Tuesday, May 14, 2024
Homeಕರಾವಳಿಕಡಬ: ಮದ್ಯ ಖರೀದಿಸಲು ಮುಗಿಬಿದ್ದ ಜನ, ಅಂಗಡಿ, ಮೆಡಿಕಲ್ ಗಳಲ್ಲೂ ಸರದಿ‌ ಸಾಲು

ಕಡಬ: ಮದ್ಯ ಖರೀದಿಸಲು ಮುಗಿಬಿದ್ದ ಜನ, ಅಂಗಡಿ, ಮೆಡಿಕಲ್ ಗಳಲ್ಲೂ ಸರದಿ‌ ಸಾಲು

spot_img
- Advertisement -
- Advertisement -

ಕಡಬ: ಕೊರೋನಾ ಎರಡನೇ ಅಲೆ ನಿಯಂತ್ರಣಕ್ಕಾಗಿ ಮೆ.7 ರಿಂದಲೇ ಜಿಲ್ಲಾಡಳಿತವು ಕಠಿಣ ನಿಯಮ ಜಾರಿಗೆ ತಂದ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಿಗ್ಗೆ ಅಗತ್ಯ ವಸ್ತು ಖರೀದಿಗೆ ಜನ ಮುಗಿಬಿದ್ದಿದ್ದಾರೆ. ಕಡಬ ಪೇಟೆಯಲ್ಲಿ ಎಲ್ಲಾ ದಿನಸಿ ಅಂಗಡಿ ಸೇರಿದಂತೆ ಎಲ್ಲೆಡೆ ವಾಹನಗಳು ಸಾಲುಗಟ್ಟಿ ನಿಂತಿದ್ದವು.

ನ್ಯಾಯ ಬೆಲೆ ಅಂಗಡಿ ಎದುರು ಬೆಳಿಗ್ಗೆ 6 ಗಂಟೆಗೆ ಜನ ಬಂದು ಕಾದು ಕುಳಿತಿರುವ ದೃಶ್ಯ ಕಂಡುಬಂತು. ಟೋಕನ್ ಪಡೆಯಲು ಜನ ಕಾದು ಕುಳಿತು ಸುಸ್ತಾಗಿರೋದು ಕಂಡು ಬಂತು.

ಅಗತ್ಯ ವಸ್ತು ಖರೀದಿಗೆ ಮುಂಜಾನೆ 6 ರಿಂದ 9 ರ ವರೆಗೆ ಸಮಯ ವಿಧಿಸಿದ ಹಿನ್ನೆಲೆ ಕಡಬದ ಎಲ್ಲಾ ಬಾರ್ ಗಳಲ್ಲಿ ಜನರು ಮದ್ಯ ಖರೀದಿಸಲು ಮುಗಿಬಿದ್ದಿರೋದು ಕಂಡುಬಂತು. ಸರ್ಕಾರಿ ಸ್ವಾಮ್ಯದ ಎಂ.ಎಸ್.ಎಲ್ ನಲ್ಲಿ ಜನ ಸರದಿ ಸಾಲಿನಲ್ಲಿ ನಿಂತು ಮದ್ಯಖರೀದಿಸಿದರು.

ಮೆಡಿಕಲ್ ಗಳಲ್ಲಿ ಇತರ ದಿನಗಳಿಗಿಂತ ಶುಕ್ರವಾರ ಹೆಚ್ಚು ಜನರು ಜೌಷಧ ಖರೀದಿಗೆ ಆಗಮಿಸಿದ್ದರು. ಜನೌಷಧ ಮಳಿಗೆಯಲ್ಲೂ ಜನ ಸರದಿ ಸಾಲಿನಲ್ಲಿ ನಿಂತು ಮೆಡಿಸಿನ್ ಪಡೆದುಕೊಳ್ಳುತ್ತಿರುವುದು ಕಂಡು ಬಂತು. ಪೊಲೀಸರು ಡೆಡ್ ಲೈನ್ ಗೆ ಮುನ್ನವೇ ಎಲ್ಲಾ ಅಂಗಡಿಗಳನ್ನು ಮುಚ್ಚುವಂತೆ ಸೂಚಿಸಿದರು.

- Advertisement -
spot_img

Latest News

error: Content is protected !!