Saturday, June 6, 2026
Homeಕರಾವಳಿಉಸೇನ್ ಬೋಲ್ಟ್ ಖ್ಯಾತಿಯ ಕಂಬಳ ಓಟಗಾರ ಶ್ರೀನಿವಾಸ ಗೌಡ ಈಗ ಸಿನಿಮಾ ಹೀರೋ

ಉಸೇನ್ ಬೋಲ್ಟ್ ಖ್ಯಾತಿಯ ಕಂಬಳ ಓಟಗಾರ ಶ್ರೀನಿವಾಸ ಗೌಡ ಈಗ ಸಿನಿಮಾ ಹೀರೋ

- Advertisement -
- Advertisement -

ಬೆಂಗಳೂರು: ಉಸೇನ್ ಬೋಲ್ಟ್ ಖ್ಯಾತಿಯ ಕಂಬಳ ಓಟಗಾರ ಶ್ರೀನಿವಾಸ ಗೌಡ ಈಗ ಸಿನಿಮಾ ಹೀರೋ‌ ಆಗುತ್ತಿದ್ದಾರೆ.

ಎಸ್.ವಿ. ರಾಜೇಂದ್ರ ಸಿಂಗ್ ಬಾಬು‌ ನಿರ್ದೇಶನದ ವೀರ ಕಂಬಳ ಸಿನಿಮಾದಲ್ಲಿ ಶ್ರೀನಿವಾಸ ಗೌಡ ನಟಿಸುತ್ತಿದ್ದಾರೆ.

ಅರುಣ್ ರೈ ತೋಡಾರ್ ಅವರ ಎಆರ್ ಪ್ರೊಡಕ್ಷನ್ಸ್ ವೀರ ಕಂಬಳ ಸಿನಿಮಾವನ್ನು ನಿರ್ಮಿಸುತ್ತಿದೆ.

ಸಂಪೂರ್ಣ ಕಂಬಳದ ಕುರಿತಾದ ಸಿನಿಮಾದಲ್ಲಿ ಇಬ್ಬರು ಹೀರೋಗಳಿದ್ದು, ಸ್ವರಾಜ್ ಇನ್ನೊಬ್ಬ ಹೀರೋ ಆಗಿ ನಟಿಸುತ್ತಿದ್ದಾರೆ.

ಕನ್ನಡ, ತುಳು, ತೆಲುಗು, ತಮಿಳು, ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ವೀರ ಕಂಬಳ ಸಿನಿಮಾ ತೆರೆ ಕಾಣಲಿದೆ.

ಕಂಬಳ ಓಟಗಾರ ಶ್ರೀನಿವಾಸ ಗೌಡ ಮೂಡಬಿದಿರೆ ತಾಲೂಕಿನ ಅಶ್ವಥಪುರ ಗ್ರಾಮದವರಾಗಿದ್ದು, ಕಂಬಳ ಓಟದಲ್ಲಿ ದಾಖಲೆ ನಿರ್ಮಿಸಿದ್ದು ಉಸೇನ್ ಬೋಲ್ಟ್ ಎಂದೇ ಖ್ಯಾತರಾಗಿದ್ದಾರೆ.

- Advertisement -

Latest News

error: Content is protected !!