Friday, June 5, 2026
Homeಕರಾವಳಿಬೆಳ್ತಂಗಡಿಯ ಗುರುವಾಯನಕೆರೆಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ

ಬೆಳ್ತಂಗಡಿಯ ಗುರುವಾಯನಕೆರೆಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ

- Advertisement -
- Advertisement -

ಬೆಳ್ತಂಗಡಿ: ಇಲ್ಲಿನ ಕುವೆಟ್ಟು ಗ್ರಾಮದ ಗುರುವಾಯನ ಕೆರೆ ನೀರಿನಲ್ಲಿ ಅಪರಿಚಿತ ವ್ಯಕ್ತಿಯೋರ್ವನ ಮೃತದೇಹ ಪತ್ತೆಯಾಗಿದೆ.

ಇಂದು ಬೆಳಗ್ಗೆ ಗುರುವಾಯನಕೆರೆಯಲ್ಲಿ ಅಪರಿಚಿತ ಶವ ಪತ್ತೆಯಾಗಿದೆ. ಬೆಳಗ್ಗೆ ಸ್ಥಳೀಯರಿಗೆ ಶವ ಕೆರೆಯಲ್ಲಿ ಕೆಳಮುಖವಾಗಿ ತೇಲುತ್ತಿರುವುದು ಕಂಡು ಬಂದಿದೆ. ಕೂಡಲೇ ಬೆಳ್ತಂಗಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಬೆಳ್ತಂಗಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಇದು ಆಕಸ್ಮಿಕ ಮರಣವೋ ಅಥವಾ ಆತ್ಮಹತ್ಯೆಯೋ ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ.ಅಲ್ಲದೇ ವ್ಯಕ್ತಿಯ ಬಗ್ಗೆ ಕೂಡ ಮಾಹಿತಿ ಗೊತ್ತಾಗಬೇಕಿದೆ.

- Advertisement -

Latest News

error: Content is protected !!