Wednesday, June 26, 2024
Homeಕರಾವಳಿಉಡುಪಿಲಾಕ್ ಡೌನ್ ಪ್ರಭಾವ: ಆನ್​ಲೈನ್​‌ನಲ್ಲೇ ಶ್ರಾದ್ದ ಮುಗಿಸಿದ ಕಾರ್ಕಳದ ಪುರೋಹಿತರು !

ಲಾಕ್ ಡೌನ್ ಪ್ರಭಾವ: ಆನ್​ಲೈನ್​‌ನಲ್ಲೇ ಶ್ರಾದ್ದ ಮುಗಿಸಿದ ಕಾರ್ಕಳದ ಪುರೋಹಿತರು !

spot_img
- Advertisement -
- Advertisement -

ಕಾರ್ಕಳ: ಮುಜರಾಯಿ ಇಲಾಖೆಯ ಅಧೀನದಲ್ಲಿರುವ ದೇವಸ್ಥಾನಗಳಲ್ಲಿ ದೇವರ ಪೂಜಾ ಕಾರ್ಯಕ್ರಮಗಳನ್ನು ಆನ್​​ಲೈನ್ ಮೂಲಕ ನಡೆಸುವ ಬಗ್ಗೆ ಸರ್ಕಾರ‌ ವಿಷಯ ಪ್ರಸ್ತಾಪಿಸಿದ ಬೆನ್ನಲ್ಲೇ, ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಪುರೋಹಿತರೊಬ್ಬರು ಆನ್​ಲೈನ್​​ನಲ್ಲೇ ತಿಥಿ ಕಾರ್ಯ ಮಾಡಿ ಮುಗಿಸಿದ್ದಾರೆ

ಕಾರ್ಕಳ ತಾಲೂಕಿನ‌ ಕಸಬಾ ಗ್ರಾಮದ ಮಲ್ಲಿಗೆ‌ ಓಣಿಯ‌ ನಿವಾಸಿ ಪುರೋಹಿತ‌ ಸುರೇಂದ್ರ ಭಟ್ ಎಂಬುವವರು ಅರಬ್ ದೇಶದ ಮಸ್ಕತ್​​ನಲ್ಲಿರುವ ಸಚಿತ್ ಕಾಮತ್ ಅವರ ತಂದೆಯ ವಾರ್ಷಿಕ ಶ್ರಾದ್ಧವನ್ನು ‌ಆನ್​​ಲೈನ್ ಲೈವ್ ವಿಡಿಯೋ ಮೂಲಕ ನೆರವೇರಿಸಿದ್ದರು.‌ ಈಗ ಕಾರ್ಕಳದ ಶಾಂತಾ ನಾಗೇಶ್ ಪೈ ಅವರು ನಿಧನರಾಗಿದ್ದು, ಮೃತರ ಮಗ ಮುಂಬೈಯಲ್ಲಿದ್ದು, ಊರಿಗೆ ಆಗಮಿಸಲಾಗದ ಹಿನ್ನೆಲೆಯಲ್ಲಿ ಇದೇ ಆನ್​​ಲೈನ್ ಲೈವ್ ವಿಡಿಯೋ ಮೂಲಕ ಮಗನಿಗೆ ತಾಯಿಯ ಶವಸಂಸ್ಕಾರದ ವಿಧಿಗಳನ್ನು ನೆರವೇರಿಸಲಾಗಿದೆ. ಹಾಗೇ, ಒಂಭತ್ತನೇ ದಿನದ ಕ್ರಿಯೆಯನ್ನೂ ಆನ್​ಲೈನ್​​ನಲ್ಲಿ ಸುರೇಂದ್ರ ಭಟ್​ ನೆರವೇರಿಸಿಕೊಟ್ಟಿದ್ದಾರೆ. ಈ ಎರಡು ಕುಟುಂಬದ ಶ್ರಾದ್ದ ಕಾರ್ಯ ಆನ್ ಲೈನ್ ನಲ್ಲೇ ನಡೆದಿರುವುದು ವಿಶೇಷ.‌

ಒಂದೆಡೆ ಲಾಕ್​​ಡೌನ್, ಸೆಕ್ಷನ್ 144 ಜಾರಿಯಲ್ಲಿರುವುದರಿಂದ ಯಾವುದೇ ಕಾರ್ಯಕ್ರಮ ನಡೆಸುವಂತಿಲ್ಲ. ಮತ್ತೊಂದೆಡೆ ಪುರೋಹಿತರು ಸಿಗುತ್ತಿಲ್ಲ. ಈ ನಡುವೆ ದೈವಾಧೀನರಾದವರಿಗೆ ಶ್ರಾದ್ಧ, ಪಿಂಡತರ್ಪಣ, ನೀಡುವುದಾರೆ ಹೇಗೆ? ಇಂತಹ ಧರ್ಮ ಸಂಕಟದಲ್ಲಿ ಸಿಲುಕಿದ ಕುಟುಂಬವೊಂದು ಪುರೋಹಿತರ‌ ಜೊತೆ ‌ನೇರ ಸಂಪರ್ಕದಲ್ಲಿ ಅವರ ಸಲಹೆಯಂತೆ ಆನ್​ಲೈನ್ ವಿಡಿಯೋ ಮೂಲಕ ತಿಥಿ ಕಾರ್ಯವನ್ನು ನೆರವೇರಿಸಿ ತೃಪ್ತಿ ಪಡೆದಿದ್ದಾರೆ.

- Advertisement -
spot_img

Latest News

error: Content is protected !!