- Advertisement -


- Advertisement -
ಕಾಸರಗೋಡು: ಇಲ್ಲಿನ ಅಖಿಲ್ ಜೋಯನ್ (26) ಅವರು ಉಕ್ರೇನ್‌ನಲ್ಲಿ ನೌಕೆ ಮೇಲೆ ರಷ್ಯಾ ನಡೆಸಿದ ದಾಳಿಗೆ ಬಲಿಯಾಗಿದ್ದಾರೆ. ಇವರೊಂದಿಗೆ ಇನ್ನು 4 ಜನ ಭಾರತೀಯರು ಅಸುನೀಗಿದ್ದಾರೆ ಎನ್ನುವ ಮಾಹಿತಿ ಇದೆ.
ಅಖಿಲ್ ಜೋಯನ್ ತಮ್ಮ ತಂದೆ-ತಾಯಿಗೆ ಏಕೈಕ ಪುತ್ರನಾಗಿದ್ದು, ಅವರ ಮದುವೆಯು ಮುಂದಿನ ಏಪ್ರಿಲ್ ತಿಂಗಳಿನಲ್ಲಿ ಕೇರಳದ ಯುವತಿಯೊಂದಿಗೆ ನಿಶ್ಚಯವಾಗಿತ್ತು.
ತಮ್ಮ ಕೆಲಸದ ಅವಧಿಯ ನಡುವೆ ಬಿಡುವಿದ್ದಾಗ ತಂದೆಯ ಮೊಬೈಲಿಗೆ ಮಿಸ್ ಕಾಲ್ ನೀಡುತ್ತಿದ್ದರು. ಮರಳಿ ಕರೆ ಮಾಡಿದಾಗ ಮಾತನಾಡುತ್ತಿದ್ದರು. ಇನ್ನು ಭಾನುವಾರವೂ ಅವರಿಂದ ಮಿಸ್ ಕಾಲ್ ಬಂದಿದ್ದು, ತಂದೆ ತಿರುಗಿ ಫೋನ್ ಮಾಡಿದಾಗ ಪೋನ್ ಸ್ವಿಚ್ ಆಫ್ ಆಗಿತ್ತು ಎಂದು ಅವರ ತಂದೆ ಕಣ್ಣೀರಿಟ್ಟಿದ್ದಾರೆ ಎಂದು ವರದಿಯಾಗಿದೆ. ಇನ್ನು ಈ ದಾಳಿ ಹಿನ್ನೆಲೆಯಲ್ಲಿ ರಷ್ಯಾ ರಾಯಭಾರಿಯನ್ನು ಕರೆಸಿಕೊಂಡು ಭಾರತ ತೀವ್ರ ಪ್ರತಿಭಟನೆ ಸಲ್ಲಿಸಿದೆ ಎನ್ನಲಾಗುತ್ತಿದೆ.
- Advertisement -


