Thursday, May 16, 2024
HomeUncategorizedಮುಂಬೈ ತುಳು-ಕನ್ನಡಿಗರ ಬಗ್ಗೆ ಉಡುಪಿ ಜಿಲ್ಲಾಧಿಕಾರಿ ಹೇಳಿಕೆಗೆ ಹಿರಿಯ ಪತ್ರಕರ್ತ ಚಂದ್ರಶೇಖರ ಪಾಲೆತ್ತಾಡಿಯವರ ಪ್ರತಿಕ್ರಿಯೆ

ಮುಂಬೈ ತುಳು-ಕನ್ನಡಿಗರ ಬಗ್ಗೆ ಉಡುಪಿ ಜಿಲ್ಲಾಧಿಕಾರಿ ಹೇಳಿಕೆಗೆ ಹಿರಿಯ ಪತ್ರಕರ್ತ ಚಂದ್ರಶೇಖರ ಪಾಲೆತ್ತಾಡಿಯವರ ಪ್ರತಿಕ್ರಿಯೆ

spot_img
- Advertisement -
- Advertisement -

ಮುಂಬೈ :ಕೊರೊನ ವೈರಸ್ ರೋಗಿಗಳಿಗೆ ಚಿಕಿತ್ಸೆ ಒದಗಿಸುವುದು ಯಾವುದೇ ಜಿಲ್ಲಾ ಆಡಳಿತದ ಜವಾಬ್ದಾರಿ.
ಇದರಿಂದ ದಯವಿಟ್ಟು ಮಹಾರಾಷ್ಟ್ರದಿಂದ ಉಡುಪಿಗೆ ಬರುವ ಜನರನ್ನು ಮುಕ್ತವಾಗಿ ಸ್ವಾಗತಿಸಿ ಅವರಿಗೆ ಕಡ್ಡಾಯ ಕ್ವಾರೆಂಟೈನ್ ವ್ಯವಸ್ಥೆ ಮಾಡಿ. ಮುಂಬೈ ಕನ್ನಡಿಗರು ಶತ್ರುಗಳು ಎಂಬ ವಾತಾವರಣ ಸೃಷ್ಟಿಗೆ ಅವಕಾಶ ನೀಡ ಬೇಡಿ ಎಂದು ಮುಂಬೈ ಮಹಾನಗರದ ಹಿರಿಯ ಕನ್ನಡ ಪತ್ರಕರ್ತ , ಕರ್ನಾಟಕ ಮಲ್ಲ ದಿನ ಪತ್ರಿಕೆಯ ಸಂಪಾದಕ ಚಂದ್ರಶೇಖರ ಪಾಲೆತ್ತಾಡಿ ಅವರು ತನ್ನ ಫೇಸ್ ಬುಕ್ ಮೂಲಕ ಮಾನ್ಯ ಉಡುಪಿ ಜಿಲ್ಲಾಧಿಕಾರಿಯವರು ಮುಂಬೈ ತುಳುಕನ್ನಡಿಗರ ಕುರಿತು ಇತ್ತೀಚಿಗೆ ನೀಡಿದ ಹೇಳಿಕೆಗೆ ಪ್ರತಿಕ್ರಿಸಿದ್ದಾರೆ.

https://www.facebook.com/chandrashekhar.palethady/posts/3093885317367220

“ಉಡುಪಿ ಜಿಲ್ಲಾಧಿಕಾರಿಗೆ,
ಮಾನ್ಯರೇ ಮುಂಬಯಿ (ಮಹಾರಾಷ್ಟ್ರ )ತುಳು -ಕನ್ನಡಿಗರು ಕರೆ ಮಾಡಿದರೆ ಅಥವಾ ಸಾಮಾಜಿಕ ಜಾಲದಲ್ಲಿ ಡಾನ್ ಗಳಂತೆ ಹೇಳಿಕೆ ನೀಡಿದರೆ ಅವರನ್ನು ಜೈಲಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದ್ದೀರಿ.
ಆಡಳಿತಾತ್ಮಕವಾಗಿ ನಿಮಗೆ ಆ ಅಧಿಕಾರ ಇರಬಹುದು. ಆದರೆ ಉಡುಪಿ ಜಿಲ್ಲೆಗೆ ಮಹಾರಾಷ್ಟ್ರದಿಂದ ತಲುಪಲು ಜೀವ ಭಯ ದಿಂದ ಕಾಯುತ್ತಿರುವ ಜನರು ಯಾರನ್ನು ಸಂಪರ್ಕಿಸಬೇಕು. ಮುಂಬೈಯಿಂದ ಅಲ್ಲಿಗೆ ಬರಲು ಬಯಸಿರುವವರು ನಿಮ್ಮ ಜೈಲಲ್ಲಿ ಕ್ವಾರೆಂಟೈನ್ ಒಳಗಾಗಲೂ ತಯಾರಿದ್ದಾರೆ. ಏಕೆಂದರೆ ಕೊರೊನ ಹಿಡಿದುಕೊಳ್ಳುವ ಪ್ರಾಣ ಭಯ ಅವರನ್ನು ನಿದ್ದೆ ಮಾಡಲೂ ಬಿಡುತ್ತಿಲ್ಲ. ಉಡುಪಿ ಜಿಲ್ಲೆಯಿಂದ ಹೊರ ರಾಜ್ಯಗಳ ಜನರು ಹಲವು ಶ್ರಮಿಕ್ ರೈಲಲ್ಲಿ ಹೋಗುತ್ತಲೇ ಇದ್ದಾರೆ. ಮುಂಬೈಯಲ್ಲಿ ಇರುವ ನಾವೆಲ್ಲ ಉಡುಪಿ ಮತ್ತು ಮಂಗಳೂರಿಗೆ ಶ್ರಮಿಕ್ ರೈಲಿಗೆ ಕತ್ತು ಉದ್ದ ಮಾಡಿ ಕಾದದ್ದೇ ಬಂತು. ಸೇವಾ ಸಿಂಧು ಆರಂಭ ಆದಾಗ ನಾವು ನಿಟ್ಟುಸಿರು ಬಿಟ್ಟದ್ದು ಹೌದು. ಆದರೆ ಆ ಭಾಗ್ಯ ಕೂಡಾ ಹೆಚ್ಚು ದಿನ ಇಲ್ಲದೇ ಹೋಯಿತು. ನಾವೆಲ್ಲ ಮುಂಬಯಿಗೆ ಬಂದು ಜೀವನ ಕಂಡು ಕೊಂಡದ್ದೇ ತಪ್ಪೇ?.
ಮುಂಬಯಿ ಅಥವಾ ಇತರ ಹೊರ ರಾಜ್ಯಗಳಿಂದ ಬಂದ ಜನರಲ್ಲಿ ಕೊರೊನ ಕಂಡು ಬಂದಷ್ಟಕ್ಕೆ ಅವರೇನೂ ಅಲ್ಲಿಗೆ ಕೊರೊನ ಹಂಚಲು ಬಂದಿಲ್ಲ. ಕೊರೊನ ವೈರಸ್ ರೋಗಿಗಳಿಗೆ ಚಿಕಿತ್ಸೆ ಒದಗಿಸುವುದು ಯಾವುದೇ ಜಿಲ್ಲಾ ಆಡಳಿತದ ಜವಾಬ್ದಾರಿ.
ಇದರಿಂದ ದಯವಿಟ್ಟು ಮಹಾರಾಷ್ಟ್ರದಿಂದ ಉಡುಪಿಗೆ ಬರುವ ಜನರನ್ನು ಮುಕ್ತವಾಗಿ ಸ್ವಾಗತಿಸಿ ಅವರಿಗೆ ಕಡ್ಡಾಯ ಕ್ವಾರೆಂಟೈನ್ ವ್ಯವಸ್ಥೆ ಮಾಡಿ. ಮುಂಬೈ ಕನ್ನಡಿಗರು ಶತ್ರುಗಳು ಎಂಬ ವಾತಾವರಣ ಸೃಷ್ಟಿಗೆ ಅವಕಾಶ ನೀಡ ಬೇಡಿ.”

ಚಂದ್ರಶೇಖರ ಪಾಲೆತ್ತಾಡಿ
ಸಂಪಾದಕರು
ಕರ್ನಾಟಕ ಮಲ್ಲ ದಿನ ಪತ್ರಿಕೆ ಮುಂಬೈ

- Advertisement -
spot_img

Latest News

error: Content is protected !!