Saturday, May 4, 2024
Homeಕರಾವಳಿಉಡುಪಿಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ ಮಂಗಳೂರಿನ ದೆವ್ವದ ವಿಡಿಯೋ: ನಿಜಕ್ಕೂ ಈ ವಿಡಿಯೋದಲ್ಲಿರೋದು ಭೂತಾನಾ?

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ ಮಂಗಳೂರಿನ ದೆವ್ವದ ವಿಡಿಯೋ: ನಿಜಕ್ಕೂ ಈ ವಿಡಿಯೋದಲ್ಲಿರೋದು ಭೂತಾನಾ?

spot_img
- Advertisement -
- Advertisement -

ಮಂಗಳೂರು: ಭೂತ, ದೆವ್ವ ಇದೆಯೋ ಇಲ್ವೋ ಅನ್ನೋ ಚರ್ಚೆ ಇಂದು ನಿನ್ನೆಯದಲ್ಲ. ಇದೀಗ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋವೊಂದು ಭಾರೀ ಸದ್ದು ಮಾಡುತ್ತಿದೆ. ಕರಾವಳಿ ಭಾಗದ್ದು ಎನ್ನಲಾಗುತ್ತಿರುವ ಈ ವಿಡಿಯೋದಲ್ಲಿ ಕಾಣಿಸುತ್ತಿರುವ ಅಜ್ಜ ದೆವ್ವ ಅನ್ನೋ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ನಡೆಯತ್ತಿದೆ.

ವಾಹನದಲ್ಲಿ ಕುಳಿತ ಯುವಕರು ಈ ವಿಡಿಯೋವನ್ನು ಮಾಡಿದ್ದು ಇದರಲ್ಲಿ ತುಳುವಿನಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ. ಹಾಗಾಗಿ ಇದು ಕರಾವಳಿ ಭಾಗದ ವಿಡಿಯೋ ಅನ್ನೋದು ಸ್ಪಷ್ಟವಾಗುತ್ತಿದೆ. ಇನ್ನು ವಿಡಿಯೋದಲ್ಲಿ ವೃದ್ಧರೊಬ್ಬರು ನಡೆದುಕೊಂಡು ಹೋಗುವುದನ್ನು ನೋಡಬಹುದಾಗಿದೆ. ಇದೇ ಭೂತ ಅಂತಾ ಹೇಳಲಾಗುತ್ತಿದೆ.

ಇನ್ನು  ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ. ಇದು ಮಂಗಳೂರಿನಲ್ಲಿ ನಡುರಾತ್ರಿಯಲಿ ಕಂಡುಬಂದಿರುವ ಭೂತ ಎಂದು ವೈರಲ್​ ಆಗಿದೆ. ಆದರೆ ಇದನ್ನು ಬೇಕೆಂತಲೇ ಸೃಷ್ಟಿ ಮಾಡಿದ್ದೋ ಅಥವಾ ವೃದ್ಧ ನಿಜವಾಗಿಯೂ ಹೋಗುತ್ತಿದ್ದಾಗ ವಿಡಿಯೋ ಮಾಡಿದ್ದೋ ಗೊತ್ತಿಲ್ಲ. ಒಟ್ಟಿನಲ್ಲಿ ನೋಡಿದರೆ ಭೂತ ಹೋದಂತೆ ಕಾಣುತ್ತಿರೋದು ಮಾತ್ರ ಸುಳ್ಳಲ್ಲ.

- Advertisement -
spot_img

Latest News

error: Content is protected !!