Friday, June 5, 2026
Homeಕರಾವಳಿಮುರುಡೇಶ್ವರ ಪ್ರವಾಸಕ್ಕೆ ಹೊರಟಿದ್ದ ಕಾರು ಅಪಘಾತ...! ಚಾಲಕ ಸಾವು...!

ಮುರುಡೇಶ್ವರ ಪ್ರವಾಸಕ್ಕೆ ಹೊರಟಿದ್ದ ಕಾರು ಅಪಘಾತ…! ಚಾಲಕ ಸಾವು…!

- Advertisement -
- Advertisement -

ಭಟ್ಕಳ: ಮುರುಡೇಶ್ವರಕ್ಕೆ ಪ್ರವಾಸಕ್ಕೆ ಹೋಗುತ್ತಿದ್ದ ಕಾರೊಂದು ಮುರುಡೇಶ್ವರ ಇಂದ್ರಪ್ರಸ್ತ ಹೋಟೆಲ್ ಇದುರಿನ ಡಿವೈಡರ್ ಗೆ ಢಿಕ್ಕಿ ಹೊಡೆದ ಪರಿಣಾಮ ಕಾರು ಚಾಲಕ ಮೃತಪಟ್ಟ ಘಟನೆ ಶುಕ್ರವಾರ ರಾತ್ರಿ ನಡೆದಿದೆ.

ಕಾರು ಚಾಲಕ ಮಹೇಶ್ ಮೃತರು ಎಂದು ಗುರುತಿಸಲಾಗಿದೆ. ಯಾದಗಿರಿಯಿಂದ ಪ್ರವಾಸಕ್ಕೆ ಹೊರಟ ತಂಡ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಮಡಿಕೇರಿ, ಉಡುಪಿ ಕಡೆಗಳಲ್ಲಿ ಪ್ರವಾಸ ಮುಗಿಸಿ ನಿನ್ನೆ ರಾತ್ರಿ ಮುರುಡೇಶ್ವರಕ್ಕೆ ಬರುತ್ತಿದ್ದ ವೇಳೆ ಭಟ್ಕಳ ದಾಟಿ ಬಸ್ತಿ ಮಾರ್ಗವಾಗಿ ಮುರುಡೇಶ್ವರ ದೇವಸ್ತಾನದ ಕಡೆ ಹೋಗುತ್ತಿರುವಾಗ ನಿಯಂತ್ರಣ ತಪ್ಪಿದ ಕಾರು ಡಿವೈಡರ್ಗೆ ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡ ಕಾರು ಚಾಲಕ ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟರು ಎಂದು ತಿಳಿದುಬಂದಿದೆ. ಈ ಬಗ್ಗೆ ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!