Thursday, June 4, 2026
Homeಕರಾವಳಿಉಜಿರೆಯಲ್ಲಿ ತರಕಾರಿ ಅಂಗಡಿಗೆ ನುಗ್ಗಿದ ಓಮ್ನಿ: ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಉಜಿರೆಯಲ್ಲಿ ತರಕಾರಿ ಅಂಗಡಿಗೆ ನುಗ್ಗಿದ ಓಮ್ನಿ: ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

- Advertisement -
- Advertisement -

ಬೆಳ್ತಂಗಡಿ : ಪಾರ್ಕಿಂಗ್‌ ನಲ್ಲಿ‌ ನಿಲ್ಲಿಸಿದ್ದ ಓಮ್ನಿ ವಾಹನವೊಂದು ತರಕಾರಿ ಅಂಗಡಿಗೆ ನುಗ್ಗಿದ ಘಟನೆ ಉಜಿರೆಯಲ್ಲಿ ನಡೆದಿದೆ. ಉಜಿರೆ ಎಸ್ ಡಿಎಂ ಕಾಲೇಜು ರಸ್ತೆ ಬಳಿ ಇರುವ ಶಾರ್ವರಿ ಕಾಂಪ್ಲೆಕ್ಸ್ ನಲ್ಲಿ ಕೆಳಮಹಡಿಯಲ್ಲಿರುವ ಜೈನ್ ತರಕಾರಿ ಅಂಗಡಿಯೊಳಗೆ ಏಕಾಏಕಿ ಓಮ್ನಿ ವಾಹನವೊಂದು ಮಧ್ಯಾಹ್ನ ನಿಯಂತ್ರಣ ತಪ್ಪಿ ನುಗ್ಗಿದೆ.

ಜೈನ್ ತರಕಾರಿ ಅಂಗಡಿಯಲ್ಲಿ ತರಕಾರಿ ಖರೀದಿಸುತ್ತಿದ್ದ ಇಬ್ಬರು ವಿದ್ಯಾರ್ಥಿಗಳು ಎಚ್ಚೆತ್ತುಕೊಂಡು ಕೂದಳೆಲೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಓಮ್ನಿ ವಾಹನ ಮಾಲೀಕರು ತಮ್ಮ ಗಾಡಿಯಲ್ಲಿ ಮಗುವನ್ನು ಬಿಟ್ಟು ತರಕಾರಿ ಅಂಗಡಿಯ ಕಟ್ಟಡದ ಮುಂಭಾಗದ ಪಾರ್ಕಿಂಗ್ ನಲ್ಲಿ ನಿಲ್ಲಿಸಿ ಹೊರಗಡೆ ಹೋಗಿರುವ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು, ಅದೃಷ್ವವಷಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಘಟನೆಯ ಎಲ್ಲಾ ದೃಶ್ಯಗಳು ಸಿಸಿಕ್ಯಾಮರದಲ್ಲಿ ಸೆರೆಯಾಗಿದೆ.

- Advertisement -

Latest News

error: Content is protected !!