Wednesday, May 1, 2024
Homeಇತರಸರ್ಕಾರಿ ಶಾಲೆಗಳ ಹಾಜರಾತಿಯಲ್ಲಿ ಉಡುಪಿಯೇ ನಂಬರ್ ಒನ್...!

ಸರ್ಕಾರಿ ಶಾಲೆಗಳ ಹಾಜರಾತಿಯಲ್ಲಿ ಉಡುಪಿಯೇ ನಂಬರ್ ಒನ್…!

spot_img
- Advertisement -
- Advertisement -

ಉಡುಪಿ: ಜಿಲ್ಲೆಯಲ್ಲಿ ಸೋಮವಾರದಿಂದ 6 ರಿಂದ 8ನೇ ತರಗತಿಗಳು ಆರಂಭವಾಗಿದ್ದು, ಉಡುಪಿ ಜಿಲ್ಲೆಯ ಸರ್ಕಾರಿ ಶಾಲೆಗಳ ಹಾಜರಾತಿ ಪ್ರಮಾಣ ರಾಜ್ಯದಲ್ಲೇ ಅಧಿಕವಾಗಿದೆ ಎಂದು ಡಿಡಿಪಿಐ ಎನ್‌.ಎಚ್‌.ನಾಗೂರ ತಿಳಿಸಿದ್ದಾರೆ.

ಸೋಮವಾರ ರಾಜ್ಯದ ಹಾಜರಾತಿ ಪ್ರಮಾಣ 6ನೇ ತರಗತಿಗೆ ಶೇ 29.15, 7ನೇ ತರಗತಿಗೆ ಶೇ 28.05 ಹಾಗೂ 8ನೇ ತರಗತಿಗೆ ಶೇ 23.22 ರಷ್ಟಿದ್ದರೆ, ಉಡುಪಿ ಜಿಲ್ಲೆಯಲ್ಲಿ 6ನೇ ತರಗತಿಗೆ ಶೇ 59, 7ನೇ ತರಗತಿಗೆ ಶೇ 59, 8ನೇ ತರಗತಿಗೆ ಶೇ 67ರಷ್ಟಿತ್ತು. 9ನೇ ತರಗತಿಗೆ ಶೇ 52, 10ನೇ ತರಗತಿಗೆ ಶೇ 57ರಷ್ಟು ಇತ್ತು ಎಂದು ತಿಳಿಸಿದ್ದಾರೆ.

ಮಂಗಳವಾರ 6ನೇ ತರಗತಿಗೆ ಶೇ 79, 7ನೇ ತರಗತಿಗೆ ಶೇ 77, 8ನೇ ತರಗತಿಗೆ ಶೇ 75, 9ನೇ ತರಗತಿಗೆ ಶೇ 74 , 10ನೇ ತರಗತಿಗೆ ಶೇ 75ರಷ್ಟು ಮಕ್ಕಳು ಹಾಜರಾಗಿದ್ದರು. ರಾಜ್ಯದಲ್ಲಿ ಹಾಜರಾತಿ ಪ್ರಮಾಣದಲ್ಲಿ ಉಡುಪಿ ಪ್ರಥಮ ಸ್ಥಾನದಲ್ಲಿದ್ದರೆ, ಚಿಕ್ಕೋಡಿ (ಶೇ 55) ಎರಡನೇ ಸ್ಥಾನ, ಮಧುಗಿರಿ (ಶೇ 54) ಮೂರನೇ ಸ್ಥಾನದಲ್ಲಿದೆ.

ಜಿಲ್ಲೆಯಲ್ಲಿ ಖಾಸಗಿ ಶಾಲೆಗಳಲ್ಲಿ ಹಾಜರಾತಿ ಕಡಿಮೆ ಇದೆ. ಖಾಸಗಿ ಶಾಲೆಗಳು ತರಗತಿ ಆರಂಭ ಮಾಡದಿರುವುದು ಗಮನಕ್ಕೆ ಬಂದಿದ್ದು, ಎಲ್ಲ ಸರ್ಕಾರಿ, ಅನುದಾನಿತ, ಖಾಸಗಿ ಶಾಲೆಗಳು 6 ರಿಂದ 10ನೇ ತರಗತಿಗಳನ್ನು ಕೂಡಲೇ ಆರಂಭಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಬಿಇಒಗಳಿಗೆ ಸೂಚನೆ ನೀಡಲಾಗಿದೆ ಎಂದು ಡಿಡಿಪಿಐ ತಿಳಿಸಿದ್ದಾರೆ.

ಕೋವಿಡ್‌ ಎಸ್‌ಒಪಿ ಪಾಲಿಸಿಕೊಂಡು ಶಾಲೆಗಳನ್ನು ಆರಂಭಿಸಬೇಕು. ಆರಂಭ ಮಾಡದ ಖಾಸಗಿ ಶಾಲೆಗಳಿಗೆ ನೋಟೀಸ್‌ ನೀಡಬೇಕು. ಸರ್ಕಾರ ಹಾಗೂ ಶಿಕ್ಷಣ ಇಲಾಖೆಯ ಸುತ್ತೋಲೆಗಳನ್ನು ಮಾತ್ರ ಪಾಲಿಸಬೇಕು, ಖಾಸಗಿ ಶಾಲೆಗಳು ಸ್ವಂತ ನಿಯಮಗಳನ್ನು ಮಾಡಿಕೊಂಡು ಶಾಲೆಗಳನ್ನು ನಡೆಸಲು ಅವಕಾಶ ಇರುವುದಿಲ್ಲ ಎಂದು ಡಿಡಿಪಿಐ ಎಚ್ಚರಿಕೆ ನೀಡಿದ್ದಾರೆ.

- Advertisement -
spot_img

Latest News

error: Content is protected !!