Monday, May 13, 2024
Homeಕರಾವಳಿಉಡುಪಿಉಡುಪಿ: ‘ರಾಯಲ್ ಮಹಲ್’ ಬಹುಮಹಡಿ ಕಟ್ಟಡದ ಭಾಗಶಃ ಭಾಗ ಕುಸಿತ: ತಪ್ಪಿದ ಭಾರೀ ದುರಂತ

ಉಡುಪಿ: ‘ರಾಯಲ್ ಮಹಲ್’ ಬಹುಮಹಡಿ ಕಟ್ಟಡದ ಭಾಗಶಃ ಭಾಗ ಕುಸಿತ: ತಪ್ಪಿದ ಭಾರೀ ದುರಂತ

spot_img
- Advertisement -
- Advertisement -

ಉಡುಪಿ: ನಗರದ ಚಿತ್ತರಂಜನ್ ಸರ್ಕಲ್ ನಲ್ಲಿರುವ ಹಳೆಯ ಬಹು ಮಹಡಿ ಕಟ್ಟಡ ರಾಯಲ್‌ ಮಹಲ್‌‌ನ ಒಂದು ಪಾರ್ಶ್ವ ಇಂದು ಕುಸಿದಿದ್ದು, ಪರಿಣಾಮ ಹತ್ತಿರದ ಎರಡು ಅಂಗಡಿಗಳಿಗೆ ಹಾನಿಯಾಗಿದೆ.

ರಾಯಲ್ ಮಹಲ್‌ ಉಡುಪಿ ನಗರದ ಹಳೇಯ ಕಟ್ಟಡಗಳಲ್ಲಿ ಒಂದಾಗಿದೆ. ಈ ಹಳೆಯ ಕಟ್ಟಡದಲ್ಲಿ ಹೋಟೆಲ್, ಬೇಕರಿ, ಭಾರತೀಯ ಜನೌಷಧಿ ಕೇಂದ್ರ, ಚಿಪ್ಸ್ ಅಂಗಡಿ ಸೇರಿದಂತೆ ಐದಾರು ಅಂಗಡಿಗಳಿದ್ದವು. ಕಟ್ಟಡದ ಒಂದು ಪಾರ್ಶ್ವ ಕುಸಿಯುತ್ತಿದ್ದಂತೆ ಜನರು ಕಟ್ಟಡದಿಂದ ದೂರ ಓಡಿದ್ದಾರೆ. ಈ ವೇಳೆ ಓರ್ವ ಮಹಿಳೆ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅದೃಷ್ಟವಶಾತ್ ದೊಡ್ಡ ಅನಾಹುತವೊಂದು ತಪ್ಪಿದೆ.

ಕಟ್ಟಡ ಕುಸಿದ ಪರಿಣಾಮ ಪಕ್ಕದಲ್ಲೇ ಇದ್ದ ಜಿಒಎಸ್‌ ಕಂಬಕ್ಕೆ ಹಾನಿಯಾಗಿದೆ. ಇದರಿಂದ ವಿದ್ಯುತ್ ವ್ಯತ್ಯಯ ಉಂಟಾಗಿದೆ. ಕಟ್ಟಡದ ಕೆಲಮಹಡಿಯಲ್ಲಿರುವ ಹೋಟೆಲ್ ನ್ಯೂ ದ್ವಾರಕದಲ್ಲಿ ಕೆಲಸ ಮಾಡಿಕೊಂಡಿದ್ದ ಮಹಿಳೆಯೊಬ್ಬರಿಗೆ ಕಟ್ಟಡದ ಅವಶೇಷಗಳು ತಾಗಿ ಸಣ್ಣಪುಟ್ಟ ಗಾಯವಾಗಿದೆ. ಕಟ್ಟಡ ಬೀಳುವ ಶಬ್ದದಿಂದ ಆತಂಕಗೊಂಡು ಮಹಿಳೆ ಹೊರಗಡೆ ಓಡಿಬಂದಿದ್ದು, ಬರುವಾಗ ಮಣ್ಣಿನ ಮೇಲೆ ಕಾಲು ಹಾಕಿ ಜಾರಿ ಬಿದ್ದಿದ್ದಾರೆ.

ಸದ್ಯ ಅಗ್ನಿಶಾಮಕ ದಳದವರು ಬಿದ್ದ ಕಟ್ಟಡದ ಮಣ್ಣು ತೆರವು ಕಾರ್ಯಚರಣೆ ನಡೆಸುತ್ತಿದ್ದಾರೆ. ಕಟ್ಟಡ ಕುಸಿತ ಸ್ಥಳಕ್ಕೆ ಉಡುಪಿ ನಗರಸಭೆಯ ಪೌರಾಯುಕ್ತ ಆನಂದ ಕಲ್ಲೋಳಿಕರ್ ಭೇಟಿ ನೀಡಿದ್ದು, ಕಟ್ಟಡ ಐವತ್ತು ವರ್ಷಕ್ಕಿಂತಲೂ ಹಳೆಯದಾಗಿದೆ. ಸದ್ಯ ಕಟ್ಟಡದ ಒಂದು ಭಾಗ ಕುಸಿದಿದ್ದು, ಉಳಿದ ಭಾಗವೂ ಕುಸಿಯುವ ಸಂಭವವಿದೆ. ಹಾಗಾಗಿ ಕಟ್ಟಡವನ್ನು ಸಂಪೂರ್ಣವಾಗಿ ನೆಲಸಮ ಮಾಡುವಂತೆ ಕಟ್ಟಡದ ಮಾಲೀಕರಿಗೆ ನೋಟಿಸ್ ನೀಡಲಾಗುವುದು ಎಂದು ಸುದ್ದಿಗಾರರಿಗೆ ತಿಳಿಸಿದರು.

- Advertisement -
spot_img

Latest News

error: Content is protected !!