Saturday, May 18, 2024
Homeಉತ್ತರ ಕನ್ನಡಕಾರವಾರ : ಅರಬ್ಬೀ ಸಮುದ್ರ ತೀರದಲ್ಲಿ ಎರಡು ಡಾಲ್ಫಿನ್ ಕಳೇಬರ ಪತ್ತೆ

ಕಾರವಾರ : ಅರಬ್ಬೀ ಸಮುದ್ರ ತೀರದಲ್ಲಿ ಎರಡು ಡಾಲ್ಫಿನ್ ಕಳೇಬರ ಪತ್ತೆ

spot_img
- Advertisement -
- Advertisement -

ಕಾರವಾರ: ಅರಬ್ಬಿ ಸಮುದ್ರ ತೀರದಲ್ಲಿ 2 ಡಾಲ್ಫಿನ್ ಕಳೇಬರಗಳು ಪತ್ತೆಯಾಗಿವೆ. 8 ವರ್ಷ ಮತ್ತು 30 ವರ್ಷದ ಡಾಲ್ಫಿನ್‌ಗಳ ಕಳೇಬರಗಳು ಕಾರವಾರದ ಮಾಜಾಳಿ ಮತ್ತು ಬೈತಖೋಲ್ ಕಡಲತೀರದಲ್ಲಿ ಪತ್ತೆಯಾಗಿವೆ.

ಒಂದು ಇಂಡೋ ಫೆಸಿಪಿಕ್ ಫಿನ್‌ಲೆಸ್ ಪೊರ್‌ಪೊಯ್ಸ್ ಪ್ರಭೇದದ ಅಪರೂಪದ ಡಾಲ್ಫಿನ್ ಆಗಿದ್ದು, ಬೋಟಿನ ಹೊಡೆತದಿಂದ ಆಂತರಿಕ ರಕ್ತಸ್ರಾವವಾಗಿ ಉಸಿರುಗಟ್ಟಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ‌

ಏಷ್ಯಾ, ಬಾಂಗ್ಲಾದೇಶ, ಭಾರತ, ಇಂಡೋನೇಷ್ಯಾ ಮತ್ತು ಮಲೇಶಿಯಾದಲ್ಲಿ ಕಾಣಸಿಗುವ ಅಪರೂಪದ ಡಾಲ್ಫಿನ್ ಪ್ರಬೇಧ ಇದಾಗಿದ್ದು, ಅರಬ್ಬೀ ಸಮುದ್ರ ವ್ಯಾಪ್ತಿಯಲ್ಲಿ ಇಂಡೋ ಪೆಸಿಫಿಕ್ ಡಾಲ್ಫಿನ್ ಮೊದಲ ಬಾರಿಗೆ ಕಂಡುಬಂದಿದೆ ಎಂದು ಹೇಳಲಾಗಿದೆ. ಇನ್ನೊಂದು ಇಂಡೋ ಫೆಸಿಫಿಕ್ ಹಂಪ್ ಬ್ಯಾಕ್ ಡಾಲ್ಫಿನ್ ಕಳೇಬರ ಅಲಿಗದ್ದಾ ಕಡಲತೀರದ ಬಳಿ ಪತ್ತೆಯಾಗಿದ್ದು 2.5 ಮೀ ಉದ್ದದ ಡಾಲ್ಫಿನ್ ಆಗಿದೆ. ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಈ ಡಾಲ್ಫಿನ್ ಕಳೇಬರ ಪತ್ತೆಯಾಗಿದೆ.

- Advertisement -
spot_img

Latest News

error: Content is protected !!