Tuesday, June 16, 2026
Homeಕರಾವಳಿಭೂಗತ ಪಾತಕಿ ʼಛೋಟಾ ರಾಜನ್ʼ ಕೊರೊನಾಗೆ ಬಲಿ

ಭೂಗತ ಪಾತಕಿ ʼಛೋಟಾ ರಾಜನ್ʼ ಕೊರೊನಾಗೆ ಬಲಿ

- Advertisement -
- Advertisement -

ನವದೆಹಲಿ: ಕೊರೊನಾ ಸೋಂಕಿಗೆ ತುತ್ತಾಗಿ ದೆಹಲಿಯ ಏಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಭೂಗತ ಪಾತಕಿ ಛೋಟಾ ರಾಜನ್ ಚಿಕಿತ್ಸೆ ಫಲಕಾರಿಯಾಗದೇ ಇಂದು ನಿಧನರಾಗಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ.

ಹೌದು, ಭೂಗತ ಪಾತಕಿ ಮತ್ತು ದರೋಡೆಕೋರ ಛೋಟಾ ರಾಜನ್ ಅವರು ಶುಕ್ರವಾರ ನವದೆಹಲಿಯ ಅಖಿಲ ಭಾರತ ವೈದ್ಯಕೀಯ ಸೇವೆಗಳ ಸಂಸ್ಥೆಯಲ್ಲಿ (ಏಮ್ಸ್) ಕೊರೊನಾ ವೈರಸ್ ಕಾಯಿಲೆ (ಕೋವಿಡ್-19) ಯಿಂದಾಗಿ ನಿಧನರಾಗಿದ್ದಾರೆ.

ರಾಜೇಂದ್ರ ನಿಕಾಲ್ಜೆ ಆಲಿಯಾಸ್ ಛೋಟಾ ರಾಜನ್ ಅವರನ್ನ ಏಪ್ರಿಲ್ 26ರಂದು ಏಮ್ಸ್ ಗೆ ದಾಖಲಿಸಲಾಗಿತ್ತು. 2015ರಲ್ಲಿ ಇಂಡೋನೇಷ್ಯಾದಿಂದ ಬಂಧನಕ್ಕೊಳಗಾದ ನಂತ್ರ ಆತನನ್ನ ನವದೆಹಲಿಯ ಉನ್ನತ ಭದ್ರತೆಯ ತಿಹಾರ್ ಜೈಲಿನಲ್ಲಿ ಇರಿಸಲಾಗಿತ್ತು.

- Advertisement -

Latest News

error: Content is protected !!