ.. ಅನ್ಲಾಕ್-2 ನಲ್ಲಿ ಏನಿರುತ್ತೆ ಏನ್ ಇರಲ್ಲ ?

spot_img
- Advertisement -
- Advertisement -

ನವದೆಹಲಿ:  ದೇಶದಲ್ಲಿ ‘ಅನ್ಲಾಕ್ – 2’ ಗಾಗಿ ಕೇಂದ್ರ ಗೃಹ ಸಚಿವಾಲಯ ಹೊಸ ಮಾರ್ಗಸೂಚಿಗಳನ್ನು ಜಾರಿಗೊಳಿಸಿದೆ. ಜುಲೈ 1ರಿಂದ ಈ ಮಾರ್ಗಸೂಚಿಗಳು ಜಾರಿಗೆ ಬರಲಿದೆ. ಅದರಂತೆ ಕೆಲ ಚಟುವಟಿಕೆಗಳನ್ನು ಹಂತ – ಹಂತವಾಗಿ ಪುನಃ ತೆರೆಯುವ ಪ್ರಕ್ರಿಯೆಗೆ ಅನುಮೋದನೆ ದೊರಕಿದ್ದು, ದೇಶೀಯ ವಿಮಾನಗಳು ಮತ್ತು ಪ್ರಯಾಣಿಕರ ರೈಲುಗಳನ್ನು ಹಂತ -ಹಂತವಾಗಿ ತೆರೆಯುವ ಪ್ರಕ್ರಿಯೆ ನಡೆಯಲಿದೆ.

ಜುಲೈ 31ರವರೆಗೆ ಶಾಲೆಗಳು, ಕಾಲೇಜುಗಳು ಮತ್ತು ತರಬೇತಿ ಸಂಸ್ಥೆಗಳು ಮುಚ್ಚಲ್ಪಡುತ್ತವೆ. ರಾಜ್ಯಗಳೊಂದಿಗೆ ವ್ಯಾಪಕ ಸಮಾಲೋಚನೆಯ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಗೃಹ ಇಲಾಖೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಕಂಟೇನ್‌ಮೆಂಟ್ ವಲಯದಲ್ಲಿ ಜುಲೈ 31ರವರೆಗೆ ಲಾಕ್‌ಡೌನ್ ಜಾರಿಯಲ್ಲಿರುತ್ತದೆ. ಅಗತ್ಯ ಸೇವೆಗಳಿಗೆ ಮಾತ್ರ ಅನುಮತಿ ನೀಡಲಾಗುತ್ತದೆ.

ಇನ್ನು ಶಿಫ್ಟ್​ಗಳಲ್ಲಿ ಕೆಲಸ ಮಾಡುವ ಕೈಗಾರಿಕಾ ಘಟಕಗಳ ತಡೆರಹಿತ ಕಾರ್ಯಾಚರಣೆ, ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಸರಕುಗಳ ರವಾನೆ, ಸರಕುಗಳನ್ನು ಲೋಡ್ ಮತ್ತು ಅನ್​ಲೋಡ್ ಮಾಡುವುದು, ಬಸ್, ರೈಲು ಮತ್ತು ವಿಮಾನಗಳಿಂದ ಬಂದ ವ್ಯಕ್ತಿಗಳನ್ನು ತಮ್ಮ ಸ್ಥಳಗಳಿಗೆ ಸ್ಥಳಾಂತರಿಸುವುದಕ್ಕಾಗಿ ರಾತ್ರಿ ಕರ್ಫ್ಯೂನಲ್ಲಿ ಅವರಿಗೆ ವಿನಾಯಿತಿ ನೀಡಲಾಗಿದೆ.

- Advertisement -
spot_img

Latest News

error: Content is protected !!