Friday, June 5, 2026
Homeತಾಜಾ ಸುದ್ದಿಟಗರು ಕಾಳಗದಲ್ಲಿ ಒಂದೇ ಟಗರಿನ ಡಿಚ್ಚಿ: ಅಖಾಡದಲ್ಲೇ ಮೃತಪಟ್ಟ ಎರಡು ಟಗರುಗಳು!

ಟಗರು ಕಾಳಗದಲ್ಲಿ ಒಂದೇ ಟಗರಿನ ಡಿಚ್ಚಿ: ಅಖಾಡದಲ್ಲೇ ಮೃತಪಟ್ಟ ಎರಡು ಟಗರುಗಳು!

- Advertisement -
- Advertisement -

ವಿಜಯಪುರ: ಟಗರು ಕಾಳಗದ ಅಖಾಡದಲ್ಲೇ ಒಂದೇ ಟಗರಿನ ಡಿಚ್ಚಿಗೆ ಎರಡು ಟಗರುಗಳು ಸಾವನ್ನಪ್ಪಿರುವ ಘಟನೆ ವಿಜಯಪುರ ಜಿಲ್ಲೆಯ‌ ಬಸವನ ಬಾಗೇವಾಡಿ ತಾಲೂಕಿನಲ್ಲಿ ನಡೆದಿದೆ.‌

ಎದುರಾಳಿ ಟಗರಿನ ಒಂದೇ ಡಿಚ್ಚಿಗೆ
ಎರಡು ಟಗರುಗಳು ನೆಲಕ್ಕುರುಳಿ ಸ್ಥಳದಲ್ಲೇ ಸಾವನ್ನಪ್ಪಿವೆ.‌

ಬಸವನಬಾಗೇವಾಡಿ ಪಟ್ಟಣದ ಮೂಲ ನಂದೀಶ್ವರ ದೇವಸ್ಥಾನದ ಜಾತ್ರೆಯಲ್ಲಿ ಎರಡು‌ ದಿನಗಳ ಹಿಂದೆ ಈ ಘಟನೆ ‌ನಡೆದಿದೆ.

ಮೂಲ ನಂದೀಶ್ವರ ದೇವಸ್ಥಾನದ ಜಾತ್ರೆಯ ಪ್ರಯುಕ್ತ ಜಾತ್ರಾ ಸಮಿತಿ ಟಗರಿನ‌ ಕಾಳಗ ಏರ್ಪಡಿಸಿತ್ತು.

ಟಗರು ಕಾಳಗದಲ್ಲಿ ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಗ್ರಾಮದ ಟಗರು ಹಾಗೂ ನಿಡಗುಂದಿ ತಾಲೂಕಿನ ಬೇನಾಳ ಗ್ರಾಮದ ಟಗರು ಬಾಗಲಕೋಟೆ ಜಿಲ್ಲೆಯ ಬೆನ್ನಿಕಟ್ಟಿ ಗ್ರಾಮದ ಟಗರು ಗುದ್ದಿದ ಕಾರಣ ಮೃತಪಟ್ಟಿವೆ.

ಟಗರುಗಳು ಸಾವನಪ್ಪಿದ ಕಾರಣ ಸಂಕಷ್ಟಕ್ಕೆ ಒಳಗಾದ ಮಾಲೀಕರಿಗೆ ‌ಜಾತ್ರಾ‌ ಸಮಿತಿ ಪರಿಹಾರ ನೀಡಿದೆ.

- Advertisement -

Latest News

error: Content is protected !!