Friday, March 29, 2024
Homeತಾಜಾ ಸುದ್ದಿಎನ್ ಕೌಂಟರ್ ಸ್ಪೆಷಲಿಸ್ಟ್ ದಯಾನಾಯಕ್ ರನ್ನು ಮುಂಬೈ ನಗರದಿಂದ ವರ್ಗಾವಣೆ

ಎನ್ ಕೌಂಟರ್ ಸ್ಪೆಷಲಿಸ್ಟ್ ದಯಾನಾಯಕ್ ರನ್ನು ಮುಂಬೈ ನಗರದಿಂದ ವರ್ಗಾವಣೆ

spot_img
- Advertisement -
- Advertisement -

ಮುಂಬೈ: ಎನ್ಕೌಂಟರ್ ತಜ್ಞ ಎಂದೇ ಖ್ಯಾತರಾಗಿರುವ ದಯಾನಾಯಕ್ ಅವರನ್ನು ಗೊಂಡಿಯಾ ಜಿಲ್ಲೆಗೆ ವರ್ಗಾವಣೆ ಮಾಡಲಾಗಿದೆ. ಉಗ್ರ ನಿಗ್ರಹ ದಳದಲ್ಲಿದ್ದ ದಯಾ ನಾಯಕ್ ಅವರನ್ನು ಗೊಂಡಿಯಾ ಜಿಲ್ಲೆಗೆ ವರ್ಗಾವಣೆ ಮಾಡಿ ಮಹಾರಾಷ್ಟ್ರ ಎಡಿಜಿ ಆದೇಶಿಸಿದ್ದಾರೆ.

ದಯಾ ನಾಯಕ್ ಅವರು ಮನ್ಸುಖ್ ಹಿರೇನ್ ಕೊಲೆ ಪ್ರಕರಣದ ತನಿಖೆ ನಡೆಸಿದ್ದರು. ಪೊಲೀಸ್ ಅಧಿಕಾರಿ ಸಚಿನ್ ವಾಜೆ ವಿರುದ್ಧ ಪ್ರಕರಣದಲ್ಲೂ ದಯಾ ನಾಯಕ್ ಅವರು ಹಲವು ಸಾಕ್ಷ್ಯಗಳನ್ನು ಒಟ್ಟುಗೂಡಿಸಿದ್ದರು. ಸದ್ಯ ಈ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳ ತನಿಖೆ ನಡೆಸುತ್ತಿದೆ.

ಇದಕ್ಕೂ ಮೊದಲು ದಯಾ ನಾಯಕ್ ಅವರನ್ನು 2014 ರಲ್ಲಿ ನಾಗ್ಪುರಕ್ಕೆ ವರ್ಗಾವಣೆ ಮಾಡಲಾಗಿತ್ತು. ಆದರೆ, ನಾಗ್ಪುರದಲ್ಲಿ ಡ್ಯೂಟಿಗೆ ಹಾಜರಾಗಲು ದಯಾ ನಾಯಕ್​ ಒಪ್ಪಿಕೊಂಡಿರಲಿಲ್ಲ. ಮನ್ಸುಖ್ ಹಿರೇನ್ ಕೊಲೆ ಪ್ರಕರಣವನ್ನು ಮುಂಬೈ ಎಟಿಎಸ್​​ ತನಿಖೆ ನಡೆಸುತ್ತಿದ್ದು, ಈ ಪ್ರಕರಣದ ತನಿಖೆಗಾಗಿ ಆರು ತಂಡಗಳನ್ನು ರಚಿಸಲಾಗಿದೆ. ಅವರಲ್ಲಿ, ದಯಾ ನಾಯಕ್ ಜುಹು ಎಟಿಎಸ್ ಉಸ್ತುವಾರಿ ವಹಿಸಿದ್ದರು. ಈಗ ಅವರನ್ನು ಗೊಂಡಿಯಾಗೆ ವರ್ಗಾಯಿಸಿ ಎಟಿಎಸ್​ ಆದೇಶ ಮಾಡಿದೆ.

ದಯಾನಾಯಕ್ ಕರ್ತವ್ಯದ ಡಿಟೇಲ್ಸ್​​-

  • 1995 ರಲ್ಲಿ ಮಹಾರಾಷ್ಟ್ರ ಪೊಲೀಸ ಇಲಾಖೆಗೆ ದಯಾ ನಾಯಕ್ ಸೇರ್ಪಡೆ
  • 1999ರಲ್ಲಿ ದಯಾ ನಾಯಕ್ ಎನ್​​​ಕೌಂಟರ್​ ಸ್ಪೆಷಲಿಸ್ಟ್​ ಆಗಿ ಪ್ರಸಿದ್ಧಿ
  • ಪ್ರದೀಪ್ ಶರ್ಮಾ ಅವರೊಂದಿಗೆ ಅಪರಾಧ ಶಾಖೆಯಲ್ಲಿ ಕೆಲಸ ಮಾಡಿದ ಅನುಭವ
  • ಗೊಂಡಿಯಾಕ್ಕೆ ವರ್ಗಾವಣೆಯಾಗುವ ಮೊದಲು ದಯಾ ನಾಯಕ್ ಜುಹು ಎಟಿಎಸ್ ಉಸ್ತುವಾರಿ

ದಯಾನಾಯಕ್ ವಿರುದ್ಧ ಹಲವು ಆರೋಪಗಳಿವೆ.

  • ದಯಾ ನಾಯಕ್ ಅವರನ್ನು 2004ರಲ್ಲಿ ವಿಚಾರಣೆಗೆ ಒಳಪಡಿಸಲಾಯಿತು
  • 2006 ರಲ್ಲಿ ನಾಯಕ್ ಅವರನ್ನು ಅಕ್ರಮ ಆಸ್ತಿ ಪ್ರಕರಣದಲ್ಲಿ ಅಮಾನತು
  • 2012 ರಲ್ಲಿ ಮತ್ತೆ ಪೊಲೀಸ್ ಇಲಾಖೆಗೆ ಮರು ನೇಮಕ, ಮತ್ತೆ ಅಮಾನತು
  • 2016 ರಲ್ಲಿ ಮತ್ತೆ ಪೊಲೀಸ್ ಪಡೆಗೆ ನೇಮಿಕ-
  • ಈ ಬಾರಿ ನಾಯಕ್ ಜುಹು ಎಟಿಎಸ್ ಮುಖ್ಯಸ್ಥರಾಗಿ ನೇಮಕ , ಈಗ ವರ್ಗಾವಣೆ

- Advertisement -
spot_img

Latest News

error: Content is protected !!