Friday, June 5, 2026
Homeಇತರಉಳ್ಳಾಲ: ನೇತ್ರಾವತಿ ನದಿಯಲ್ಲಿ ಅಪರಿಚಿತ ಯುವತಿಯ ಮೃತದೇಹ ಪತ್ತೆ...!

ಉಳ್ಳಾಲ: ನೇತ್ರಾವತಿ ನದಿಯಲ್ಲಿ ಅಪರಿಚಿತ ಯುವತಿಯ ಮೃತದೇಹ ಪತ್ತೆ…!

- Advertisement -
- Advertisement -

ಉಳ್ಳಾಲ: ಹೊಯ್ಗೆಬಜಾರ್‌ನ ಸಮುದ್ರದ ದಡದಲ್ಲಿ ಅಪರಿಚಿತ ಯುವತಿಯ ಮೃತದೇಹ ಭಾನುವಾರ ಬೆಳಗ್ಗೆ ಪತ್ತೆಯಾಗಿದೆ.

ಮಂಗಳೂರು ಧಕ್ಕೆಯ ಸಮೀಪ ಎಡಭಾಗ ನದಿಯಲ್ಲಿ ಮೃತದೇಹ ತೇಲಿಬರುತಿತ್ತು. ಇದನ್ನು ಗಮನಿಸಿದ ಮೀನುಗಾರಿಕೆಯಿಂದ ವಾಪಸ್ಸಾಗುತ್ತಿದ್ದ ದೋಣಿಯವರು ಉಳ್ಳಾಲ ಉಳಿಯ ನಿವಾಸಿ ನಾಡದೋಣಿಯಲ್ಲಿ ಮೀನುಗಾರಿಕೆ ನಡೆಸುತ್ತಿದ್ದವರಿಗೆ ಮಾಹಿತಿ ನೀಡಿದ್ದರು. ತಕ್ಷಣ ಮೃತದೇಹವಿದ್ದ ಸ್ಥಳಕ್ಕೆ ತೆರಳಿದ ಇಬ್ಬರು ಮೀನುಗಾರರು ಮೃತದೇಹವನ್ನು ಹೊಯ್ಗೆಬಜಾರ್ ದಡಕ್ಕೆ ತಲುಪಿಸುವಲ್ಲಿ ಯಶಸ್ವಿಯಾದರು.

ಸುಮಾರು 20-35 ರ ಒಳಗಿನ ಯುವತಿಯಾಗಿದ್ದು, ಪ್ಯಾಂಟ್ ಹಾಗೂ ಟೀಶರ್ಟ್‌ ಧರಿಸಿದ್ದಳು. ಆತ್ಮಹತ್ಯೆಯೋ ಅಥವಾ ಬೇರೆ ಕಾರಣದಿಂದ ಮೃತಪಟ್ಟಿರುವುದೋ ಎನ್ನುವುದು ಪೊಲೀಸ್ ತನಿಖೆಯಿಂದ ತಿಳಿದುಬರಬೇಕಿದೆ. ಪಾಂಡೇಶ್ವರ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ತನಿಖೆ ಆರಂಭಿಸಿದ್ದಾರೆ.

- Advertisement -

Latest News

error: Content is protected !!