Wednesday, June 3, 2026
Homeಕರಾವಳಿಉಡುಪಿಮಂಗಳೂರಿನಲ್ಲಿ ಬಿಲ್ಡಿಂಗ್ ಮೇಲೆ ಹಿಟಾಚಿ ಹತ್ತಿದ್ದೇಗೆ ಗೊತ್ತಾ?!

ಮಂಗಳೂರಿನಲ್ಲಿ ಬಿಲ್ಡಿಂಗ್ ಮೇಲೆ ಹಿಟಾಚಿ ಹತ್ತಿದ್ದೇಗೆ ಗೊತ್ತಾ?!

- Advertisement -
- Advertisement -

ಮಂಗಳೂರು: ಮಂಗಳೂರಿನ‌ ಸಿಟಿ ಸೆಂಟರ್ ಬಳಿ ಬಹು ಮಹಡಿ ಕಟ್ಟಡದ ಮೇಲೆ ಹಿಟಾಚಿಯೊಂದು ಕೆಲಸ ಮಾಡುತ್ತಿರುವ ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.‌ ಆದರೆ ಅಷ್ಟು ಎತ್ತರದ ಕಟ್ಟಡದ ಮೇಲೆ ಹಿಟಾಚಿ ಹೋಗಿದ್ದಾದರೂ ಹೇಗೆ ಎಂಬ ಬಗ್ಗೆ ವೀಡಿಯೋ ನೋಡಿದವರೆಲ್ಲರೂ ತಲೆಕೆಡಿಸಿಕೊಂಡಿದ್ದರು. ಈಗ ಹಿಟಾಚಿ ಬಿಲ್ಡಿಂಗ್ ಹತ್ತಿದ್ದು ಹೇಗೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ.

ಬೃಹತ್ ಪ್ರಮಾಣದ ಕ್ರೇನ್ ಮೂಲಕ ಹಿಟಾಚಿಯನ್ನು ಅಷ್ಟು ಎತ್ತರದ ಕಟ್ಟಡದ ಮೇಲೆ ಕೊಂಡೊಯ್ಯಲಾಗಿದೆ. ಕಟ್ಟಡದ ಕೆಳಭಾಗದಲ್ಲಿ ಕ್ರೇನ್ ನಿಲ್ಲಿಸಿ ನಂತರ ಕ್ರೇನ್ ನಲ್ಲಿ ಮೇಲಕ್ಕೆ ಎತ್ತಲಾಗಿದೆ. ಮೇಲೆತ್ತುವ ಕೆಲಸಕ್ಕೆ ಸ್ವಲ್ಪ ಸಮಯ ಅಷ್ಟೇ ತಗುಲಿದ್ದು ಹೀಗಾಗಿ ಹಿಟಾಚಿ ಸುಲಭವಾಗಿ ಕಟ್ಟಡದ ಮೇಲೆ ಹತ್ತಿ ಕೆಲಸ ಆರಂಭಿಸಿದೆ. ಆದರೆ ಕ್ರೇನ್ ಮೂಲಕ ಹಿಟಾಚಿಯನ್ನು ಕಟ್ಟಡದ ಮೇಲೆ ಎತ್ತುವುದನ್ನು ನೋಡಿರದವರು ಬಿಲ್ಡಿಂಗ್ ಮೇಲೆ ಹಿಟಾಚಿ ಹೇಗೆ ಹೋಯ್ತು ಅಂತಾ ವೀಡಿಯೋ ನೋಡಿ ಆಶ್ಚರ್ಯಪಟ್ಟಿದ್ದರು.

- Advertisement -

Latest News

error: Content is protected !!