Thursday, June 4, 2026
Homeಕರಾವಳಿಉಡುಪಿಉಡುಪಿ: ಸೆಗಣಿ ಗುಂಡಿಗೆ ಕಾಲು ಜಾರಿ ಬಿದ್ದು ಮಗು ಸಾವು

ಉಡುಪಿ: ಸೆಗಣಿ ಗುಂಡಿಗೆ ಕಾಲು ಜಾರಿ ಬಿದ್ದು ಮಗು ಸಾವು

- Advertisement -
- Advertisement -

ಉಡುಪಿ: ಸಗಣಿ ಗುಂಡಿಗೆ ಕಾಲು ಜಾರಿ ಬಿದ್ದು ಮಗು ಸಾವನ್ನಪ್ಪಿರುವ ಘಟನೆ ಹೆಬ್ರಿ ಗ್ರಾಮದ ಬಚ್ಚಪ್ಪು ಎಂಬಲ್ಲಿ ನಡೆದಿದೆ. ಮೃತ ಮಗುವನ್ನು ಜಾರ್ಖಂಡ್ ಮೂಲದ ಸೋಮೆಶ್ವರ ಓಕಾನ್ ಎಂಬವರ ಪುತ್ರ ಮುನೇಶ್ವರ (4) ಎಂದು ಗುರುತಿಸಲಾಗಿದೆ.

ಓಕಾನ್ ಕಳೆದ 6 ವರ್ಷಗಳಿಂದ ಆಂಟನಿ ಎಂಬವರ ತೋಟದಲ್ಲಿ ಕೂಲಿ ಕೆಲಸ ಮಾಡಿಕೊಂಡು ಅಲ್ಲಿಯೇ ಬಿಡಾರದಲ್ಲಿ ವಾಸ ಮಾಡಿಕೊಂಡಿದ್ದರು. ಇವರ ಮಗು ತೋಟದಲ್ಲಿ ಆಟ ಆಡುತ್ತಿರುವಾಗ ಸೆಗಣಿ ಗುಂಡಿಯಲ್ಲಿ ಆಕಸ್ಮಿಕವಾಗಿ ಕಾಲುಜಾರಿ ಬಿದ್ದು ಮೃತ ಪಟ್ಟಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!