Saturday, May 11, 2024
Homeತಾಜಾ ಸುದ್ದಿಪ್ಲೈ ಸ್ಟೋರ್ ನಿಂದ ಟಿಕ್ ಟಾಕ್ ಗೆ ಗೇಟ್ ಪಾಸ್

ಪ್ಲೈ ಸ್ಟೋರ್ ನಿಂದ ಟಿಕ್ ಟಾಕ್ ಗೆ ಗೇಟ್ ಪಾಸ್

spot_img
- Advertisement -
- Advertisement -

ನವದೆಹಲಿ :  ನಿನ್ನೆಯಷ್ಟೇ ಕೇಂದ್ರ ಸರ್ಕಾರ 59 ಚೀನೀ ಆ್ಯಪ್ ಗಳನ್ನು ಬ್ಯಾನ್ ಮಾಡಿ ಆದೇಶ ಹೊರಡಿಸಿತ್ತು. ಈ ಬಗ್ಗೆ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ ನಿನ್ನೆ ಮಾಹಿತಿ ನೀಡಿತ್ತು. ಇದು ಟಿಕ್ ಟಾಕ್ ಪ್ರಿಯರಿಗೆ ಬೇಸರ ಮೂಡಿಸಿತ್ತು.

ನಿನ್ನೆ ಕೇಂದ್ರದಿಂದ ಟಿಕ್ ಟಾಕ್ ಸೇರಿದಂತೆ 59 ಚೀನೀ ಆ್ಯಪ್ ಗಳಿಗೆ ನಿಷೇಧ ಅನ್ನೋ ವಿಚಾರ ಹೊರ ಬೀಳುತ್ತಿದ್ದಂತೆ ಇತ್ತ ಪ್ಲೈ ಸ್ಟೋರ್ ನಲ್ಲಿ ಟಿಕ್ ಟಾಕ್ ಆ್ಯಪ್ ನಾಪತ್ತೆಯಾಗಿದೆ. ಪ್ಲೈ ಸ್ಟೋರ್ ನಿಂದ ಟಿಕ್ ಟಾಕ್ ಆ್ಯಪ್ ಗೆ ಗೇಟ್ ಪಾಸ್ ಸಿಕ್ಕಿದೆ. ಕೇವಲ ಟಿಕ್ ಟಾಕ್ ಮಾತ್ರವಲ್ಲ. ಹಲೋ ಸೇರಿದಂತೆ ಇನ್ನೂ ಕೆಲವು ಚೀನೀ ಆ್ಯಪ್ ಗಳು ಪ್ಲೇ ಸ್ಟೋರ್ ಗೆ ಟಾಟಾ ಹೇಳಿವೆ. ಇದೀಗ ಒಂದೊಂದೇ ಚೈನೀಸ್ ಆ್ಯಪ್ ಗಳನ್ನು ಪ್ಲೈ ಸ್ಟೋರ್ ನಿಂದ ತೆಗೆದು ಹಾಕಲಾಗುತ್ತಿದ್ದು, ನಿಧಾನಕ್ಕೆ ಎಲ್ಲಾ 59 ಚೀನೀ ಆ್ಯಪ್ ಗಳು ಪ್ಲೈ ಸ್ಟೋರ್ ನಿಂದ ಮಂಗ ಮಾಯವಾಗಲಿವೆ.

- Advertisement -
spot_img

Latest News

error: Content is protected !!