Thursday, June 4, 2026
Homeಕರಾವಳಿಬೆಳ್ತಂಗಡಿ ಪೊಲೀಸರಿಂದ ಮಿಂಚಿನ ಕಾರ್ಯಾಚರಣೆ; ಮೂವರು ದ್ವಿಚಕ್ರ ವಾಹನ ಕಳ್ಳರ ಬಂಧನ

ಬೆಳ್ತಂಗಡಿ ಪೊಲೀಸರಿಂದ ಮಿಂಚಿನ ಕಾರ್ಯಾಚರಣೆ; ಮೂವರು ದ್ವಿಚಕ್ರ ವಾಹನ ಕಳ್ಳರ ಬಂಧನ

- Advertisement -
- Advertisement -

ಬೆಳ್ತಂಗಡಿ: ತಾಲೂಕಿನ ಉಜಿರೆ ಗ್ರಾಮದ ವಂದನಾ ಭಂಡರ್ಕಾರ್(40) ರವರು‌ 24,000/-ರೂ ಮೌಲ್ಯದ ಸ್ಕೂಟರ್ ವಾಹನವನ್ನು ದಿನಾಂಕ 13-04-2020 ರಂದು ಉಜಿರೆಯ ಶ್ರೀಹರಿ ಮೋಟಾರ್ಸ್ ಬಳಿ ರಿಪೇರಿ‌ ಮಾಡಲು ಇಟ್ಟು ತಾಯಿ ಮನೆ ಕಾರವರಕ್ಕೆ ಹೋಗಿ ಒಂದು ತಿಂಗಳ ನಂತರ (12-05-2020 ರಂದು) ವಾಪಸ್ ಬಂದು ನೋಡಿದಾಗ ಸ್ಕೂಟರ್ ನಾಪತ್ತೆಯಾಗಿತ್ತು ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ದೂರು ನೀಡಿದ್ದರು.

ಈ ಸ್ಕೂಟರ್ ಕಳ್ಳತನ ಪ್ರಕರಣವನ್ನು ಭೇದಿಸಿ ಮೂರು ಜನ ಆರೋಪಿಗಳನ್ನು ಬಂಧಿಸಿ ಉಜಿರೆ ಗ್ಯಾರೇಜ್ ‌ಬಳಿ ಕಳ್ಳತನ ಮಾಡಿದ ಸ್ಕೂಟರ್ ಮತ್ತು ಬೇರೆ ಕಡೆ ಕಳ್ಳತನ ಮಾಡಿದ ಎರಡು ಸ್ಕೂಟರ್ ವಶಪಡಿಸಿಕೊಂಡಿದ್ದಾರೆ.

ಬಂಧಿತರು ಉಜಿರೆ ಗ್ರಾಮದ ಹಳೆಪೇಟೆಯ ನಿವಾಸಿ ಸೀತಾರಾಮ್ ಶೆಟ್ಟಿ ಮಗ ಅರುಣ್ ಶೆಟ್ಟಿ (30) ,ಬೆಳ್ತಂಗಡಿ ಕನ್ಯಾಡಿ ಗ್ರಾಮದ ಗುರಿಪಳ್ಳದ ನೋಣಯ್ಯ ಪೂಜಾರಿಯ ಮಗ ಹೇಮಂತ್ ಬಿರ್ವ@ಹರ್ಷಿತ್(20), ಉಜಿರೆ ಗ್ರಾಮದ ಬಾಸ್ಕರ ಗೌಡರ ಮಗ ಸಂಪತ್ @ಶ್ಯಾಮ್(24) ರನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ.

ದಿನಾಂಕ 17-09-2020 ರಂದು ಸಂಜೆ ಉಜಿರೆ ಗ್ರಾಮದ ‌ಪಂಚರಿಕಾಡು ರಬ್ಬರ್ ತೋಟದಲ್ಲಿ ಮೂವರು ಯುವಕರು ಸ್ಕೂಟರ್ ವಾಹನವನ್ನು ಬಿಚ್ಚುತ್ತಿರುವ ಬಗ್ಗೆ ಬಂದು ಮಾಹಿತಿ ಮೇರೆಗೆ ದಾಳಿ ಮಾಡಿ ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಉಜಿರೆಯಲ್ಲಿ ಗ್ಯಾರೇಜ್ ನಲ್ಲಿ ನಿಲ್ಲಿಸಿದ ಸ್ಕೂಟರ್ ಕಳ್ಳತನ ಮಾಡಿರುವುದು ಮತ್ತು ಬೇರೆ ಎರಡು ಸ್ಕೂಟರ್ ಕಳ್ಳತನ ಮಾಡಿ ಅದರ ವಸ್ತುಗಳನ್ನು ಬಿಚ್ಚಿ ಮಾರಾಟ ಮಾಡಲು ಯತ್ನಿಸಿರುವುದಾಗಿ ಒಪ್ಪಿಕೊಂಡಿದ್ದಾರೆ.

ಬೆಳ್ತಂಗಡಿ ಸರ್ಕಲ್ ಇನ್ಸ್‌ಪೆಕ್ಟರ್ ಸಂದೇಶ್.ಪಿ.ಜಿ‌ ನೇತೃತ್ವದ ಬೆಳ್ತಂಗಡಿ ಪಿಎಸ್ಐ‌ ನಂದ ಕುಮಾರ್ ತಂಡದ ಪ್ರೊಪೇಷನರಿ ಪಿಎಸ್ಐ ಶರತ್ ಕುಮಾರ್, ಎಎಸ್ಐ ದೇವಪ್ಪ ,ಎಎಸ್ಐ ತೀಲಕ್, ಸಿಬ್ಬಂದಿಗಳಾದ ಪುಟ್ಟಸ್ವಾಮಪ್ಪ ,ಚರನ್ ರಾಜ್ , ವೆಂಕಟೇಶ್, ಅಶೋಕ್, ಸಂತೋಷ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.

- Advertisement -

Latest News

error: Content is protected !!