Sunday, June 7, 2026
Homeಅಪರಾಧಉದನೆಯಲ್ಲಿ ಗಣಪತಿ ಕಟ್ಟೆ ಧ್ವಂಸ ಪ್ರಕರಣ: 24 ಗಂಟೆಗಳೊಳಗೆ ಆರೋಪಿ ಅಂದರ್!

ಉದನೆಯಲ್ಲಿ ಗಣಪತಿ ಕಟ್ಟೆ ಧ್ವಂಸ ಪ್ರಕರಣ: 24 ಗಂಟೆಗಳೊಳಗೆ ಆರೋಪಿ ಅಂದರ್!

- Advertisement -
- Advertisement -

ನೆಲ್ಯಾಡಿ: ಉದನೆಯ ಗಣಪತಿ ಕಟ್ಟೆಯನ್ನು ಕಲ್ಲು ಎತ್ತಿ ಹಾಕಿ ಹಾನಿಗೊಳಿಸಿರುವ ಪ್ರಕರಣದ ಆರೋಪಿಯನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಿಹಾರದ ಬಾಗಲ್ ಪುರ ಜಿಲ್ಲೆಯ ಗೋಪಾಲ್ ಪುರ್ ತಾಲೂಕಿನ ಗರ್ನಿಯಾ ನಿವಾಸಿ ಸುಬೀಂದರ್ ಎಂಬವರ ಪುತ್ರ ರವೀಂದ್ರ ಕುಮಾರ್ (25) ಬಂಧಿತ ಆರೋಪಿ.

ಶುಕ್ರವಾರದಂದು ಉದನೆ ಗಣಪತಿ ಕಟ್ಟೆಯಲ್ಲಿ ಉದನೆ ಸಾರ್ವಜನಿಕ ಗಣೇಶೋತ್ಸವ ಸಮಿತಿ ವತಿಯಿಂದ ಸರಳವಾಗಿ ಗಣೇಶೋತ್ಸವ ಆಚರಿಸಲಾಗಿತ್ತು. ಗಣಪತಿ ಕಟ್ಟೆಯ ಮೆಟ್ಟಿಲನ್ನು ಬಾಳೆಗಿಡಗಳಿಂದ ಅಲಂಕರಿಸಲಾಗಿದ್ದು, ರಾತ್ರಿ ವೇಳೆ ಆರೋಪಿಯು ಬಾಳೆಗಿಡಗಳನ್ನು ಕಿತ್ತೆಸೆದು ಕಲ್ಲು ಎತ್ತಿಹಾಕಿ ಮೆಟ್ಟಿಲನ್ನು ಹಾನಿಗೊಳಿಸಿರುವುದು ಕಂಡುಬಂದಿತ್ತು. ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದು, ಘಟನೆ ನಡೆದು 24 ಗಂಟೆಗಳ ಅವಧಿಯಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.

- Advertisement -

Latest News

error: Content is protected !!