Thursday, June 4, 2026
Homeತಾಜಾ ಸುದ್ದಿಅಯೋಧ್ಯೆ ಭೂಮಿ ಪೂಜೆ ಕಾರ್ಯಕ್ರಮದಿಂದ ದೂರ ಉಳಿದ ಬಿಜೆಪಿ ಹಿರಿಯ ನಾಯಕಿ ಉಮಾ ಭಾರತಿ

ಅಯೋಧ್ಯೆ ಭೂಮಿ ಪೂಜೆ ಕಾರ್ಯಕ್ರಮದಿಂದ ದೂರ ಉಳಿದ ಬಿಜೆಪಿ ಹಿರಿಯ ನಾಯಕಿ ಉಮಾ ಭಾರತಿ

- Advertisement -
- Advertisement -

ಹೊಸದಿಲ್ಲಿ: “ನಾನು ಅಯೋಧ್ಯೆಗೆ ಪ್ರಯಾಣಿಸುವೆ. ಆದರೆ ಕೊರೋನ ವೈರಸ್ ವಿರುದ್ಧದ ಮುನ್ನಚ್ಚರಿಕಾ ಕ್ರಮವಾಗಿ ಬುಧವಾರ ನಡೆಯಲಿರುವ ರಾಮಮಂದಿರ ನಿರ್ಮಾಣದ ದ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಿಲ್ಲ. ಕಾರ್ಯಕ್ರಮ ಎಲ್ಲವೂ ಮುಗಿದ ಬಳಿಕ ದೇವಸ್ಥಾನವಿರುವ ಸ್ಥಳಕ್ಕೆ ಭೇಟಿ ನೀಡುವೆನು” ಎಂದು ಹೇಳುವ ಮೂಲಕ ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕಾಗಿ ಹೋರಾಟ ನಡೆಸಿದ್ದ ಮಧ್ಯ ಪ್ರದೇಶ ಮಾಜಿ ಸಿಎಂ ಉಮಾಭಾರತಿ ಅಚ್ಚರಿ ಮೂಡಿಸಿದ್ದಾರೆ.

ಇಂದು ಬೆಳಗ್ಗೆ ಸರಣಿ ಟ್ವೀಟ್ ಮಾಡಿರುವ ಉಮಾಭಾರತಿ, ಗೃಹ ಸಚಿವ ಅಮಿತ್ ಶಾ ಹಾಗೂ ಇತರ ಉನ್ನತ ನಾಯಕರಿಗೆ ಕೋವಿಡ್-19 ಸೋಂಕು ತಗಲಿದ ಬಳಿಕ ಬುಧವಾರ ನಡೆಯಲಿರುವ ಭವ್ಯ ಸಮಾರಂಭದಲ್ಲಿ ಹಾಜರಾಗಲಿರುವ ಪ್ರಧಾನಿ ಸಹಿತ ಇತರರ ಬಗ್ಗೆ ನನಗೆ ಚಿಂತೆ ಕಾಡುತ್ತಿದೆ ಎಂದು ಹೇಳಿದ್ದಾರೆ.

ಕಾರ್ಯಕ್ರಮಕ್ಕೆ ಆಹ್ವಾನಿಸಿ ಬಂದ ಪತ್ರವನ್ನು ನಿರಾಕರಿಸಿ, ಅಧಿಕಾರಿಗಳಿಗೆ ಮತ್ತು ಪ್ರಧಾನ ಮಂತ್ರಿ ಕಾರ್ಯಾಲಯಕ್ಕೆ ಈ ವಿಷಯವನ್ನು ತಿಳಿಸಿದ್ದಾರೆ.

- Advertisement -

Latest News

error: Content is protected !!