Friday, May 3, 2024
Homeಉದ್ಯಮನಾಳೆಯಿಂದ ದೇಶಿಯ ವಿಮಾನ ಹಾರಾಟ: ಏರ್ ಪೋರ್ಟ್ ನಲ್ಲಿ ಏನು ಮಾಡಬೇಕು, ಏನು ಮಾಡಬಾರದು?

ನಾಳೆಯಿಂದ ದೇಶಿಯ ವಿಮಾನ ಹಾರಾಟ: ಏರ್ ಪೋರ್ಟ್ ನಲ್ಲಿ ಏನು ಮಾಡಬೇಕು, ಏನು ಮಾಡಬಾರದು?

spot_img
- Advertisement -
- Advertisement -
  • ದೃಢಪಟ್ಟ ವೆಬ್ ಚೆಕ್ -ಇನ್ ಆದ ಪ್ರಯಾಣಿಕರಿಗೆ ಮಾತ್ರ ವಿಮಾನ ನಿಲ್ದಾಣದೊಳಗೆ ಪ್ರವೇಶಕ್ಕೆ ಅನುಮತಿಯಿದೆ. ಕೌಂಟರ್ ಗಳಲ್ಲಿ ಶಾರೀರಿಕ ಚೆಕ್ ಇನ್ ಇರುವುದಿಲ್ಲ.
  • ಪ್ರಯಾಣಿಕರು ವಿಮಾನ ಹೊರಡುವುದಕ್ಕೆ ಒಂದು ಗಂಟೆ ಮೊದಲು ನಿಲ್ದಾಣಕ್ಕೆ ತಲುಪಿರಬೇಕು. ವಿಮಾನ ಹಾರಾಟಕ್ಕೆ 20 ನಿಮಿಷ ಮೊದಲು ಗೇಟ್ ಮುಚ್ಚುತ್ತದೆ.
  • ಒಂದು ಚೆಕ್ ಇನ್ ಬ್ಯಾಗಿಗೆ ಮಾತ್ರ ಅವಕಾಶವಿರುತ್ತದೆ. ವಿಮಾನಗಳಲ್ಲಿ ಪ್ರಯಾಣಿಕರಿಗೆ ಆಹಾರ, ತಿಂಡಿ-ಪಾನೀಯಗಳ ಸೇವೆ ಒದಗಿಸುವುದಿಲ್ಲ.
  • ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಸರ್ಕಾರವು ನಿಗದಿಪಡಿಸಿದ ದರ ಮತ್ತು ಮಿತಿಯನ್ನು ವಿಮಾನಯಾನ ಸಂಸ್ಥೆಗಳು ಅನುಸರಿಸಬೇಕು.
  • ವಿಮಾನ ಹೊರಡುವುದಕ್ಕೆ ಕನಿಷ್ಠ ಎರಡು ಗಂಟೆ ಮೊದಲು ಪ್ರಯಾಣಿಕರಿಗೆ ವಿಮಾನ ನಿಲ್ದಾಣದಲ್ಲಿ ಇರುವಂತೆ ಸಂಸ್ಥೆ ಮಾಹಿತಿ ನೀಡಬೇಕು.
  • 14 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಆರೋಗ್ಯ ಸೇತು ಆಪ್ ಡೌನ್ ಲೋಡ್ ಮಾಡಿಕೊಳ್ಳುವುದು ಕಡ್ಡಾಯವಲ್ಲ.
  • ವಿಮಾನ ನಿಲ್ದಾಣದ ಕಟ್ಟಡ ಪ್ರವೇಶಕ್ಕೆ ಮುನ್ನ ಪ್ರಯಾಣಿಕರು ಕಡ್ಡಾಯವಾಗಿ ಥರ್ಮಲ್ ಸ್ಕ್ರೀನಿಂಗ್ ವಲಯಕ್ಕೆ ಹೋಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಪ್ರಯಾಣಿಕರ ಲಗ್ಗೇಜುಗಳನ್ನು ಸ್ವಚ್ಛ ಮಾಡಿಕೊಳ್ಳಲು ವಿಮಾನ ನಿಲ್ದಾಣ ಕಾರ್ಯನಿರ್ವಾಹಕರು ಸೂಕ್ತ ವ್ಯವಸ್ಥೆ ಮಾಡಬೇಕು.
  • ವಿಮಾನ ನಿಲ್ದಾಣಗಳಲ್ಲಿ ಕೋವಿಡ್-19 ಮುನ್ನೆಚ್ಚರಿಕೆಗಳೊಂದಿಗೆ ಎಲ್ಲಾ ಆಹಾರ, ಪಾನೀಯ ಮತ್ತು ಚಿಲ್ಲರೆ ಅಂಗಡಿಗಳನ್ನು ತೆರೆಯಬೇಕು. ಪೊಟ್ಟಣದಲ್ಲಿ ಆಹಾರಗಳನ್ನು ಕಟ್ಟಿಸಿಕೊಂಡು ಹೋಗುವಾಗ ಅಂಗಡಿ ಮುಂದೆ ಜನದಟ್ಟಣೆ ಸೇರದಂತೆ ನೋಡಿಕೊಳ್ಳಬೇಕು. ಡಿಜಿಟಲ್ ಪಾವತಿ, ಸೆಲ್ಫ್ ಆರ್ಡರಿಂಗ್ ಬೂತ್ ಗಳಿಗೆ ಹೆಚ್ಚು ಉತ್ತೇಜನ ಕೊಡಬೇಕು.
  • ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರು ಕುಳಿತುಕೊಳ್ಳುವ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸೂಕ್ತ ವ್ಯವಸ್ಥೆ ಮಾಡಬೇಕು.
  • ವಿಮಾನ ಹೊರಡುವುದಕ್ಕೆ ನಾಲ್ಕು ಗಂಟೆ ಮೊದಲು ಮಾತ್ರ ಪ್ರಯಾಣಿಕರನ್ನು ನಿಲ್ದಾಣದೊಳಗೆ ಬಿಡಲಾಗುತ್ತದೆ.
  • ಪ್ರಯಾಣಿಕರು ಮತ್ತು ವಿಮಾನ ನಿಲ್ದಾಣ ಸಿಬ್ಬಂದಿಗೆ ರಾಜ್ಯ ಸರ್ಕಾರಗಳು ಮತ್ತು ಆಡಳಿತಗಳು ಸಾರ್ವಜನಿಕ ಸಾರಿಗೆ ಮತ್ತು ಖಾಸಗಿ ಟ್ಯಾಕ್ಸಿ ವ್ಯವಸ್ಥೆ ಮಾಡಬೇಕು.
  • ವಿಮಾನ ನಿಲ್ದಾಣಕ್ಕೆ ಬಂದು ಹೋಗಲು ಖಾಸಗಿ ವಾಹನ ಅಥವಾ ಆಯ್ದ ಕ್ಯಾಬ್ ಸೇವೆಗಳನ್ನು ಮಾತ್ರ ಬಳಸಬೇಕು.
  • ಎಲ್ಲಾ ಪ್ರಯಾಣಿಕರು ಕಡ್ಡಾಯವಾಗಿ ಮಾಸ್ಕ್, ಗ್ಲೌಸ್ ಧರಿಸಬೇಕು.
  • ನಿಲ್ದಾಣದಲ್ಲಿ ಎಲ್ಲಾ ಸಿಬ್ಬಂದಿ ಕೈಯಲ್ಲಿ ಸ್ಯಾನಿಟೈಸರ್ ಮತ್ತು ಪಿಪಿಇ ಕಡ್ಡಾಯವಾಗಿ ಇರಬೇಕು.
  • ವಿಶೇಷ ಸಂದರ್ಭಗಳನ್ನು ಹೊರತುಪಡಿಸಿ ಆಗಮನ, ನಿರ್ಗಮನ ಸೇವೆಗಳಿಗೆ ಟ್ರಾಲೀಸ್ ಗಳನ್ನು ಬಳಸುವಂತಿಲ್ಲ.
  • ಟರ್ಮಿನಲ್ ನ ಎಲ್ಲಾ ಪ್ರವೇಶ ಗೇಟ್ ಗಳನ್ನು ತೆರೆಯಲಾಗುತ್ತದೆ.
  • ಪ್ರಯಾಣಿಕರ ಶೂಗಳನ್ನು ಸ್ವಚ್ಛ ಮಾಡಲು ಪ್ರವೇಶ ದ್ವಾರದಲ್ಲಿ ಮ್ಯಾಟ್ ಮತ್ತು ಕಾರ್ಪೆಟ್ ಗಳನ್ನು ಬ್ಲೀಚ್ ಗಳಿಂದ ಸ್ವಚ್ಛ ಮಾಡಿರಬೇಕು.
  • ಪ್ರಯಾಣಿಕರೊಂದಿಗೆ ಮಾತುಕತೆ ನಡೆಸುವಾಗ ಸಿಬ್ಬಂದಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು.
  • ಟರ್ಮಿನಲ್ ಗಳಲ್ಲಿ ಪತ್ರಿಕೆ, ಮ್ಯಾಗಜಿನ್ ಗಳನ್ನು ಪ್ರಯಾಣಿಕರಿಗೆ ಓದಲು ಇಡುವಂತಿಲ್ಲ.
  • ಜ್ವರ, ಕೆಮ್ಮು, ಕಫ,ಉಸಿರಾಟದ ತೊಂದರೆ ಇರುವ ಸಿಬ್ಬಂದಿಯನ್ನು ಒಳಗೆ ಕೆಲಸಕ್ಕೆ ಸೇರಿಸಿಕೊಳ್ಳುವಂತಿಲ್ಲ.
  • ವಿಮಾನ ನಿಲ್ದಾಣದಲ್ಲಿ ಬಂದಿಳಿದಾಗ ಪ್ರಯಾಣಿಕರನ್ನು ವಿಭಾಗ ಮಾಡಿ ತಪಾಸಣೆ ಮಾಡಿ ಹೊರ ಬಿಡಬೇಕು.

- Advertisement -
spot_img

Latest News

error: Content is protected !!