Monday, May 20, 2024
Homeಕರಾವಳಿಬೆಳ್ತಂಗಡಿ: ಸೇತುವೆ ಬಳಿ ಕಕ್ಕಿಂಜೆಯ ಆ್ಯಂಬುಲೆನ್ಸ್ ಪಲ್ಟಿ ಪ್ರಕರಣ; ಘಟನೆಯ ಸ್ಫೋಟಕ ವಿಡಿಯೋ ಬಹಿರಂಗ:ಮಹಾಎಕ್ಸ್...

ಬೆಳ್ತಂಗಡಿ: ಸೇತುವೆ ಬಳಿ ಕಕ್ಕಿಂಜೆಯ ಆ್ಯಂಬುಲೆನ್ಸ್ ಪಲ್ಟಿ ಪ್ರಕರಣ; ಘಟನೆಯ ಸ್ಫೋಟಕ ವಿಡಿಯೋ ಬಹಿರಂಗ:ಮಹಾಎಕ್ಸ್ ಪ್ರೆಸ್ ರಿವೀಲ್ ಮಾಡುತ್ತಿದೆ EXCLUSIVE ಡಿಟೈಲ್ಸ್

spot_img
- Advertisement -
- Advertisement -

ಬೆಳ್ತಂಗಡಿ : ಆಂಬುಲೆನ್ಸ್ ವಾಹನವೊಂದು ಬೆಳ್ತಂಗಡಿಯ ಸೇತುವೆಯಲ್ಲಿ ಪಲ್ಟಿಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಪಲ್ಟಿಯಾಗುವ ಮೊದಲು ಅದರಲ್ಲಿದ್ದ ಡಾಕ್ಟರ್ ಎರಡು ಬಾರ್ ಗಳಿಗೆ ಹೋಗಿ ಬಿಯರ್ ಪಾರ್ಸೆಲ್ ಮಾಡಿ ವಾಹನದಲ್ಲಿ ಕುಡಿಯುತ್ತಿದ್ದ ಬಗ್ಗೆ ಮಹಾ ಎಕ್ಸ್‌ಪ್ರೆಸ್‌ ವೆಬ್ ಸೈಟ್ ಗೆ ಸಿಸಿ ಕ್ಯಾಮರಾದ ದಾಖಲೆಗಳು ಸಿಕ್ಕಿದೆ‌‌. ಅದಲ್ಲದೆ ವಾಹನದಲ್ಲಿ ಇನ್ಸೂರೆನ್ಸ್ ಮತ್ತು ಟ್ಯಾಕ್ಸ್ ಕಟ್ಟದೆ ಬಾಕಿಯಾಗಿರುವುದರ ಸಾಕ್ಷಿ ಸಮೇತ ದಾಖಲೆಗಳು ಮಹಾಎಕ್ಸ್ ವೆಬ್ ಸೈಟ್ ರಿವೀಲ್ ಮಾಡುತ್ತಿದೆ‌.

ಅಪಘಾತ ನಡೆದ ಘಟನೆ: ಮಂಗಳೂರಿನ ಖಾಸಗಿ  ಆಸ್ಪತ್ರೆಯಿಂದ ಕಕ್ಕಿಂಜೆಯ ರೋಗಿಯೊಬ್ಬರನ್ನು ಕರೆತರಲು ಬೆಳ್ತಂಗಡಿ ತಾಲೂಕಿನ ಕಕ್ಕಿಂಜೆಯ ಸೈಂಟ್ ಜೋಸೆಫ್ ಆಸ್ಪತ್ರೆಯ ಆಂಬುಲೆನ್ಸ್ ಡಿ.4 ರಂದು ರಾತ್ರಿ 8 ಗಂಟೆ ಸುಮಾರಿಗೆ ಹೊರಟಿದ್ದು ಮಡಂತ್ಯಾರ್ ಹೋಗುವ ಸಂದರ್ಭ ಬರುವುದು ಬೇಡ ಎಂಬ ಕರೆ ಮಂಗಳೂರಿನಿಂದ ಬಂದಿದ್ದು ಅಲ್ಲಿಂದ ಹಿಂತಿರುಗುತ್ತಿರುವ ವೇಳೆ ಬೆಳ್ತಂಗಡಿ ಸೇತುವೆಯಲ್ಲಿ ಪಲ್ಟಿಯಾದ ಘಟನೆ ಡಿ.4 ರಂದು ರಾತ್ರಿ ಸುಮಾರು 9:45 ಗಂಟೆಗೆ ನಡೆದಿತ್ತು. ವಾಹನಕ್ಕೆ ಸಂಪೂರ್ಣ ಹಾನಿಯಾಗಿತ್ತು.

ಆಂಬುಲೆನ್ಸ್ ನಲ್ಲಿದ್ದ ಮೂವರ ವಿವರ: ಬೆಳ್ತಂಗಡಿ ತಾಲೂಕಿನ ಕಕ್ಕಿಂಜೆ ಸೈಂಟ್ ಜೋಸೆಫ್ ಆಸ್ಪತ್ರೆಯ ಆಂಬುಲೆನ್ಸ್ ಚಾಲಕ ಇರಲ್ಲಿಲ್ಲ ಬದಲಾಗಿ ಆಸ್ಪತ್ರೆಯ ಲ್ಯಾಬ್ ಟೆಕ್ನಿಷಿಯನ್ ಅಗಿದ್ದ ಹುಸೈರ್ (23) ಬಂದಿದ್ದು ಹೋಗುವಾಗ ಡಾಕ್ಟರ್ ನಿತೀನ್ ಚಾಲನೆ ಮಾಡಿದ್ದರು. ವಾಪಸ್ ಬರುವಾಗ ಸಂತೆಕಟ್ಟೆಯಿಂದ ಹುಸೈರ್ ಚಾಲಕನಾಗಿದ್ದ ಮತ್ತೊಬ್ಬ ಷಾ ಕಿರಣ ತಂತ್ರಜ್ಞ ರತೀಶ್(24) ಕೂಡ ವಾಹನದ ಹಿಂಬದಿ ಸೀಟಿನಲ್ಲಿದ್ದರು. ಚಾಲಕನ ಪಕ್ಕದ ಸೀಟಿನಲ್ಲಿ ಕುಳಿತಿದ್ದ ಡಾಕ್ಟರ್ ನಿತೀನ್(47) ಎಂಬವರಿಗೆ ಕೈ ಹಾಗೂ ತಲೆಗೆ ಗಂಭೀರ ಗಾಯಗಳಾಗಿದ್ದು ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಇಂಡಿಯಾನ್ ಆಸ್ಪತ್ರೆಗೆ ಬೆಳ್ತಂಗಡಿ ಬಾಬಾ ಆಂಬುಲೆನ್ಸ್ ಜಲೀಲ್ ತಕ್ಷಣ ಸಾಗಿಸಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಹುಸೈರ್ ಮತ್ತು ರತೀಶ್ ಸೋಮವಾರ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಕೊಂಡು ಕಕ್ಕಿಂಜೆ ಸೈಂಟ್ ಜೋಸೆಫ್ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಡಾಕ್ಟರ್ ನಿತೀನ್ ಕುಡಿದ ಮತ್ತಿನಲ್ಲಿದ್ದೇ ಅಪಘಾತಕ್ಕೆ ಕಾರಣ :
ಸೈಂಟ್ ಜೋಸೆಫ್ ಆಸ್ಪತ್ರೆಯ ಡಾಕ್ಟರ್ ನಿತೀನ್ ಮಡಂತ್ಯಾರ್ ಹೋಗಿ ಅಲ್ಲಿಂದ ವಾಪಸ್ ಬರುವಾಗ ಮಡಂತ್ಯಾರ್ ನಲ್ಲಿ ಬಾರ್ & ರೆಸ್ಟೋರೆಂಟ್ ಗೆ ಸುಮಾರು 9:10 ಗಂಟೆಗೆ ಹೋಗಿ ಬಿಯರ್ ಪಾರ್ಸೆಲ್ ಮಾಡಿಕೊಂಡು ವಾಹನ ಚಾಲನೆ ಮಾಡಿಕೊಂಡು ಕುಡಿಯುತ್ತಿದ್ದರು ಬರುಬರುತ್ತಾ ಬಿಯರ್ ಖಾಲಿಯಾಗಿದ್ದರಿಂದ ಮತ್ತೆ ಬೆಳ್ತಂಗಡಿ ಅಯ್ಯಪ್ಪಗುಡಿ ಬಳಿ ಎಡಭಾಗಕ್ಕೆ ವಾಹನ ನಿಲ್ಲಿಸಿದ ಡಾಕ್ಟರ್ ನಿತೀನ್ ನೇರವಾಗಿ ವೈನ್ ಶಾಪ್ ಗೆ ಗೆ ಸುಮಾರು 9:37 ಗಂಟೆಗೆ ಹೋಗಿ ನೂರು ರೂಪಾಯಿ ನೀಡಿ ಒಂದು ಬಿಯರ್ (ಪಿಂಟ್) ಪಡೆದುಕೊಂಡು ಬಂದಿದ್ಕಸರತಈ ವೇಳೆ ಡಾಕ್ಟರ್ ಗೆ ಕುಡಿದ ನಶೆ ತಲೆ ಏರಿದರಿಂದ ಚಾಲಕನಾಗಿ ಹುಸೈರ್ ಕುಳಿತುಕೊಂಡು ಚಾಲನೆ ಮಾಡಿದ್ದಾನೆ ಈ ವೇಳೆ ಡಾಕ್ಟರ್ ಪಕ್ಕದ ಸೀಟಿನಲ್ಲಿ ಕುಳಿತು ಪಿಂಟ್ ಕುಡಿಯುತ್ತಿದ್ದರು ಈ ವೇಳೆ ವಾಹನ 120 ವೇಗದಲ್ಲಿತ್ತು ಬೆಳ್ತಂಗಡಿ ತಲುಪಿದ ಬಳಿಕ ಸೇತುವೆ ದಾಟುವ ವೇಳೆ ಡಾಕ್ಟರ್ ನಿತೀನ್ ಹ್ಯಾಂಡ್ ಬ್ರೇಕ್ ಮೇಲೆನೆ ಕುತಿದ್ದ ಕುಡಿದ ಮತ್ತಿನಲ್ಲಿ ಚಾಲಕ ಹುಸೈನ್ ಕೈ ಯನ್ನು ಹಿಡಿದುಕೊಂಡು ಎಳೆದಾಡಿದ್ದಾರೆ. ಆಗ ನಿಯಂತ್ರಣ ತಪ್ಪಿ ಬಲಭಾಗಕ್ಕೆ ವಾಹನ ಹೋಗಿ ಸೇತುವೆ ಬದಿಯ ಕಂದಕಕ್ಕೆ ಡಿಕ್ಕಿ ಹೊಡೆದು ನಂತರ ಪಲ್ಟಿ ಹೊಡೆದಿದೆ. ಆಂಬುಲೆನ್ಸ್ ನಲ್ಲಿ ರೋಗಿಗಳಿದ್ದರೆ ಡಾಕ್ಟರ್ ನ ಕುಡಿದ ಅಮಲಿನಲ್ಲಿ ಅನಾಹುತ ಆಗುತ್ತಿತ್ತು.

ವಾಹನಕ್ಕೆ ಇನ್ಸೂರೆನ್ಸ್ ಮತ್ತು ಟ್ಯಾಕ್ಸ್ ಇಲ್ಲ: ಆಂಬುಲೆನ್ಸ್ ವಾಹನ KA-70-1784 ಸಂಖ್ಯೆ ದಿ ಸೆಕ್ರೆಟರಿ ಎಂಬ ಹೆಸರಿನಲ್ಲಿ ಸೈಂಟ್ ಜೋಸೆಫ್ ಚಾರಿಟೇಬಲ್ ಟ್ರಸ್ಟ್‌ ಹೆಸರಿನಲ್ಲಿ ಬಂಟ್ವಾಳ ಆರ್.ಟಿ.ಓ ದಲ್ಲಿ 4-6-2019 ರಲ್ಲಿ ರಿಜಿಸ್ಟೆಷನ್ ಮಾಡಲಾಗಿದೆ. ಸರಕಾರಕ್ಕೆ ಟ್ಯಾಕ್ ಕಟ್ಟದೆ 31-05-2022 ಕ್ಕೆ ಕೊನೆಯಾಗಿದೆ. ಆಂಬುಲೆನ್ಸ್ ವಾಹನದ ಇನ್ಸೂರೆನ್ಸ್ ಕಟ್ಟದೆ 10-08-2022 ಕ್ಕೆ ಕೊನೆಯಾಗಿದೆ. ಆಂಬುಲೆನ್ಸ್ ವಾಹನ ಚಾಲನೆ ಮಾಡಬೇಕಾದರೆ ಬ್ಯಾಡ್ಜ್ ಇರಬೇಕು ಮತ್ತು ಘನ ವಾಹನ ಚಾಲನ ಲೈಸೆನ್ಸ್ ಕಡ್ಡಾಯ ಇರಬೇಕು. ಈ ವಾಹನದಲ್ಲಿದ್ದವರಲ್ಲಿ ಯಾವುದೇ ಒಂದು ಸರಿಯಾಗಿ ಲೈಸೆನ್ಸ್ ಇರಲ್ಲಿಲ್ಲ ಹುಸೈನ್ ಬಳಿ ಲಘು ವಾಹನ ಚಾಲನ ಲೈಸೆನ್ಸ್ ಮಾತ್ರ ಇತ್ತು.

ಪಾರ್ಸೆಲ್ ಮಾಡಿದ ನಾಲ್ಕು ಬಿಯರ್ ವಾಹನದಲ್ಲಿ ಪತ್ತೆ:

ಆಂಬುಲೆನ್ಸ್ ವಾಹನ ಪಲ್ಟಿಯಾದ ಬಳಿಕ ವಾಹನದೊಳಗೆ ನಾಲ್ಕು ಬಿಯರ್ ಬಾಟಲು ಪತ್ತೆಯಾಗಿತ್ತು. ಈ ವಿಚಾರ ಇನ್ನೂ ಬಹಿರಂಗವಾಗುವ ಬಗ್ಗೆ ತಿಳಿದು ಗಾಯಗೊಂಡವರಿಂದ ಮಾಹಿತಿ ಪಡೆದ ಓರ್ವ ವ್ಯಕ್ತಿ ಬಂದು ಹೊರತೆಗೆದು ಬಿಸಾಕಿದ್ದಾನೆ ಎಂದು ಘಟನೆ ನಡೆದ ಸ್ಥಳದಲ್ಲಿದ್ದ ಪ್ರತ್ಯಕ್ಷದರ್ಶಿ ಮಾಹಿತಿ ನೀಡಿದ್ದಾರೆ.

ಆಸ್ಪತ್ರೆಯ ಆಡಳಿತ ಮಂಡಳಿಗೆ ನಡುಕ : ಈ ಕಟ್ಟಡದಲ್ಲಿ ಮೊದಲು ಕುಮೇಂದ್ರ ಅಯೂರ್ವೆದಿಕ್  ಆಸ್ಪತ್ರೆಯಾಗಿ ಕಾರ್ಯಾಚರಿಸುತ್ತಿತ್ತು ನಂತರ ಇದು ಬಂದ್ ಅಗಿತ್ತು ಇದನ್ನು ಸೈಂಟ್ ಜೋಸೆಫ್ ಚಾರಿಟೇಬಲ್ ಟ್ರಸ್ಟ್ ಪಡೆದುಕೊಂಡು ಆಯುರ್ವೆದಿಕ್ ಪರವಾನಿಗೆ ಪತ್ರದಲ್ಲಿಯೇ ಇಂಗ್ಲೀಷ್ ಮೆಡಿಸಿನ್ ಮೂಲಕ ಸೈಂಟ್ ಜೋಸೆಫ್ ಆಸ್ಪತ್ರೆ ಹೆಸರು ನಮೂದಿಸಿ ಆರಂಭಿಸಲು ತಯಾರಿ ಮಾಡಿದ್ದರು ಇದಕ್ಕೆ ಸ್ಥಳೀಯರಿಂದ ಬೆಳ್ತಂಗಡಿ ತಾಲೂಕು ಆರೋಗ್ಯ ಅಧಿಕಾರಿಗೆ ದೂರು ಬಂದ ಹಿನ್ನೆಲೆಯಲ್ಲಿ ಹೊಸ ಇಂಗ್ಲೀಷ್ ಮೆಡಿಷಿನ್ ಪರವಾನಿಗೆ ಪತ್ರ ಮಾಡಿ ಕಳೆದ ಒಂದು ವರ್ಷದಿಂದ ಆಸ್ಪತ್ರೆ ಆರಂಭವಾಯಿತು. ಈ ಚಾರಿಟೇಬಲ್ ಟ್ರಸ್ಟ್ ನ ಆಡಳಿತ ಮಂಡಳಿಯಲ್ಲಿ ಅನೇಕ ಬಂಡವಾಳ ಹೂಡಿಕೆ ಮಾಡಿದ ಅನೇಕ ಮಂದಿ ಇದ್ದಾರೆ, ಇದರಿಂದ ಒಬ್ಬರಿಗೊಬ್ಬರಿಗೆ ಈ ಗೊಲ್ಮಾಲ್ ಪ್ರಕರಣದಿಂದ ಏನಾಗಬಹುದು ಎಂಬ ಭಯ ಶುರುವಾಗಿದೆ. ಆಂಬುಲೆನ್ಸ್ ವಾಹನವನ್ನು ಬೆಳ್ತಂಗಡಿ ಸಂಚಾರಿ ಪೊಲೀಸರು ವಶಕ್ಕೆ ಪಡೆದುಕೊಂಡು ಪೊಲೀಸ್ ಠಾಣೆಯಲ್ಲಿರಿಸಿದ್ದಾರೆ. ಇನ್ನೊಂದೆಡೆ ಈ ಅಪಘಾತ ಪ್ರಕರಣವನ್ನು ಮುಚ್ಚಿ ಹಾಕಲು ನಾನಾ ರೀತಿಯ ಕಸರತ್ತು ನಡೆಸುತ್ತಿರುವುದು ಬೆಳಕಿಗೆ ಬರುತ್ತಿದೆ.

- Advertisement -
spot_img

Latest News

error: Content is protected !!