Wednesday, June 3, 2026
Homeಕರಾವಳಿಉಡುಪಿಉಡುಪಿ: ಸಮುದ್ರ ಪಾಲಾಗುತ್ತಿದ್ದ ಇಬ್ಬರು ಪ್ರವಾಸಿ ಯುವಕರ ರಕ್ಷಣೆ

ಉಡುಪಿ: ಸಮುದ್ರ ಪಾಲಾಗುತ್ತಿದ್ದ ಇಬ್ಬರು ಪ್ರವಾಸಿ ಯುವಕರ ರಕ್ಷಣೆ

- Advertisement -
- Advertisement -

ಉಡುಪಿ: ಈಜಲು ಹೋಗಿ ಸಮುದ್ರ ಪಾಲಾಗುತ್ತಿದ್ದ ಇಬ್ಬರು ಪ್ರವಾಸಿಗರನ್ನು ಕೋಡಿ ಬೆಂಗ್ರೆಯ ಡೆಲ್ಟಾ ಬೀಚ್ ನಲ್ಲಿ ರಕ್ಷಣೆ ಮಾಡಲಾಗಿದೆ.

ಬೆಂಗಳೂರಿನಿಂದ ಪ್ರವಾಸಕ್ಕೆಂದು ಡೆಲ್ಟಾ ಬೀಚ್ ಗೆ ಬಂದಿದ್ದ ಮೂವರು ಯುವತಿಯರು ಮತ್ತು ಇಬ್ಬರು ಯುವಕರು ಬಂದಿದ್ದರು.ಇಂದು ಮಧ್ಯಾಹ್ನದ ವೇಳೆಯಲ್ಲಿ ಯುವಕರು ಸಮುದ್ರಕ್ಕೆ ಈಜಲು ಇಳಿದಿದ್ದಾಗ ಈ ಘಟನೆ ಸಂಭವಿಸಿದೆ.

ಸಮುದ್ರದಲ್ಲಿ ಇಳಿದು ಈಜುತ್ತಾ ಮುಂದೆ ಹೋದ ಇಬ್ಬರು ಯುವಕರು ಸಮುದ್ರದ ಅಲೆಗೆ ಸಿಲುಕಿ ಕೊಚ್ಚಿ ಹೋಗುತ್ತಿದ್ದುದ್ದನ್ನು ಗಮನಿಸಿದ್ದ
ಸೀಬರ್ಡ್ ಮತ್ತು ಡೆಲ್ಟಾ ಪ್ರವಾಸಿ ಬೋಟಿನ ಸಿಬ್ಬಂದಿ ಇಬ್ಬರು ಯುವಕರನ್ನು ರಕ್ಷಣೆ ಮಾಡಿದ್ದಾರೆ.

ಬೋಟಿನ ಸಿಬ್ಬಂದಿ ವಿವೇಕ್, ರಮೇಶ್ ಮತ್ತು ಕೃಷ್ಣ ಎಂಬವರು ಪ್ರವಾಸಿ ಯುವಕರನ್ನು ರಕ್ಷಣೆ ಮಾಡಿದ್ದಾರೆ.

- Advertisement -

Latest News

error: Content is protected !!