Monday, June 29, 2026
Homeಕರಾವಳಿಉಡುಪಿಕುಂದಾಪುರ: ಫೇಸ್‌ ಬುಕ್‌ ನಲ್ಲಿ ನಾರಾಯಣ ಗುರು ಭಾವಚಿತ್ರ ಹಾಕಿ ಅಸಭ್ಯ ಪೋಸ್ಟ್‌; ಕುಂದಾಫುರ ಪೊಲೀಸ್‌...

ಕುಂದಾಪುರ: ಫೇಸ್‌ ಬುಕ್‌ ನಲ್ಲಿ ನಾರಾಯಣ ಗುರು ಭಾವಚಿತ್ರ ಹಾಕಿ ಅಸಭ್ಯ ಪೋಸ್ಟ್‌; ಕುಂದಾಫುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು!

- Advertisement -
- Advertisement -

ಕುಂದಾಪುರ: ಸಾಮಾಜಿಕ ಜಾಲತಾಣದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಬಗ್ಗೆ ಅಸಭ್ಯ ಪೋಸ್ಟ್‌ ಮಾಡಿದ್ದ ವ್ಯಕ್ತಿಯ ವಿರುದ್ದ ಕುಂದಾಫುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂಬ ಸಿದ್ಧಾಂತವನ್ನು ಜಗತ್ತಿಗೆ ಸಾರಿದ ಸದ್ಗುರು “ಬ್ರಹ್ಮಶ್ರೀ ನಾರಾಯಣ ಗುರುಗಳ ” ಬಗ್ಗೆ ಇತ್ತೀಚೆಗೆ ಹರೀಶ್ ಕುಂಭಾಶಿ ಎನ್ನುವ ವ್ಯಕ್ತಿ “ಗುರುಗಳೇ ಕೆಲವು ಸೂ.. ಮಕ್ಕಳಿಗೆ ಜಾತೀಯತೆಯ ಧರ್ಮ ನೀವೇ ಹೇಳ್ಬೇಕು” ಎಂಬ ಅಸಭ್ಯ ಪೋಸ್ಟ್ ಹಾಕಿ ಫೇಸ್ ಬುಕ್ ನಲ್ಲಿ ಹರಿಬಿಟ್ಟಿದ್ದರು, ಇದರಿಂದ ನಾರಾಯಣ ಗುರುಗಳ ಅನುಯಾಯಿಗಳಿಗೆ ತುಂಬಾ ನೋವುಂಟು ಮಾಡಿದೆ.

ಇಂತಹ ವ್ಯಕ್ತಿಯ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮತ್ತು ಆ ವ್ಯಕ್ತಿ ಕುಂದಾಪುರ ನಾರಾಯಣ ಗುರುಗಳ ಸನ್ನಿಧಿಗೆ ಬಂದು ಗುರುಗಳ ಪ್ರತಿಮೆಯ ಮುಂದೆ ಕ್ಷಮೆಯಾಚಿಸಿ ತಪ್ಪು ಒಪ್ಪಿಕೊಳ್ಳಬೇಕೆಂದು ಕಿರಣ್ ಪೂಜಾರಿ ಅವರು ಈ ಮೂಲಕ ವಿನಂತಿಸುತ್ತೇನೆ ಎಂದು ಠಾಣೆಗೆ ಹರೀಶ್ ಕುಂಭಾಶಿ ವಿರುದ್ಧ ದೂರು ನೀಡಿರುತ್ತಾರೆ.

ಹರೀಶ್ ಕುಂಭಾಶಿ ಖಾಸಗಿ ಪತ್ರಿಕೆಯ ಸಂಪಾದಕರಾಗಿ ಈ ರೀತಿಯಾದ ವರ್ತನೆ ಹಾಗೂ ಪದಗಳನ್ನು ಬಳಸಿದ ರೀತಿ ನೋಡಿದರೆ ಸಂಪಾದಕನಾಗಿರುವುದು ವ್ಯರ್ಥ ಎಂಬ ಭಾವನೆ ಜನರಲ್ಲಿ ಮೂಡಿದ್ದು, ಇಂತಹ ವ್ಯಕ್ತಿಗಳು ಪ್ರತಿಕಾರಂಗಕ್ಕೆ ಬೇಕಾಗಿದೆಯಾ? ಎಂಬ ಪ್ರಶ್ನೆ ಜನರಲ್ಲಿ ಬಿತ್ತಿದೆ. ಈ ರೀತಿಯಾದ ಬರವಣಿಗೆಯಿಂದಾಗಿ ಸಾರ್ವಜನಿಕರ ಕೆಂಗಣ್ಣಿಗೆ ಗುರಿ ಆಗಿದ್ದಂತೂ ಸತ್ಯ. ಇನ್ನಾದರೂ ಈತ ತಾನು ಮಾಡಿದ ತಪ್ಪನ್ನು ಅರಿತು ಗುರುಗಳ ಸನ್ನಿದಿಗೆ ಬಂದು ಕ್ಷಮೆ ಯಾಚಿಸುವುದು ಸೂಕ್ತ ಎನ್ನುವುದು ಸಾರ್ವಜನಿಕರ ಅಭಿಪ್ರಾಯ.

- Advertisement -

Latest News

error: Content is protected !!