Thursday, June 4, 2026
HomeUncategorizedಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಬಜಗೋಳಿ ಮೂಲದ ಮುಂಬೈ ಹೋಟೆಲ್ ಉದ್ಯಮಿ ಆತ್ಮಹತ್ಯೆ

ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಬಜಗೋಳಿ ಮೂಲದ ಮುಂಬೈ ಹೋಟೆಲ್ ಉದ್ಯಮಿ ಆತ್ಮಹತ್ಯೆ

- Advertisement -
- Advertisement -

ಉಡುಪಿ: ಕೊರೊನಾ ಲಾಕ್ ಡೌನ್ ನಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಉಡುಪಿ ಜಿಲ್ಲೆಯ ಬಜೆಗೋಳಿ ಮೂಲದ ಹೊಟೇಲ್ ಉದ್ಯಮಿ ವಿರಾರ್ ಕರುಣಾಕರ್ ಪುತ್ರನ್ ಜುಲೈ 15 ರಂದು ಮುಂಬೈಯ ತಮ್ಮ ಸ್ಟಾರ್ ಪ್ಲಾನೆಟ್ ಹೊಟೇಲಿನಲ್ಲಿ ಡೆತ್ ನೋಟ್ ಬರೆದಿಟ್ಟು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ..

ಪುತ್ರನ್‌ ಅವರು ಬೇರೊಬ್ಬರಿಂದ ಸಾಲ ತೆಗೆದುಕೊಂಡಿದ್ದರು. ಲಾಕ್‌ಡೌನ್‌ ಹಿನ್ನೆಲೆ ತೀವ್ರ ಆರ್ಥಿಕ ಸಮಸ್ಯೆಗೆ ಒಳಗೊಂಡಿದ್ದರು. ಅಲ್ಲದೇ, ಕಟ್ಟಡದ ಮಾಲೀಕರು ಕೂಡಾ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಇದರಿಂದ ನೊಂದ ಪುತ್ರನ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ.

ಪುತ್ರನ್‌ ಅವರು ಪತ್ನಿ ಶಾಲಿನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಪುತ್ರನ್‌ ಅವರು ಕಳೆದ 25 ವರ್ಷಗಳಿಂದ ಹೊಟೇಲ್‌ನಲ್ಲಿ ವ್ಯವಹರಿಸುತ್ತಿದ್ದರು

- Advertisement -

Latest News

error: Content is protected !!