Thursday, June 4, 2026
HomeUncategorizedತಪ್ಪು ಮಾಡಿಲ್ಲ ಅನ್ನುವುದಾದರೆ ಧರ್ಮಸ್ಥಳದಲ್ಲಿ ಆಣೆ ಮಾಡಲಿ:ಇಂದ್ರಜಿತ್ ಲಂಕೇಶ್

ತಪ್ಪು ಮಾಡಿಲ್ಲ ಅನ್ನುವುದಾದರೆ ಧರ್ಮಸ್ಥಳದಲ್ಲಿ ಆಣೆ ಮಾಡಲಿ:ಇಂದ್ರಜಿತ್ ಲಂಕೇಶ್

- Advertisement -
- Advertisement -

ಬೆಂಗಳೂರು: ನಟ ದರ್ಶನ್ ವಿಚಲಿತರಾಗಿದ್ದಾರೆ, ಹಾಗಾಗಿ ಗಂಡಸ್ತನದ ಬಗ್ಗೆ ಮಾತನಾಡುತ್ತಿದ್ದಾರೆ. ದರ್ಶನ್ ರವರು ತಪ್ಪು ಮಾಡಿಲ್ಲ ಅನ್ನುವುದಾದರೆ ಧರ್ಮಸ್ಥಳ ಮಂಜುನಾಥನ ಮುಂದೆ ತಪ್ಪು ಮಾಡಿಲ್ಲ ಅಂತ ಪ್ರಮಾಣ ಮಾಡಲಿ ಎಂದು ನಿರ್ದೇಶಕ ಹಾಗೂ ಪತ್ರಕರ್ತ ಇಂದ್ರಜಿತ್ ಲಂಕೇಶ್ ಪ್ರತಿಸವಾಲು ಹಾಕಿದ್ದಾರೆ.

ಇಂದು ಸಂಜೆ ಮಾಧ್ಯಮಗೋಷ್ಠಿ ನಡೆಸಿದ ನಟ ದರ್ಶನ್ ರವರು ಇಂದ್ರಜಿತ್ ಲಂಕೇಶ್ ವಿರುದ್ಧ ಹರಿಹಾಯ್ದಿದು, ನಿಮ್ಮಪ್ಪನಿಗೆ ಹುಟ್ಟಿದ್ದರೆ ನನ್ನ ವಿರುದ್ಧದ ದಾಖಲೆಗಳನ್ನು ಬಿಡುಗಡೆ ಮಾಡಲಿ ಎಂದು ಇಂದ್ರಜಿತ್ ಅವರಿಗೆ ನೇರ ಸವಾಲು ಹಾಕಿದ್ದರು. ಇದಕ್ಕೆ ಉತ್ತರಿಸಲೆಂದು ಮಾಧ್ಯಮಗಳ ಮುಂದೆ ಹಾಜರಾದ ಇಂದ್ರಜಿತ್, ದರ್ಶನ್ ಅವರಿಗೆ ಮರು ಸವಾಲು ಹಾಕಿದ್ದಾರೆ.

ದರ್ಶನ್ ಅವರು ವಿಚಲಿತರಾಗಿದ್ದಾರೆ. ಇದು ವಿಚಲಿತರಾಗುವ ಸಂದರ್ಭ ಅಲ್ಲ. ನಾ ಕೇಳ್ತಿರೋ ಪ್ರಶ್ನೆಗಳಿಗೆ ಉತ್ತರಿಸಲಿ ಸಾಕು. ನಾನು ದರ್ಶನ್ ಅವರಿಗೆ ಎರಡೇ ಪ್ರಶ್ನೆಗಳಿಗೆ ಕೇಳಿದ್ದೇನೆ. ಅದನ್ನು ಬಿಟ್ಟು ವಿಚಲಿತರಾಗದೆ ಗಂಡಸು, ಗಂಡಸ್ತನ ಎನ್ನುವ ಪದಗಳನ್ನು ಉಪಯೋಗಿಸುವುದು ಸರಿಯಲ್ಲ. ಆ ಥರ ಶಬ್ದಗಳು ನನ್ನ ಬಾಯಿಯಿಂದ ಬರುವುದು ಬೇಡ ಎಂದರು.

ಮಾಧ್ಯಮಗೋಷ್ಟಿಯಲ್ಲಿ ಲಾಯರ್ ಅವರನ್ನು ಕೂರಿಸಿಕೊಂಡ ವಿಚಾರವನ್ನು ಪ್ರಸ್ತಾಪಿಸಿದ ಇಂದ್ರಜಿತ್, ನಿಮ್ಮ ಹಾಗೂ ಪತ್ನಿ ಗಲಾಟೆ ವೇಳೆ ನೀವು ಲಾಯರ್ ನ್ನು ಯಾಕೆ ಕೂರಿಸಿಕೊಂಡಿದ್ದೀರಿ ಎಂದು ಪ್ರಶ್ನಿಸಿದ್ದಾರೆ.

- Advertisement -

Latest News

error: Content is protected !!